ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೈಡೈವ್ ಮೂಲಕ ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂದ 104ರ ಅಜ್ಜಿ !

Published 6 ಅಕ್ಟೋಬರ್ 2023, 6:00 IST
Last Updated 6 ಅಕ್ಟೋಬರ್ 2023, 6:00 IST
ಅಕ್ಷರ ಗಾತ್ರ

ಚಿಕಾಗೊ: ಸಾಧನೆಗೆ ಅಥವಾ ಯಾವುದೇ ಆಸಕ್ತಿಕರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ವಯಸ್ಸು ಅಡ್ಡಿಯಾಗದು ಎಂದು ಈ ಹಿಂದೇ ಅನೇಕರು ತೋರಿಸಿಕೊಟ್ಟಿದ್ದಾರೆ. 

ಅಂಥಹದ್ದೇ ಒಂದು ಘಟನೆ ಚಿಕಾಗೊದಲ್ಲಿ ನಡೆದಿದೆ. 104 ವರ್ಷದ ಡೊರೊಥಿ ಹಾಫ್‌ನರ್‌ ಎನ್ನುವ ವೃದ್ಧೆಯೊಬ್ಬರು ವಿಮಾನದಿಂದ ಜಿಗಿದು ಸ್ಕೈಡೈವ್ ಮಾಡಿದ್ದಾರೆ. ಈ ಮೂಲಕ ಸ್ಕೈಡೈವ್ ಮಾಡಿದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಇದು ವಿನೋದಮಯವಾಗಿದೆ ಮತ್ತು ತುಂಬಾ ಸುಂದರವಾಗಿ ಕಾಣುತ್ತದೆ’ ಎಂದು ಹಾಫ್‌ನರ್‌ ಸ್ಕೈಡೈವ್ ಬಳಿಕ ಖುಷಿ ಹಂಚಿಕೊಂಡಿದ್ದಾರೆ.

ಸ್ಕೈಡೈವ್ ಚಿಕಾಗೊ ಇನ್‌ಸ್ಟಾಗ್ರಾಮ್‌ ಪುಟ ಇದರ ವಿಡಿಯೊವನ್ನು ಹಂಚಿಕೊಂಡಿದೆ. ‘104 ವರ್ಷದ ಸ್ನೇಹಿತೆಗೆ ಸ್ಕೈಡೈವ್ ಮಾಡಲು ಸಹಾಯ ಮಾಡಿದ್ದು ಸಂತಸ ನೀಡಿದೆ. ಯಾವ ಕೆಲಸಕ್ಕೂ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಕ್ಯಾಪ್ಶನ್‌ ನೀಡಲಾಗಿದೆ.

ಇದು ಮೊದಲ ಬಾರಿಯಲ್ಲ, 100ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಹಾಫ್‌ನರ್‌ ಸ್ಕೈಡೈವ್ ಅನುಭವವನ್ನು ಪಡೆದಿದ್ದರು. ಈ ಬಾರಿ ವಿಮಾನದಿಂದ ಹೊರಗೆ ಹಾರಿ ಸ್ಕೈಡೈವ್ ಮಾಡಿ ವಿಭಿನ್ನ ಅನುಭವ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

ಹಾಫ್‌ನರ್‌ ಅವರ ಸಾಧನೆ ಶೀಘ್ರವೇ ಗಿನ್ನಿಸ್‌ ವಿಶ್ವ ದಾಖಲೆ ಪಟ್ಟಿ ಸೇರಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಈ ಹಿಂದೆ 103 ವರ್ಷದ ವೃದ್ಧೆ ಸ್ಕೈಡೈವ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT