ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5G Service: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 5G ಬಳಸುವುದು ಹೇಗೆ?

5G ಸೇವೆಗಳು ಲಭ್ಯವಿರುವ ನಗರಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ 5G ಆ್ಯಕ್ಟಿವೇಟ್ ಮಾಡಿಕೊಳ್ಳಬೇಕು
Last Updated 10 ಅಕ್ಟೋಬರ್ 2022, 8:49 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಈಗಾಗಲೇ 5G ಸೇವೆಗೆ ಚಾಲನೆ ನೀಡಲಾಗಿದೆ.

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗಪುರ ಮತ್ತು ವಾರಾಣಸಿಯಲ್ಲಿ ಏರ್‌ಟೆಲ್ ಹಂತಹಂತವಾಗಿ 5G ಸೇವೆಯನ್ನು ಬಳಕೆದಾರರಿಗೆ ಒದಗಿಸುತ್ತಿದೆ.

ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ಐಡಿಯಾ ಕೂಡ 5G ಸೇವೆಯನ್ನು ಪ್ರಮುಖ ನಗರಗಳಲ್ಲಿ ಆರಂಭದಲ್ಲಿ ವಿಸ್ತರಿಸುತ್ತಿದೆ.

ಮುಂದಿನ ಹಂತದಲ್ಲಿ ಎಲ್ಲ ನಗರಗಳಲ್ಲೂ 5G ಸೇವೆ ದೊರೆಯಲಿದೆ.

5G ಆ್ಯಕ್ಟಿವೇಟ್ಮಾಡುವುದು ಹೇಗೆ?
ನಿಮ್ಮಲ್ಲಿ ಆ್ಯಂಡ್ರಾಯ್ಡ್ 5G ಸ್ಮಾರ್ಟ್‌ಫೋನ್ ಇದ್ದರೆ,
ಮೊದಲು ಸೆಟ್ಟಿಂಗ್ಸ್‌ ಓಪನ್ ಮಾಡಿ.
ನಂತರ ಮೊಬೈಲ್ ನೆಟ್‌ವರ್ಕ್ ಆಯ್ಕೆ ಮಾಡಿಕೊಳ್ಳಿ.
ಯಾವ ಸಿಮ್‌/ನೆಟ್‌ವರ್ಕ್‌ನಲ್ಲಿ ನೀವು 5G ಬಳಕೆ ಮಾಡಲು ಇಚ್ಚಿಸುವಿರೋ, ಅದನ್ನು ಸೆಲೆಕ್ಟ್ ಮಾಡಿ.
ಅದರಲ್ಲಿ, ‘Preferred network type’ ಎಂದಿರುವುದನ್ನು ಸೆಲೆಕ್ಟ್ ಮಾಡಿ.
ಬಳಿಕ, ಮೇಲ್ಭಾಗದಲ್ಲಿ 5G ಇರುವುದನ್ನು ಖಚಿತಪಡಿಸಿ, ಆಯ್ಕೆ ಮಾಡಿ.
ಬಳಿಕ ಫೋನ್ ರೀಸ್ಟಾರ್ಟ್ ಮಾಡಿ.
ನಿಮ್ಮ ಪ್ರದೇಶದಲ್ಲಿ 5G ನೆಟ್‌ವರ್ಕ್ ಇದ್ದರೆ, ಸ್ಮಾರ್ಟ್‌ಫೋನ್‌ನಲ್ಲಿ 5G ನೆಟ್‌ವರ್ಕ್ ಕಾಣಿಸಿಕೊಳ್ಳುತ್ತದೆ. ಏರ್‌ಟೆಲ್ ಈಗ ಇರುವ 4G ಸಿಮ್ ಮೂಲಕವೂ 5G ನೆಟ್‌ವರ್ಕ್ ಕಾರ್ಯನಿರ್ವಹಿಸಲಿದೆ.

ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಪರೀಕ್ಷಿಸಿಕೊಳ್ಳಿ.
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಟೆಲ್ ನೆಟ್‌ವರ್ಕ್ ಇದ್ದರೆ, ನಿಮ್ಮಲ್ಲಿ 5G ಲಭ್ಯತೆಯನ್ನು ಪರಿಶೀಲಿಸಬಹುದು.
ಏರ್‌ಟೆಲ್ ಆ್ಯಪ್ ತೆರೆಯಿರಿ.
ಬಳಿಕ, ಅದರಲ್ಲಿ ಇರುವ 5G ಬ್ಯಾನರ್ ಕ್ಲಿಕ್ ಮಾಡಿ ಅದರಲ್ಲಿನ ‘ಚೆಕ್ ಯುವರ್ ಫೋನ್ ಇಸ್ 5G ಎನೇಬಲ್ಡ್‘ ಆಯ್ಕೆ ಗಮನಿಸಿ.
ಈಗ, ಏರ್‌ಟೆಲ್ ಆ್ಯಪ್, ನಿಮ್ಮ ನಗರದಲ್ಲಿ 5G ಇದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿ ಹೇಳುತ್ತದೆ.
ಬಳಿಕ, ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಸಾಫ್ಟ್‌ವೇರ್ 5G ಬೆಂಬಲ ನೀಡುವುದೇ ಎಂದು ಪರೀಕ್ಷಿಸಬಹುದು.
5G ಇದ್ದಲ್ಲಿ, ಡಿವೈಸ್ 5G ರೆಡಿ ಮತ್ತು ನೆಟ್‌ವರ್ಕ್ ಲಭ್ಯತೆ ಇದೆ ಎನ್ನುವುದನ್ನು ಖಚಿತಪಡಿಸಿ.
ನಂತರ, ಸೆಟ್ಟಿಂಗ್ಸ್‌ಗೆ ಹೋಗಿ, ಫೋನ್ ನೆಟ್‌ವರ್ಕ್‌ನಲ್ಲಿ 5G ಸೆಲೆಕ್ಟ್ ಮಾಡಿ.

ಐಫೋನ್‌ನಲ್ಲಿ 5G ಬಳಸುವುದು ಹೇಗೆ?
ಐಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.
ಅದರಲ್ಲಿ ಮೊಬೈಲ್ ಡೇಟಾ ಎಂದಿರುವುದನ್ನು ಕ್ಲಿಕ್ ಮಾಡಿ.
ನಂತರ, ಮೊಬೈಲ್ ಡೇಟಾ ಆಪ್ಷನ್ಸ್ ಸೆಲೆಕ್ಟ್ ಮಾಡಿ, ಅದರಲ್ಲಿ ವಾಯ್ಸ್ ಮತ್ತು ಡೇಟಾ ಆಯ್ಕೆ ಮಾಡಿದೆ.
ಬಳಿಕ, 5G ಎಂದಿರುವುದನ್ನು ಆಯ್ಕೆ ಮಾಡಿ.

ಐಫೋನ್ 12 ಮತ್ತು ನಂತರದ ಮಾದರಿಗಳಲ್ಲಿ 5G ಲಭ್ಯವಾಗಲಿದೆ. ಅಲ್ಲದೆ, ಪ್ರಸ್ತುತ iOS 16.0.2 ಓಎಸ್ ಅಪ್‌ಡೇಟ್ ಇದ್ದು, ಮುಂದಿನ ಅಪ್‌ಡೇಟ್ ಜತೆಗೆ ದೇಶದಲ್ಲಿ ಆ್ಯಪಲ್, ಅರ್ಹ ಐಫೋನ್‌ಗಳಿಗೆ 5G ನೆಟ್‌ವರ್ಕ್ ಒದಗಿಸಲಿದೆ. ಶೀಘ್ರದಲ್ಲೇ ಅಪ್‌ಡೇಟ್ ಬಿಡುಗಡೆ ಮಾಡುವುದಾಗಿ ಆ್ಯಪಲ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT