ಬುಧವಾರ, ಸೆಪ್ಟೆಂಬರ್ 22, 2021
24 °C

ಬ್ರೆಜಿಲ್‌ನಲ್ಲಿ ಶಾಲೆಗೆ ಮರಳಿದ ಮಕ್ಕಳು; ಯುನಿಸೆಫ್ ಪೋಸ್ಟ್ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಿಧಾನವಾಗಿ ಸಹಜ ಜೀವನದತ್ತ ಮರಳುತ್ತಿರುವ ಬ್ರೆಜಿಲ್‌ನಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಈ ಸಂಬಂಧ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಫೇಸ್‌ಬುಕ್ ಪೋಸ್ಟ್‌ಗೆ ಜಗತ್ತಿನ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕ್ಲಾಸ್ ರೂಮ್ ಚಿತ್ರವನ್ನು ಹಂಚಿರುವ ಯುನಿಸೆಫ್, ಆರು ವರ್ಷ ಹರೆಯದ ಬಾಲಕಿಯ ಮುಖದಲ್ಲಿನ ಮಂದಹಾಸವನ್ನು ಬಿತ್ತರಿಸಿದೆ.

ಇದನ್ನೂ ಓದಿ: 

ಫೇಸ್‌ಬುಕ್‌ನಲ್ಲಿ ಯುನಿಸೆಫ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಲೈಕ್ಸ್, 9 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಹಾಗೂ 7.5 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ.

ಕೊರೊನಾ ವೈರಸ್ ಪಿಡುಗಿನಿಂದಾಗಿ ಕಳೆದ ಒಂದು ವರೆ ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಶಾಲೆಗಳನ್ನು ಮುಚ್ಚಲಾಗಿದೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ ವಿದೇಶ ರಾಷ್ಟ್ರಗಳಲ್ಲೂ ಅತಿ ಹೆಚ್ಚಿನ ಪರಿಣಾಮ ಬೀರಿದೆ.

ಮಕ್ಕಳು ವ್ಯಾಸಂಗವನ್ನು ಮುಂದುವರಿಸಲು ಆದಷ್ಟು ಬೇಗ ಶಾಲೆಗೆ ಮರಳುವಂತಾಗಬೇಕು. ಈ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದು ಯುನಿಸೆಫ್ ಹೇಳಿದೆ.

19 ರಾಷ್ಟ್ರಗಳ 15.6 ಕೋಟಿ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಯುನಿಸೆಫ್ ವರದಿಯು ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಮಕ್ಕಳು ಶಾಲೆಗೆ ತೆರಳಲಾಗದೇ ಮಾನಸಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಮಕ್ಕಳ ಶೈಕ್ಷಣಿಕ ವರ್ಷವು ಆನ್‌ಲೈನ್ ಕ್ಲಾಸ್ ಅನ್ನು ಅವಲಂಬಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು