ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್, ಆ್ಯಂಡ್ರಾಯ್ಡ್ ಫೋನ್‌ಗೆ ಇಟಾಲಿಯನ್ ಸ್ಪೈವೇರ್ ಕಂಟಕ

Last Updated 24 ಜೂನ್ 2022, 5:10 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಇಟಲಿ ಮೂಲದ ಕಂಪನಿಯೊಂದು ಹ್ಯಾಕಿಂಗ್ ಟೂಲ್‌ಗಳನ್ನು ಬಳಸಿ ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮೇಲೆ ಬೇಹುಗಾರಿಕೆ ಮಾಡುತ್ತಿದೆ ಎಂದು ಗೂಗಲ್ ಹೇಳಿದೆ.

ಗೂಗಲ್‌ನ ಸೈಬರ್ ಬೆದರಿಕೆ ವಿಶ್ಲೇಷಣೆ ತಂಡ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ.

ಆರ್‌ಸಿಎಎಸ್ ಲ್ಯಾಬ್ ಅಭಿವೃದ್ಧಿಪಡಿಸಿರುವ ಸ್ಪೈವೇರ್, ಬಳಕೆದಾರರ ಅರಿವಿಗೆ ಬಾರದಂತೆಯೇ, ಅವರ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಿ, ಮಹತ್ವದ ಮಾಹಿತಿಗಳನ್ನು ಕಳ್ಳತನ ಮಾಡುವ ಭೀತಿಯಿದೆ.

ಇಸ್ರೇಲ್ ಮೂಲದ ಪೆಗಾಸಸ್ ಟೂಲ್‌ ಬಗ್ಗೆ ಚರ್ಚೆ ನಡೆದಿರುವಂತೆಯೇ, ಇಟಲಿಯ ಸ್ಪೈವೇರ್ ಬಗ್ಗೆ ಗೂಗಲ್ ಎಚ್ಚರಿಕೆ ನೀಡಿದೆ.

ಉದ್ಯಮಿಗಳು, ಮಾನವ ಹಕ್ಕು ಕಾರ್ಯಕರ್ತರು, ಪತ್ರಕರ್ತರು, ಅಕಾಡೆಮಿ ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಬೇಹುಗಾರಿಕೆ ಮಾಡುವ ಉದ್ದೇಶದಿಂದ ಸ್ಪೈವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ಗೂಗಲ್ ಮಾಹಿತಿ ಹಂಚಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT