Windows 11: ಮೈಕ್ರೋಸಾಫ್ಟ್ ತರುತ್ತಿದೆ ಹೊಸ ಓಎಸ್ ಅಪ್‌ಡೇಟ್

ಬೆಂಗಳೂರು: ಕಂಪ್ಯೂಟರ್ ಸಾಫ್ಟ್‌ವೇರ್ ಕ್ಷೇತ್ರದ ಪ್ರಮುಖ ಕಂಪನಿ, ಅಮೆರಿಕ ಮೂಲದ ಮೈಕ್ರೋಸಾಫ್ಟ್ ಹೊಸ ಕಾರ್ಯಾಚರಣೆ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.
ಮೈಕ್ರೋಸಾಫ್ಟ್ ಡೆವಲಪರ್ಸ್ ಸಮ್ಮೇಳನದಲ್ಲಿ ಜೂನ್ 24ರಂದು ಹೊಸ ಓಎಸ್, ‘ಮೈಕ್ರೋಸಾಫ್ಟ್ ವಿಂಡೋಸ್ 11’ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಹೊಸ ಓಎಸ್ ಮೂಲಕ ಅತ್ಯಾಧುನಿಕ ಫೀಚರ್ ಹೊಂದಿರುವ ವೈಶಿಷ್ಟ್ಯಗಳನ್ನು ಕೂಡ ಬಳಕೆದಾರರಿಗೆ ಒದಗಿಸುವುದು ಮೈಕ್ರೋಸಾಫ್ಟ್ ಉದ್ದೇಶವಾಗಿದೆ. ಜತೆಗೆ ಕೃತಕ ಬುದ‌್ಧಿಮತ್ತೆ ಮತ್ತು ಮೆಶಿನ್ ಲರ್ನಿಂಗ್ ತಂತ್ರಜ್ಞಾನ ಬೆಂಬಲಿಸುವ ಹೊಸ ಓಎಸ್ ಬಳಕೆದಾರರಿಗೆ ಲಭ್ಯವಾಗಲಿದೆ.
ಪ್ರಸ್ತುತ ವಿಂಡೋಸ್ 10 ಹೋಮ್ ಮತ್ತು ಪ್ರೊ ಆವೃತ್ತಿ ಹೆಚ್ಚು ಬಳಕೆಯಲ್ಲಿದ್ದು, ಹೊಸ ಮೈಕ್ರೋಸಾಫ್ಟ್ ವಿಂಡೋಸ್ 11 ಓಎಸ್ ಬಿಡುಗಡೆ ಜತೆಗೆ ಕಂಪನಿ ಲಾಂಛನ ವಿನ್ಯಾಸದಲ್ಲೂ ಹೊಸತನ ಪರಿಚಯಿಸುವ ಸಾಧ್ಯತೆಯಿದೆ.
Explainer: ಏನಿದು ಟ್ವಿಟರ್ ಬ್ಲೂಟಿಕ್? ಇದಕ್ಕೆ ಯಾಕಿಷ್ಟು ಮಹತ್ವ?
ಮೇ ತಿಂಗಳಿನಲ್ಲಿ ನಡೆದ ಡೆವಲಪರ್ಸ್ ಸಮ್ಮೇಳನದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಳ ಹೊಸ ಓಸ್ ಪರಿಚಯಿಸುವ ಕುರಿತು ಸುಳಿವು ನೀಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.