ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಮರಿಗಳನ್ನು ಸಾಕುತ್ತಿದೆ ಲ್ಯಾಬ್ರಡಾರ್; ನಾಯಿ ಪ್ರೀತಿಗೆ ನೆಟ್ಟಿಗರು ಸಲಾಂ

ಅಕ್ಷರ ಗಾತ್ರ

ಪ್ರೀತಿ ಎಲ್ಲಾ ಗಡಿಗಳನ್ನು ಮೀರುತ್ತದೆ ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ನಾಯಿಯ ವಿಡಿಯೊ ಇದಕ್ಕೆ ಸಾಕ್ಷಿಯಾಗಿದೆ.

ತಾಯಿಯಿಂದ ಬೇರ್ಪಟ್ಟಿರುವ ಮೂರು ಹುಲಿ ಮರಿಗಳನ್ನು ಲ್ಯಾಬ್ರಡಾರ್‌ ನಾಯಿಯೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಹುಲಿ ಮರಿಗಳು ಮತ್ತು ಸಾಕು ತಾಯಿಯ ನಡುವಿನ ಬಾಂಧವ್ಯ ನೋಡುಗರನ್ನು ಬೆರಗುಗೊಳಿಸಿದೆ.

ಈ ವಿಡಿಯೊವನ್ನು ಚೀನಾದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಹುಲಿ ಮರಿಗಳು ನಾಯಿಯ ಸುತ್ತ ಆಟವಾಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಹುಟ್ಟಿದ ಕೂಡಲೇ ಈ ಮರಿಗಳಿಗೆ ಆಹಾರ ನೀಡಲು ನಿರಾಕರಿಸಿದ ತಾಯಿ (ಹುಲಿ) ಅವುಗಳನ್ನು ಬಿಟ್ಟು ಹೋಗಿದೆ.

‘ಎ ಪೀಸ್ ಆಫ್ ನೇಚರ್’ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಇದುವರೆಗೆ 1.12 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. 6 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ.


ಸದ್ಯ ಈ ವಿಡಿಯೊ ಶ್ವಾನ ಪ್ರಿಯರ ಗಮನ ಸೆಳೆದಿದೆ. ‘ಇದು ಲ್ಯಾಬ್ರಡಾರ್‌ನ ಶುದ್ಧ ಆಶೀರ್ವಾದ’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.

‘ಹುಲಿ ಮತ್ತು ನಾಯಿ ವಿಭಿನ್ನ ಜಾತಿಗಳು. ಆದರೆ, ಪ್ರೀತಿ ಒಂದೇ ಆಗಿರುತ್ತದೆ’ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.

ಹೆಣ್ಣು ಹುಲಿ ತನ್ನ ಮರಿಗಳಿಂದ ದೂರ ಉಳಿದಿರುವುದು ಹೊಸ ಸಂಗತಿಯೇನಲ್ಲ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಎಸಿ) ತಿಳಿಸಿದೆ.

ಎನ್‌ಟಿಎ ಪ್ರಕಾರ ತಾಯಿ ಹುಲಿಯು ಸಾವಿನ ಹೊರತಾಗಿ, ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಅವುಗಳನ್ನು ತ್ಯಜಿಸುತ್ತದೆ.

ಕೆಲವು ಹೆಣ್ಣು ಹುಲಿಗಳು ಗಾಯಗೊಂಡಿದ್ದು, ಆಹಾರ ನೀಡಲು ಅಸಮರ್ಥತೆಯಿಂದ ಕೂಡಿದ್ದರೆ ತಮ್ಮ ಮರಿಗಳನ್ನು ಬಿಟ್ಟು ಹೋಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT