ಶುಕ್ರವಾರ, ಜುಲೈ 30, 2021
23 °C

ಗೂಗಲ್,ಅಮೆಜಾನ್‌ನಲ್ಲಿ ಉತ್ಪನ್ನಗಳ ನಕಲಿ ವಿಮರ್ಶೆ: ಬ್ರಿಟನ್ ಅಧಿಕಾರಿಗಳಿಂದ ತನಿಖೆ

ಎ.ಪಿ Updated:

ಅಕ್ಷರ ಗಾತ್ರ : | |

ಆನ್‌ಲೈನ್‌ ಪ್ಲಾಟ್‌ಫಾರ್ಮ್‌– ಪ್ರಾತಿನಿಧಿಕ ಚಿತ್ರ

ಲಂಡನ್‌: ಗೂಗಲ್‌ ಮತ್ತು ಅಮೆಜಾನ್‌ ಆಡಳಿತಗಳು ವಿವಿಧ ಉತ್ನನ್ನ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ನಕಲಿ ವಿಮರ್ಶೆಗಳನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬ್ರಿಟನ್‌ನ ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಿಟನ್‌ನ ಕಾಂಪಿಟೇಷನ್‌ ಅಂಡ್ ಮಾರ್ಕೆಟ್‌ ಅಥಾರಿಟಿ ಅಧಿಕಾರಿಗಳು, ‘ಈ ಎರಡೂ ಕಂಪನಿಗಳು ಬ್ರಿಟನ್‌ನ ಗ್ರಾಹಕ ಕಾಯ್ದೆಯನ್ನು ಉಲ್ಲಂಘಿಸಿದ್ದು, ಗ್ರಾಹಕರ ಹಿತಾಸಕ್ತಿ ರಕ್ಷಿಸಲು ವಿಫಲವಾಗಿವೆ ಎಂಬ ಅಭಿಪ್ರಾಯವಿದೆ. ಅಧಿಕಾರಿಗಳು ಎರಡೂ ಸಂಸ್ಥೆಗಳಲ್ಲಿನ ಬಂದಿರುವ ನಕಲಿ ವಿಮರ್ಶೆಗಳ ಪರಿಶೀಲನೆ ನಡೆದಿದೆ’ ಎಂದು ತಿಳಿಸಿದ್ದಾರೆ.

‘ಆನ್‌ಲೈನ್‌ ಮೂಲಕ ಉತ್ಪನ್ನಗಳನ್ನು ಖರೀದಿಸುವ ಅಸಂಖ್ಯ ಗ್ರಾಹಕರಿಗೆ ತಪ್ಪು ಮಾಹಿತಿ, ಶಿಫಾರಸುಗಳ ಮೂಲಕ ವಂಚಿಸಲಾಗುತ್ತಿದೆ ಎಂಬುದೇ ನಮ್ಮ ಆತಂಕ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ಕುರಿತಂತೆ ಬ್ರಿಟನ್‌ನ ಅಧಿಕಾರಿಗಳ ಜೊತೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಗೂಗಲ್ ಮತ್ತು ಅಮೆಜಾನ್‌ ಪ್ರತಿಕ್ರಿಯಿಸಿವೆ. ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವ ಕ್ರಮವಾಗಿ ಅನಪೇಕ್ಷಿತ ವಿಮರ್ಶೆಗಳು ಕಾಣಿಸಿಕೊಳ್ಳದಂತೆ ನಾವು ಕ್ರಮವಹಿಸುತ್ತಿದ್ದೇವೆ ಎಂದು ಅಮೆಜಾನ್ ಈ ಕುರಿತ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು