ಶನಿವಾರ, ಫೆಬ್ರವರಿ 27, 2021
31 °C
ಹೊಸ ಪ್ರಯೋಗಕ್ಕೆ ಫೇಸ್‌ಬುಕ್‌ ಸಿದ್ಧತೆ

ಹೈಡ್‌ ಆಗಲಿರುವ ‘ಲೈಕ್‌’ ಮಾಹಿತಿ

ವಿಶ್ವನಾಥ ಎಸ್‌. Updated:

ಅಕ್ಷರ ಗಾತ್ರ : | |

Prajavani

I liked your pic it doesn't mean that

I literally like your pic.

It means I love that (puchuk) sound

when i press that like button.

ನೀನು ಪೋಸ್ಟ್‌ ಮಾಡಿದ್ದಕ್ಕೆಲ್ಲಾ ನಾನು ಲೈಕ್‌ ನೀಡುತ್ತಿರುವುದು ಅದನ್ನು ಮೆಚ್ಚಿದ್ದೇನೆ ಎಂದಲ್ಲ. ಲೈಕ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡುವಾಗ ಹೊರಬರುವ ಆ ಶಬ್ಧ ನನಗೆ ಬಹಳ ಇಷ್ಟ ಎನ್ನುವ ಕಾರಣಕ್ಕೆ ಲೈಕ್‌ ಒತ್ತುತ್ತೇನಷ್ಟೆ. ಇದು ಫೇಸ್‌ಬುಕ್‌ ಲೈಕ್‌ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಈಚೆಗೆ ಬಂದಿದ್ದ ಒಂದು ಜೋಕ್.

ಫೇಸ್‌ಬುಕ್‌ನಲ್ಲಿ ಒಂದು ಇಮೇಜ್‌, ವಿಡಿಯೊ ಅಥವಾ ಟೆಕ್ಸ್ಟ್‌ ಪೋಸ್ಟ್‌ ಮಾಡಿ ಅದಕ್ಕೆ ಎಷ್ಟು ಲೈಕ್‌, ಕಮೆಂಟ್‌ ಬರುತ್ತಿದೆ ಎಂದು ಕುತೂಹಲದಿಂದ ಪದೇ ಪದೇ ನೋಡುತ್ತಿರುತ್ತೇವೆ. ಹುಡುಗ ಪೋಸ್ಟ್ ಮಾಡಿದ್ದರೆ ಅದಕ್ಕೆ ಎಷ್ಟು ಹುಡುಗಿಯರು ಲೈಕ್‌ ಮಾಡಿದ್ದಾರೆ ಎನ್ನುವುದನ್ನು ತನ್ನ ಸ್ನೇಹಿತರ ಬಳಿ ಹೆಮ್ಮೆಯಿಂದ ತೋರಿಸುತ್ತಿರುತ್ತಾನೆ. ಈ ವಿಷಯದಲ್ಲಿ ಹುಡುಗಿಯರೂ ಹೊರತಾಗಿಲ್ಲ. ಇನ್ನು ಆತ್ಮೀಯರು, ಪರಿಚಯಸ್ಥರು, ಸಂಬಂಧಿಕರು ಎಷ್ಟು ಜನ ಲೈಕ್‌ ಒತ್ತುತ್ತಾರೆ ಎಂದೂ ಗಮನಿಸುತ್ತಿರುತ್ತಾರೆ. ‘ಎಲ್ಲರೂ ಲೈಕ್‌ ಮಾಡಿದಾರೆ, ಹಂಗಾಗಿ ಬೇಜಾರು ಮಾಡ್ಕೊಬಾರದು ಅನ್ನೊ ಕಾರಣಕ್ಕೆ ಲೈಕ್ ಒತ್ತಿದೆ ಮಗ’ ಅನ್ನೋರೂ ಬಹಳಷ್ಟು ಮಂದಿ ಇದ್ದಾರೆ.

ಇದೇನು ಕತೆ ಹೇಳುತ್ತಿದ್ದಾನೆ ಅಂದ್ಕೊಂಡ್ರಾ, ತಡೀರಿ ವಿಷ್ಯ ಇದೆ. ನೀವು ಹಾಕುವ ಪೋಸ್ಟ್‌ಗೆ ಯಾರೆಲ್ಲಾ ಲೈಕ್‌ ಮಾಡಿದ್ದಾರೆ ಎನ್ನುವ ಮಾಹಿತಿ ನಿಮ್ಮ ಸ್ನೇಹಿತರಿಗೆ ಸಿಗದೇ ಇರುವಂತೆ ಮಾಡಲು ಫೇಸ್‌ಬುಕ್‌ ಸಿದ್ಧತೆ ನಡೆಸುತ್ತಿದೆ. ಆಶ್ಚರ್ಯ ಆಯ್ತಾ. ಹೌದು ಸ್ನೇಹಿತರಿಗೆ ಲೈಕ್ ಮಾಹಿತಿ ಹೈಡ್‌ ಆಗುವಂತಹ ವ್ಯವಸ್ಥೆಯನ್ನು ಫೇಸ್‌ಬುಕ್‌ ರೂಪಿಸಿದ್ದು ಆಸ್ಟ್ರೇಲಿಯಾದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಟೈಮ್‌ಲೈನ್‌ ಮತ್ತು ನ್ಯೂಸ್‌ ಫೀಡ್‌ಗಳಲ್ಲಿ ಇದನ್ನು ಸಕ್ರಿಯಗೊಳಿಸಲಾಗಿದೆ. ಕೇವಲ ಅಲ್ಲಿಗಷ್ಟೇ ಸೀಮಿತವಾಗಲಿದೆಯೇ ಅಥವಾ ಎಲ್ಲೆಡೆಯೂ ಜಾರಿಗೆ ಬರಲಿದೆಯೇ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಫೇಸ್‌ಬುಕ್‌ ಹೇಳಿದೆ.

‘ಇದರಿಂದ ಬಳಕೆದಾರರ ಅನುಭವದಲ್ಲಿ ಯಾವ ರೀತಿಯ ಬದಲಾವಣೆ ಆಗುತ್ತದೆ ಎನ್ನುವುದನ್ನು ಸಂಗ್ರಹಿಸಲಾಗುವುದು’ ಎಂದು ಫೇಸ್‌ಬುಕ್‌ ವಕ್ತಾರ ತಿಳಿಸಿದ್ದಾರೆ. ಯಾರು ಪೋಸ್ಟ್‌ ಹಾಕುತ್ತಾರೊ ಅವರಿಗೆ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಎಷ್ಟು ಲೈಕ್‌ ಬಂದಿದೆ, ಯಾರೆಲ್ಲಾ ಲೈಕ್‌ ಮಾಡಿದ್ದಾರೆ ಎನ್ನುವುದೆಲ್ಲವೂ ನೋಡಬಹದು. ಆದರೆ, ಸ್ನೇಹಿತರು ಮತ್ತು ಫಾಲೊ ಮಾಡುವವರು ಕಂಮೆಂಟ್‌ಗಳನ್ನು ಮಾತ್ರವೇ ನೋಡಬಹುದಾಗಿದೆ.

ನಿಮ್ಮ ಪೋಸ್ಟ್‌ಗೆ ಎಷ್ಟು ಲೈಕ್‌ ಬಂದಿದೆ ಎನ್ನುವುದನ್ನು ನಿಮ್ಮ ಸ್ನೇಹಿತರು ನೋಡುವುದಕ್ಕಿಂತಲೂ ನೀವು ಏನನ್ನು ಶೇರ್‌ ಮಾಡಿದ್ದೀರಿ ಎನ್ನುವುದರ ಕಡೆಗೆ ಗಮನ ಹರಿಸುವಂತೆ ಮಾಡುವುದು ಇದರ ಉದ್ದೇಶ ಎಂದು ಹೇಳಿದೆ. ಕಡಿಮೆ ಲೈಕ್‌ ಬಂದಿದೆ ಎಂದಾಕ್ಷಣ ತಲೆಕೆಡಿಸಿಕೊಳ್ಳುವ, ಖಿನ್ನತೆಗೆ ಒಳಗಾಗುವ ವರ್ಗವೂ ಇದೆ. ಇದನ್ನು ತಪ್ಪಿಸಲೂ ಲೈಕ್‌ ಹೈಡ್‌ ಆಯ್ಕೆ ಪ್ರಯೋಜನಕಾರಿಯಾಗಬಹುದು.

ಇದನ್ನೂ ಓದಿ: ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ಇನ್‌ಸ್ಟಾಗ್ರಾಂ ಈಗಾಗಲೇ ಈ ಆಯ್ಕೆಯನ್ನು ಕೆನಡಾ, ಐರ್ಲೆಂಡ್, ಇಟಲಿ, ಜಪಾನ್‌, ಬ್ರೆಜಿಲ್‌, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಪ್ರಾಯೋಗಿಕವಾಗಿ  ಜಾರಿಗೊಳಿಸಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು