ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರೀ ಗಾತ್ರದ ಫೈಲ್‌ಗಳನ್ನು ಇಮೇಲ್‌ನಲ್ಲಿ ಕಳಿಸುವುದು ಹೇಗೆ?

Last Updated 7 ಆಗಸ್ಟ್ 2019, 7:50 IST
ಅಕ್ಷರ ಗಾತ್ರ

ಇಮೇಲ್ ಮೂಲಕ ಫೈಲ್‌ಗಳನ್ನು ಕಳುಹಿಸುವಾಗ ಅವು ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿನದ್ದಾಗಿದ್ದರೆ ಇಮೇಲ್ ಕಳಿಸಲು ಸಾಧ್ಯವಾಗುವುದಿಲ್ಲ. ಹೀಗಾದರೆ ಇಮೇಲ್ ಬದಲು ಇತರ ವಿಧಾನ ಬಳಸಿ ಫೈಲ್ ಶೇರ್ ಮಾಡಬಹುದು.

ಜಿಮೇಲ್, ಯಾಹೂ, ಎಂಎಸ್‍ಎನ್ ಒಂದೊಂದು ಇಮೇಲ್‍ಗಳು ಇಂತಿಷ್ಟು ಗಾತ್ರದ ಫೈಲ್‍ಗಳನ್ನು ಮಾತ್ರ ಕಳುಹಿಸಲು ಅನುಮತಿ ನೀಡುತ್ತದೆ. ಜಿಮೇಲ್‍ನಲ್ಲಿ ಮೇಲ್ ಕಳುಹಿಸುವುದಾದರೆ 25MB ಗಾತ್ರಕ್ಕಿಂತ ಹೆಚ್ಚಿರುವ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಗೂಗಲ್ ಡ್ರೈವ್ ಬಳಸಿ ಫೈಲ್ ಶೇರ್ ಮಾಡಬಹುದು.

ಹೀಗೆ ಮಾಡಿ

ಜೀಮೇಲ್ ಖಾತೆಗೆ ಲಾಗಿನ್ ಆಗಿ ಗೂಗಲ್ ಡ್ರೈವ್ ಓಪನ್ ಮಾಡಿ, ಅಲ್ಲಿ New ಆಪ್ಶನ್ ಕ್ಲಿಕ್ ಮಾಡಿ ಫೈಲ್ ಅಪ್‌ಲೋಡ್ ಮಾಡಿ. ಈಗ ಆ ಫೈಲ್ ನಿಮ್ಮ ಡ್ರೈವ್‌ನಲ್ಲಿರುತ್ತದೆ. ಫೈಲ್ ಮೇಲೆ ರೈಟ್ ಕ್ಲಿಕ್ ಮಾಡಿದರೆ Share ಆಪ್ಶನ್ ಕಾಣುತ್ತದೆ. ಅಲ್ಲಿ ನೀವು ಫೈಲ್ ಕಳುಹಿಸಬೇಕೆಂದಿರುವ ವ್ಯಕ್ತಿಯ ಇಮೇಲ್ ನಮೂದಿಸಿ ಫೈಲ್ ಶೇರ್ ಮಾಡಿ.

ಒಂದು ವೇಳೆ ಈ ರೀತಿ ಬೇಡ ಎಂದೆನಿಸಿದರೆ ಫೈಲ್‌ಗಳನ್ನು ವಿಭಜಿಸಿಯೂ ಇಮೇಲ್ ಕಳುಹಿಸಬಹುದು. ಉದಾಹರಣೆಗೆ 50MB ಗಾತ್ರದ ಫೈಲ್ ಆಗಿದ್ದರೆ ಒಟ್ಟಿಗೆ ಕಳುಹಿಸುವ ಬದಲು 10MB ಗಾತ್ರದ 5 ಭಾಗಗಳನ್ನಾಗಿ ವಿಭಜಸಿ ಇಮೇಲ್ ಮಾಡಬಹುದು.

ಇನ್ನುಳಿದಂತೆ ಈ ಕೆಲವು ಫೈಲ್ ಶೇರ್ ಸರ್ವೀಸ್‌ಗಳನ್ನು ಬಳಸಬಹುದುJump Share: 250MB ಗಾತ್ರದ ಫೈಲ್‍ಗಳನ್ನು ಉಚಿತವಾಗಿ ಕಳುಹಿಸಬಹುದು. ಇದಕ್ಕಿಂತ ಹೆಚ್ಚು ಗಾತ್ರ ಫೈಲ್‌ಗಳನ್ನು ಕಳುಹಿಸುವುದಾದರೆ ಈ ಸೇವೆಗೆ ಹಣ ಪಾವತಿ ಮಾಡಬೇಕು.

We Transfer: ಇದು ಕೂಡಾ ಉಚಿತ ಸೇವೆ

One Drive: ಮೈಕ್ರೊಸಾಫ್ಟ್ ಖಾತೆ ಹೊಂದಿದ್ದರೆ

OneDrive ಮೂಲಕ 5GB ವರೆಗಿನ ಗಾತ್ರದ ಫೈಲ್ ಅಪ್‌ಲೋಡ್ ಮಾಡಿ ಶೇರ್ ಮಾಡಬಹುದು.

Drop Box: 5 GB ಗಾತ್ರದ ಫೈಲ್ ಸೇವ್ ಮಾಡಬಹುದು, ಶೇರ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT