ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈನ ಬೀದಿಗಳಲ್ಲಿ ಹಣದ ಮಳೆ ಸುರಿಸಿದ ಫ್ಲಿಪ್‌ಕಾರ್ಟ್ ವ್ಯಾನ್! ವಿಡಿಯೊ ನೋಡಿ

ನಾಳೆಯಿಂದ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ ಆರಂಭ
Published 7 ಅಕ್ಟೋಬರ್ 2023, 6:25 IST
Last Updated 7 ಅಕ್ಟೋಬರ್ 2023, 6:25 IST
ಅಕ್ಷರ ಗಾತ್ರ

ಬೆಂಗಳೂರು: ಈ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ನಾಳೆಯಿಂದ (ಅ.8) ತನ್ನ ಬಿಗ್ ಬಿಲಿಯನ್ ಡೇಸ್ ಸೇಲ್‌ ಅನ್ನು ಆರಂಭಿಸಲಿದೆ. ಈಗಾಗಲೇ ಇದಕ್ಕೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದೆ.

ಸಾಕಷ್ಟು ಆಕರ್ಷಕ ಜಾಹೀರಾತುಗಳೊಡನೆ ಈ ಸಾರಿ ಫ್ಲಿಪ್‌ಕಾರ್ಟ್‌ ಬಿಬಿಡಿ ಅನ್ನು ದಾಖಲೆ ಮಾಡಲು ಎದುರು ನೋಡುತ್ತಿದೆ.

ಅತ್ತ ಮುಂಬೈ ಗೇಟ್‌ವೇ ಬೀದಿ ಸೇರಿದಂತೆ ಕೆಲ ಬೀದಿಗಳಲ್ಲಿ ಫ್ಲಿಪ್‌ಕಾರ್ಟ್‌ ವಾಹನವೊಂದು ₹ 2000 ನೋಟುಗಳನ್ನು ಗಾಳಿಯಲ್ಲಿ ಮಳೆ ಸುರಿಸಿದಂತೆ ಸುರಿಸಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

ಈ ಬಗ್ಗೆ ಹಲವರು ಏನಾಗುತ್ತಿದೆ? ಮುಂಬೈ ಬೀದಿಯಲ್ಲಿ ಎಂದು ಪ್ರಶ್ನಿಸಿದ್ದಾರೆ. ಬಿಬಿಡಿ ಪ್ರಚಾರ್ಥವಾಗಿ ಫ್ಲಿಪ್‌ಕಾರ್ಟ್ ಈ ರೀತಿ ಮಾಡಿತೇ? ಅಥವಾ ಆಕಸ್ಮಿಕವೇ? ಎಂದು ಹಲವರು ಚರ್ಚಿಸುತ್ತಿದ್ದಾರೆ.

ಈ ಬಗ್ಗೆ ವಿಡಿಯೊ ಹಂಚಿಕೊಂಡಿರುವ ಫ್ಲಿಪ್‌ಕಾರ್ಟ್, ನಿಮ್ಮ ಪ್ರಶ್ನೆಗಳ ಮಹಾಪೂರಕ್ಕೆ ನಮ್ಮ ಇನ್‌ಬಾಕ್ಸ್ ತುಂಬಿದೆ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಲಿದ್ದೇವೆ ಎಂದು ತಿಳಿಸಿದೆ.

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್‌ ಅಭಿಯಾನ ಅಕ್ಟೋಬರ್ 8 ರಿಂದ 15ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT