ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಬೈಕ್‌ನಲ್ಲಿ ಪಟಾಕಿ ಸಿಡಿಸುತ್ತಾ ಸಾಹಸಮಯ ವೀಲಿಂಗ್ ಸ್ಟಂಟ್!

Published 14 ನವೆಂಬರ್ 2023, 10:02 IST
Last Updated 14 ನವೆಂಬರ್ 2023, 10:02 IST
ಅಕ್ಷರ ಗಾತ್ರ

ತಿರುಚ್ಚಿ: ಯುವಕನೋರ್ವ ಬೈಕ್‌ನಲ್ಲಿ ಪಟಾಕಿ ಸಿಡಿಸುತ್ತಾ ಸಾಹಸಮಯ ವೀಲಿಂಗ್ ಸ್ಟಂಟ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬೈಕ್ ಸವಾರನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಕುರಿತು 'ಎನ್‌ಡಿಟಿವಿ' ವರದಿ ಮಾಡಿದೆ.

ಬೈಕ್‌ನ ಮುಂಭಾಗದಲ್ಲಿ ಹೆಡ್‌ಲೈಟ್ ಮತ್ತು ನಂಬರ್ ಪ್ಲೇಟ್ ಮಧ್ಯೆ ಪಟಾಕಿಯನ್ನುಇಡುತ್ತಾನೆ. ಬಳಿಕ ಪಟಾಕಿ ಸಿಡಿಸುತ್ತಾ ಅಪಾಯಕಾರಿ ಸ್ಟಂಗ್ ವೀಲಿಂಗ್ ಪ್ರದರ್ಶಿಸುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆ, ನಿರ್ಲಕ್ಷ್ಯ ವರ್ತನೆ ಹಾಗೂ ಸುರಕ್ಷತೆಗೆ ಧಕ್ಕೆ ತಂದಿರುವುದಕ್ಕೆ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT