ಶುಕ್ರವಾರ, ಮೇ 20, 2022
21 °C

ಏರ್‌ಟೆಲ್ ಗ್ರಾಹಕರ ಮಾಹಿತಿ, ಆಧಾರ್ ವಿವರ ಸೋರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

airtel dh

ಬೆಂಗಳೂರು: ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸೇವಾ ಕಂಪನಿ ಏರ್‌ಟೆಲ್‌ನ 25 ಲಕ್ಷಕ್ಕೂ ಅಧಿಕ ಬಳಕೆದಾರರ ಆಧಾರ್ ವಿವರ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಡಿಜಿಟಲ್ ಕ್ಷೇತ್ರದಲ್ಲಿ ಬಳಕೆದಾರರ ವೈಯಕ್ತಿಕ ವಿವರ ಕಳ್ಳತನ ಮತ್ತು ಮಾರಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಜತೆಗೆ ಡಾಟಾ ಕದ್ದು ಮಾರಾಟ ಮಾಡುವುದು ಕೂಡ ನಡೆಯುತ್ತಿದೆ.

ಸೆಕ್ಯುರಿಟಿ ತಂತ್ರಜ್ಞಾನ ಪರಿಣತ ರಾಜಶೇಖರ್ ರಾಜಹರಿಯ ಟ್ವಿಟರ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಏರ್‌ಟೆಲ್‌ ಗ್ರಾಹಕರ ಫೋನ್ ನಂಬರ್, ವೈಯಕ್ತಿಕ ವಿವರ ಹಾಗೂ ಆಧಾರ್ ಮಾಹಿತಿ ಸೋರಿಕೆಯಾಗಿದೆ. ದಿ ರೆಡ್ ರಾಬಿಟ್ ಹೆಸರಿನ ಹ್ಯಾಕರ್‌ಗಳ ತಂಡ ಏರ್‌ಟೆಲ್ ಬಳಕೆದಾರರ ಮಾಹಿತಿ ಪಡೆದುಕೊಂಡಿದೆ. ಈ ಪೈಕಿ, ಛತ್ತೀಸ್‌ಗಢ, ನವದೆಹಲಿ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಮತ್ತು ರಾಜಸ್ಥಾನ ಹಾಗೂ ಇತರ ರಾಜ್ಯಗಳ ಗ್ರಾಹಕರ ವಿವರ ಸೋರಿಕೆಯಾಗಿದೆ.

ಹ್ಯಾಕರ್‌ಗಳು ಏರ್‌ಟೆಲ್‌ಗೆ ಈ ಸಂಬಂಧ ಹಣಕ್ಕಾಗಿ ಬೇಡಿಕೆಯಿರಿಸಿದ್ದು, ಸುಮಾರು $3,500 ಡಾಲರ್ ಅಂದರೆ, ₹2,55,294 ಕೇಳುತ್ತಿದ್ದಾರೆ. ಈ ಸಂಬಂಧ ಏರ್‌ಟೆಲ್ ಜತೆಗಿನ ಹ್ಯಾಕರ್‌ಗಳ ಮಾತುಕತೆ, ಚೌಕಾಶಿ ವಿವರವನ್ನು ಕೂಡ ರಾಜಶೇಖರ್ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: 

 

ಆದರೆ ಬಳಕೆದಾರರ ಮಾಹಿತಿ ಸೋರಿಕೆ ಮತ್ತು ಅವು ಹ್ಯಾಕರ್ಸ್ ಕೈಸೇರಿರುವುದನ್ನು ಏರ್‌ಟೆಲ್ ನಿರಾಕರಿಸಿದೆ. ಸೋರಿಕೆಯಾಗಿರುವ ಮಾಹಿತಿ ಏರ್‌ಟೆಲ್ ಕಂಪನಿಗೆ ಸೇರಿದ್ದಲ್ಲ, ಈ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಏರ್‌ಟೆಲ್ ಹೇಳಿದೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು