ಶನಿವಾರ, ಜನವರಿ 23, 2021
24 °C

ಪಬ್‌ಜಿ ಬದಲಿಗೆ ಬರುತ್ತಿದೆ ಬೆಂಗಳೂರು ಮೂಲದ ‘ಫೌಜಿ’: ಜ. 26ಕ್ಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

faug

ದೇಶದಲ್ಲಿ ಚೀನಾ ಮೂಲದ ಅ್ಯಪ್ ಮತ್ತು ಗೇಮ್ ನಿಷೇಧದ ಜತೆಗೇ ರದ್ದುಗೊಂಡಿದ್ದ ಜನಪ್ರಿಯ ‘ಪಬ್‌ಜಿ ಗೇಮ್’ ಬದಲಿಗೆ ಇದೀಗ ದೇಶೀಯ ಗೇಮ್ ‘ಫೌಜಿ’ ಬಿಡುಗಡೆಗೆ ಸಜ್ಜಾಗುತ್ತಿದೆ. ಗಣರಾಜ್ಯೋತ್ಸವದಂದು ಹೊಸ ದೇಶೀಯ ಗೇಮ್ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯುತ್ತದೆ ಮತ್ತು ದೇಶದ ಸಾರ್ವಭೌಮತೆ, ಭದ್ರತೆಗೆ ಧಕ್ಕೆ ತರುತ್ತದೆ ಎನ್ನುವ ಕಾರಣಕ್ಕಾಗಿ ಚೀನಾ ಮೂಲದ 200ಕ್ಕೂ ಅಧಿಕ ಅ್ಯಪ್‌ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಅದರ ಜತೆಗೇ ಚೀನಾ ಮೂಲದ ಟೆನ್ಸೆಂಟ್ ಸಂಸ್ಥೆಯ ಸರ್ವರ್ ನಿರ್ವಹಣೆ ಹೊಂದಿದ್ದ ಜನಪ್ರಿಯ ‘ಪಬ್‌ಜಿ’ ಗೇಮ್ ಕೂಡ ದೇಶದಲ್ಲಿ ನಿಷೇಧವಾಗಿದೆ. ಈ ಮಧ್ಯೆ ‘ಪಬ್‌ಜಿ’ ಬದಲಾಗಿ, ದೇಶದಲ್ಲಿ ಬೆಂಗಳೂರು ಮೂಲದ ಎನ್‌ಕೋರ್ ಸಂಸ್ಥೆ ಅಭಿವೃದ್ಧಿಪಡಿಸಿರುವ FAU-G ವಿಡಿಯೊ ಗೇಮ್ ಗಣರಾಜ್ಯೋತ್ಸವದ ಅವಧಿಯಲ್ಲಿ ಬಿಡುಗಡೆಯಾಗುತ್ತಿದೆ.

ದೇಶೀಯ ಗೇಮ್!

ಪಬ್‌ಜಿ ಗೇಮ್ ದೇಶದಲ್ಲಿ ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿತ್ತು. ಇದೀಗ ಅದರ ಜನಪ್ರಿಯತೆಯನ್ನು ಬಳಸಿಕೊಂಡು, ಪಬ್‌ಜಿ ಗೇಮ್ ಬದಲಾಗಿ ದೇಶದ ಆವೃತ್ತಿಯಾಗಿರುವ ‘ಫೌಜಿ’ ಗೇಮ್ ಬಿಡುಗಡೆಗೆ ಸಜ್ಜಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದಸರಾ ಅವಧಿಯಲ್ಲಿ ಹೊಸ ಗೇಮ್ ಕುರಿತು ‘ಎನ್‌ಕೋರ್’ ಗೇಮ್ಸ್ ಘೋಷಣೆ ಮಾಡಿತ್ತು.

ಬೆಂಗಳೂರಿನ ಕಂಪನಿ

ಎನ್‌ಕೋರ್ ಮೂಲತಃ ಬೆಂಗಳೂರಿನ ಕಂಪನಿಯಾಗಿದ್ದು, ನೂತನ ಗೇಮ್ ಅಭಿವೃದ್ಧಿಪಡಿಸುತ್ತಿದೆ. ಹೊಸ ‘ಫೌಜಿ’ ಗೇಮ್, ಫಿಯರ್‌ಲೆಸ್ ಆಂಡ್ ಯುನೈಟೆಡ್ ಗಾರ್ಡ್ಸ್ ಎಂಬ ಹೆಸರು ಹೊಂದಿದ್ದು, ಜನವರಿ 26ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಕಂಪನಿ ಟ್ವಿಟರ್ ಮೂಲಕ ವಿವರ ನೀಡಿದೆ.

ಸೈನಿಕರ ಕುಟುಂಬಕ್ಕೆ ದೇಣಿಗೆ

ಹೊಸ ‘ಫೌಜಿ’ ಗೇಮ್ ಮೂಲಕ ಬರುವ ಆದಾಯದಲ್ಲಿ ಶೇ 20 ಪಾಲನ್ನು ಕೇಂದ್ರ ಗೃಹ ಸಚಿವಾಲಯ ನಡೆಸುವ 'ಭಾರತ್ ಕೆ ವೀರ್' ಫೌಂಡೇಶನ್‌ಗೆ ನೀಡಲಾಗುತ್ತದೆ. ಆ ಮೂಲಕ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವ ಯೋಜನೆಯನ್ನು ‘ಫೌಜಿ’ ಗೇಮ್ ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು