ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ, ಮಗು: ಒಂದೇ ರೀಲ್ಸ್ ವಿಡಿಯೊ– 92 ಮಿಲಿಯನ್‌ಗೂ ಅಧಿಕ ವೀಕ್ಷಣೆ!

ರೀಲ್ಸ್‌ನಲ್ಲಿ ಗಮನ ಸೆಳೆದ ಅಲಿಸಾ ಅಂಟೋನಿ
Published 8 ಜೂನ್ 2024, 14:54 IST
Last Updated 8 ಜೂನ್ 2024, 14:54 IST
ಅಕ್ಷರ ಗಾತ್ರ

ಬೆಂಗಳೂರು: ರೀಲ್ಸ್‌, ಶಾರ್ಟ್ಸ್‌ ಅಂತಹ ವೇದಿಕೆಗಳು ಅನೇಕ ಯುವಕ ಯುವತಿಯರಿಗೆ ತಮ್ಮ ಪ್ರತಿಭೆ ತೋರಿಸಲು ಮುಕ್ತ ವೇದಿಕೆಯಾಗುತ್ತಿವೆ. ಇಂದು ಅನೇಕರು ಇದರಿಂದಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ.

ಇನ್ನೂ ಕೆಲವರು ಇವುಗಳ ಮೇಲೆ ವಿಶೇಷ ಶ್ರಮವಹಿಸಿ ಕೆಲಸ ಮಾಡುವುದರಿಂದ ಮಿಲಿಯನ್‌ಗಟ್ಟಲೇ ವ್ಯೂವ್‌ಗಳನ್ನು ಪಡೆಯುತ್ತಾರೆ.

ಇದೇ ರೀತಿ ಯುವತಿಯೊಬ್ಬರು, ‘ಹುಡುಗಿ ಮದುವೆಯಾಗಿ, ಮಗು ಹೆತ್ತು, ನಂತರ ಅದನ್ನು ಜೋಪಾನ’ ಮಾಡುವ ಅತ್ಯಂತ ಕಷ್ಟದ ಹಾಗೂ ಧೀರ್ಘವಾದ ಸಮಯವನ್ನು ಕೇವಲ 1 ನಿಮಿಷದಲ್ಲಿ ಅತ್ಯಂತ ಸೊಗಸಾಗಿ ತೋರಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೇಳೆದಿದೆ.

Alishaanthony12 ಎಂಬ ಇನ್‌ಸ್ಟಾಗ್ರಾಂ ಅಕೌಂಟ್‌ನಿಂದ ಬಂದಿರುವ ಈ ವಿಡಿಯೊ ಬರೋಬ್ಬರಿ 92 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

ಅಲಿಸಾ ಅಂಟೋನಿ ಎನ್ನುವ ಯುವತಿಯೇ ಈ ವಿಡಿಯೊ ಮಾಡಿರುವುದು. ಆದರೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. Asoka ಹಿಂದಿ ಚಿತ್ರದ "San Sanana" ಹಾಡಿಗೆ ಅಲಿಸಾ ರೀಲ್ಸ್ ಮಾಡಿದ್ದಾರೆ. ರೀಲ್ಸ್ ವಿಡಿಯೊ ಎಡಿಟಿಂಗ್ ಹಾಗೂ ನಟನೆ ಮೂಲಕ ಹೆಚ್ಚು ಗಮನ ಸೆಳೆದಿದೆ. 72 ಸಾವಿರಕ್ಕೂ ಅಧಿಕ ಕಮೆಂಟ್‌ಗಳು, 3.7 ಮಿಲಿಯನ್‌ಗೂ ಅಧಿಕ ಶೇರಿಂಗ್ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT