ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಿಂದ ಕೆಲಸ; ಕಂಪ್ಯೂಟರ್‌ ಬಳಕೆದಾರರಿಗೆ ಎಚ್‌ಪಿಯಿಂದ ಉಚಿತ ರಿಮೋಟ್ ಸಹಕಾರ

Last Updated 24 ಏಪ್ರಿಲ್ 2020, 8:36 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ಮತ್ತು ಮಧ್ಯಮ ವ್ಯಹಾರಗಳ (ಎಸ್ಎಂಇ) ಬಳಕೆದಾರರು ಹಾಗೂ ಮನೆಯಿಂದಲೇ ಕಾರ್ಯನಿರ್ವಹಿಸುವವರಿಗೆ ಕಂಪ್ಯೂಟರ್‌ ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಉಚಿತವಾಗಿ ಪರಿಹರಿಸಿಕೊಳ್ಳಲು ಎಚ್‌ಪಿ ಇಂಡಿಯಾ ರಿಮೋಟ್‌ ಸಹಾಯವಾಣಿ ಆರಂಭಿಸಿದೆ.

ಎಲ್ಲ ಬ್ರ್ಯಾಂಡ್‌ ಕಂಪ್ಯೂಟರ್‌ಗಳಕಾರ್ಯನಿರ್ವಹಣಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಂಪನಿ ನೆರವಾಗಿದೆ. ಲಾಕ್‌ಡೌನ್‌ ಪರಿಣಾಮ ಲಕ್ಷಾಂತರ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳನ್ನು ನಡೆಸುವವರು ಹಾಗೂ ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಮಯದಲ್ಲಿ ಕಂಪ್ಯೂಟರ್‌ಗಳಲ್ಲಿ ಎದುರಾಗುವ ತಾಂತ್ರಿಕ ಸಮಸ್ಯೆಗಳನ್ನು ಪರಿಣಿತರು ರಿಮೋಟ್‌ ಸಹಾಯದಿಂದ ಮನೆಯ ಕಂಪ್ಯೂಟರ್‌ನೊಂದಿಗೆ ಸಂಪರ್ಕ ಪಡೆದು ಪರಿಹರಿಸಿಕೊಡುತ್ತಾರೆ.

ಸಾಮಾನ್ಯ ಬಳಕೆದಾರರಿಗೆ 2020ರ ಮೇ 31ರ ವರೆಗೂ ಈ ಸೇವೆ ಸಂಪೂರ್ಣ ಉಚಿತವಾಗಿ ಲಭ್ಯವಾಗಲಿದೆ. ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಬಳಕೆದಾರರಿಗೆ ನೋಂದಣಿ ಮಾಡಿಕೊಂಡ ದಿನದಿಂದ ಒಂದು ತಿಂಗಳವರೆಗೆ ಈ ಸೇವೆ ಲಭ್ಯವಾಗಲಿದೆ. ಹೆಲ್ಪ್ ಡೆಸ್ಕ್‌ನಲ್ಲಿ ಎಚ್‌ಪಿ ಪ್ರಮಾಣೀಕೃತ ತಾಂತ್ರಿಕ ಸಿಬ್ಬಂದಿ ಇರಲಿದ್ದು, ಅವರು ರಿಮೋಟ್ ಮೂಲಕ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಸೆಕ್ಯೂರಿಟಿ ಕಾನ್ಫಿಗರೇಷನ್, ಸಂಪರ್ಕ, ಆಪರೇಟಿಂಗ್ ಸಿಸ್ಟಂ, ಮೀಡಿಯಾ ಸಪೋರ್ಟ್, ಮೊಬಿಲಿಟಿ, ಸಾಫ್ಟ್‌ವೇರ್ ಆಪರೇಷನ್ ಮತ್ತು ಇನ್‌ಸ್ಟಲೇಷನ್‌ ಸೇರಿದಂತೆ ಇನ್ನೂ ಹಲವು ಸೇವೆಗಳನ್ನು ನೀಡಲಿದ್ದಾರೆ.

'ಕಾರ್ಪೊರೇಟ್ ಗಡಿಗಳನ್ನು ಮೀರಿ ಪ್ರತಿಯೊಬ್ಬ ಬಳಕೆದಾರರಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದೆ. ಇಂದಿನ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಅಧಿಕವಾಗಿದೆ ಮತ್ತು ಈ ಸಂದರ್ಭದಲ್ಲಿ ಅನಿರ್ಬಂಧಿತವಾಗಿ ಅವರಿಗೆ ದಿನದ 24 ಗಂಟೆಯೂ ಸೇವೆಯನ್ನು ಒದಗಿಸುವುದು ಹೆಲ್ಪ್‌ ಡೆಸ್ಕ್‌ನ ಉದ್ದೇಶವಾಗಿದೆ' ಎಂದು ಎಚ್‌ಪಿ ಇಂಕ್ ಇಂಡಿಯಾ, ಬಾಂಗ್ಲಾದೇಶ, ಶ್ರೀಲಂಕಾದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಅವಸ್ತಿ ತಿಳಿಸಿದರು.

ರಿಮೋಟ್ ಸೇವೆ ಪಡೆಯುವುದು ಹೇಗೆ?

hpindiaservices@hp.comಗೆ ಇಮೇಲ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಮತ್ತು ಮಾಹಿತಿಯನ್ನು ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ 1800 258 7140ಗೆ ಕರೆ ಮಾಡಿ ಸಹಮಾಹಿತಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT