ಲಾಕ್‌ಡೌನ್ ಅಂದ್ರೇನು ಗೊತ್ತಾ? ಆನಂದ್ ಮಹೀಂದ್ರಾ ಹೇಳೋದು ಕೇಳಿ...

ಬೆಂಗಳೂರು: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಉದ್ಯಮ ಸಮೂಹದ ಮುಖ್ಯಸ್ಥ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣ ಖಾತೆ ಬಳಕೆಯಲ್ಲಿ ಯಾವತ್ತೂ ಮುಂದಿರುತ್ತಾರೆ. ಸದಾ ಹೊಸ ವಿಚಾರಗಳನ್ನು ಜನರೊಡನೆ ಅವರು ಹಂಚಿಕೊಳ್ಳುತ್ತಿರುತ್ತಾರೆ.
ಆನಂದ್ ಮಹೀಂದ್ರಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟಿಕ್‌ಟಾಕ್ ವಿಡಿಯೊ ಒಂದನ್ನು ಪೋಸ್ಟ್ ಮಾಡುವ ಮೂಲಕ ಲಾಕ್‌ಡೌನ್ ಎಂದರೇನು ಎನ್ನುವುದನ್ನು ವಿವರಿಸಿದ್ದಾರೆ.
ಯುವಕನೋರ್ವ ಮನೆಬಾಗಿಲಿಗೆ ಇರುವ ಲಾಕ್‌ಗೆ ದಾರವೊಂದನ್ನು ಕಟ್ಟಿ ಅದನ್ನು ಕೆಳಗೆ ಇಳಿಸುವ ಆರು ಸೆಕೆಂಡ್‌ಗಳ ವಿಡಿಯೊ ಇದಾಗಿದ್ದು, ಅದರಲ್ಲಿ ಲಾಕ್‌ಡೌನ್ ಮಾಡುವುದು ಹೇಗೆ ಎಂದು ಯುವಕ ಹೇಳುತ್ತಾನೆ.
ಉದ್ಯೋಗ ಕೋರಿ 3D ವಿಡಿಯೊ ಅರ್ಜಿ ಸಲ್ಲಿಸಿದ ಯುವಕನಿಗೆ ಸಿಕ್ತು ಡ್ರೀಮ್ ಜಾಬ್!
ಇದೊಂದು ತಮಾಷೆ ವಿಡಿಯೊ ಆಗಿದ್ದು, ನಮಗೆ ಹಾಸ್ಯಪ್ರಜ್ಞೆ ಇರಬೇಕು ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಅಲ್ಲದೆ, ಪ್ರತಿ ರಾಜ್ಯಗಳ ನಾಯಕರು ಲಾಕ್‌ಡೌನ್ ಜಾರಿ ಮಾಡುವುದು ಮತ್ತು ಅದರಿಂದ ಏನು ಪ್ರಯೋಜನ ಎನ್ನುವ ಕುರಿತು ಚಿಂತಿಸಬೇಕು ಎಂಬ ಸಲಹೆಯನ್ನು ಅವರು ನೀಡಿದ್ದಾರೆ.
This is the silliest kind of joke possible—but I’m still glad that as a nation we have our sense of humour intact. And frankly, this is the perfect time to replay this when every state leader is trying to figure out how much to lower that lock! pic.twitter.com/jj1sDYGHZ1
— anand mahindra (@anandmahindra) June 6, 2021
ಈ ಪೋಸ್ಟ್‌ಗೆ ಜನರು ಪರ-ವಿರೋಧ ಅಭಿಪ್ರಾಯವನ್ನು ಟ್ವಿಟರ್ ಕಮೆಂಟ್ಸ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
ಆರ್ಡರ್ ಮಾಡಿದ್ದು ಕ್ರಿಸ್ಪಿ ಫ್ರೈಡ್ ಚಿಕನ್: ಬಂದಿದ್ದು ಫ್ರೈಡ್ ಕಿಚನ್ ಟವೆಲ್!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.