ಶನಿವಾರ, ಸೆಪ್ಟೆಂಬರ್ 18, 2021
26 °C

ಇದು ಚಿನ್ನದ ವಡಾ ಪಾವ್! ಬೆಲೆ ಎಷ್ಟು ಗೊತ್ತಾ?

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯರ ಇಷ್ಟದ ತಿನಿಸು ‘ವಡಾ ಪಾವ್‘ ಈಗ ವಿದೇಶಗಳಲ್ಲೂ ಜನಪ್ರಿಯ. ಅದರಲ್ಲೂ ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಂತೂ ಬೀದಿ ಬದಿಯಲ್ಲೂ ಇದನ್ನು ಮಾರುತ್ತಾರೆ.

ಭಾರತೀಯರೇ ಹೆಚ್ಚಾಗಿ ಇರುವ ದುಬೈನಲ್ಲಿ ವಡಾ ಪಾವ್ ದಿನದಿಂದ ದಿನಕ್ಕೆ ಪ್ರಖ್ಯಾತಿ ಪಡೆಯುತ್ತಿದ್ದು, ಹೋಟೆಲ್ ಒಂದರಲ್ಲಿ ಇದಕ್ಕೆ ವಿಶೇಷ ರೂಪ ಕೊಟ್ಟು ಅಲ್ಲಿ ಇನ್ನಷ್ಟು ಜನಪ್ರಿಯಗೊಳಿಸಿದ್ದಾರೆ.

ದುಬೈನಲ್ಲಿ 22 ಕ್ಯಾರೆಟ್ ಚಿನ್ನ ಲೇಪಿತ ವಡಾ ಪಾವ್ ತಯಾರಿಸಲಾಗಿದ್ದು, ಇದು ವಿಶ್ವದ ಮೊದಲ ಚಿನ್ನದ ವಡಾ ಪಾವ್ ಎನ್ನಲಾಗಿದೆ. ಇದರ ಬೆಲೆ ಸುಮಾರು ₹2000 ಇದ್ದು, ಗ್ರಾಹಕರೊಬ್ಬರು ಇದನ್ನು ಖರೀಧಿಸಿ ತಿಂದು, ವಿಡಿಯೊ ಮಾಡಿ ಟಿಕ್‌ಟಾಕ್‌ಗೆ ಹಾಕಿದ್ದಾರೆ.

ಚಿನ್ನ ಲೇಪಿತ ಹಾಳೆಯನ್ನು ಆಲೂಬೊಂಡಾದ ಮೇಲೆ ಅಂಟಿಸಿ ವಿಶಿಷ್ಠವಾಗಿ ಇದನ್ನು ಮಾರಾಟ ಮಾಡಲಾಗಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹವಾ ಸೃಷ್ಟಿಸಿದೆ.

 

ಇದನ್ನೂ ಓದಿ: ಮಡಿದ ಗಂಡನ ನೆನಪಿಗಾಗಿ ದೇವಸ್ಥಾನ ಕಟ್ಟಿದ ಮಹಿಳೆಯಿಂದ ನಿತ್ಯ ಪೂಜೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು