ಬೆಂಗಳೂರು: ಭಾರತೀಯ ಮೂಲದ ಕುಟುಂಬವೊಂದರ ಮದುವೆ ಕಾರ್ಯಕ್ರಮದ ವರನ ಮೆರವಣಿಗೆ (ಬ್ಯಾಂಡ್ ಬಾರಾತ್) ನ್ಯೂಯಾರ್ಕ್ನ ಜನನಿಬಿಡ ಹಾಗೂ ಪ್ರಮುಖ ಸ್ಟ್ರೀಟ್ ಆದ ವಾಲ್ ಸ್ಟ್ರೀಟ್ನಲ್ಲಿ ನಡೆದಿರುವುದು ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ಸುಮಾರು 400ಕ್ಕೂ ಹೆಚ್ಚು ಜನ ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಬ್ಯಾಂಡ್ ಹಾಗೂ ಡಿಜೆಯೊಂದಿಗೆ ಭಾರತೀಯ ಹಾಡುಗಳಿಗೆ ಜನ ಹೆಜ್ಜೆ ಹಾಕಿದ್ದಾರೆ.

'ಡಿಜೆಎಜೆ ಮುಂಬೈ' ಈ ಇವೆಂಟ್ ಅನ್ನು ಇತ್ತೀಚೆಗೆ ಆಯೋಜಿಸಿತ್ತು ಎನ್ನಲಾಗಿದೆ. ನ್ಯೂಯಾರ್ಕ್ನ ಲೋವರ್ ಮ್ಯಾನ್ಹಟನ್ ವಲಯದಲ್ಲಿ ಬರುವ ವಾಲ್ ಸ್ಟ್ರೀಟ್ನಲ್ಲಿ ಬ್ಯಾಂಡ್ ಭರಾತ್ ನಡೆದಿದೆ.

ವಾಲ್ ಸ್ಟ್ರೀಟ್ನ ಪ್ರಮುಖ ರಸ್ತೆಗಳಲ್ಲಿ ಈ ಮೆರವಣಿಗೆ ಸಾಗಿದೆ. ವಧು–ವರರು ಯಾರು ಎಂಬುದರ ಮಾಹಿತಿ ಬಹಿರಂಗವಾಗಿಲ್ಲ. ಮೆರವಣಿಗೆ ವೇಳೆ ಅಮೆರಿಕನ್ರು, ವಿದೇಶಿಯರು ಮೆರವಣಿಗೆ ನೋಡಿ ಸಂಭ್ರಮಪಟ್ಟಿದ್ದಲ್ಲದೇ ತಾವೂ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ನ್ಯೂಯಾರ್ಕ್ನ ವಾಲ್ ಸ್ಟ್ರೀಟ್ ಅಮೆರಿಕದ ಆರ್ಥಿಕ ರಾಜಧಾನಿ ಆಗಿದೆ. ಇಲ್ಲಿಯೇ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ಕಚೇರಿ ಹಾಗೂ ಇತರ ಪ್ರಮುಖ ಹಣಕಾಸು ಕಂಪನಿಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.