ಮಂಗಳವಾರ, ಜೂನ್ 28, 2022
28 °C

ವಧುವಿನ ಪಾದ ಮುಟ್ಟಿ ಆಶೀರ್ವಾದ ಪಡೆದ ವರ; ಕಾರಣವೇನು ಬಲ್ಲೀರಾ?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭಾರತೀಯ ಸಾಂಪ್ರದಾಯದಂತೆ ವಿವಾಹ ದಿನದಂದು ಸಾಮಾನ್ಯವಾಗಿ ವಧು ವರನ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾಳೆ. ಆದರೆ ಇಲ್ಲೊಂದು ವಿಚಿತ್ರ ಸನ್ನಿವೇಶದಲ್ಲಿ ವರ ವಧುವಿನ ಪಾದಕ್ಕೆ ನಮಸ್ಕರಿಸಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: 

ಇದಕ್ಕೆ ಕಾರಣವನ್ನು ನೀಡಿರುವ ವರ, ಆಕೆ ನನ್ನ ವಂಶಾವಳಿಯನ್ನು ಮುಂದುವರಿಸಲಿದ್ದು, ನನಗೆ ತಂದೆಯಾಗುವ ಖುಷಿಯನ್ನು ನೀಡಲಿದ್ದಾರೆ. ಆಕೆ ನನ್ನ ಹೆತ್ತವರನ್ನು ಗೌರವಿಸಲಿದ್ದಾರೆ. ನನ್ನ ಮನೆಗೆ ಲಕ್ಷ್ಮೀಯನ್ನು (ಸಂಪತ್ತನ್ನು) ತರಲಿದ್ದಾರೆ. ಹೆರಿಗೆ ಸಮಯದಲ್ಲಿ ನನ್ನ ಮಗುವಿಗಾಗಿ ಜೀವನ್ಮರಣದ ಮಧ್ಯೆ ಹೋರಾಡಲಿದ್ದಾರೆ. ಆಕೆ ತನ್ನ ಕುಟುಂಬವನ್ನು ಬಿಟ್ಟು ನನ್ನ ಕುಟುಂಬದೊಂದಿಗೆ ಹೊಸ ಬಾಂಧವ್ಯವನ್ನು ರೂಪಿಸಿಕೊಳ್ಳಲಿದ್ದಾರೆ. ಆಕೆ ಇದನ್ನೆಲ್ಲ ಮಾಡುವಾಗ, ನಾನು ಸ್ವಲ್ಪ ಗೌರವವನ್ನು ನೀಡಲು ಸಾಧ್ಯವಿಲ್ಲವೇ? ಮಹಿಳೆಯರ ಪಾದಗಳಿಗೆ ನಮಸ್ಕರಿಸುವುದು ಹಾಸ್ಯಾಸ್ಪದವಾಗಿ ಅನಿಸುತ್ತಿದೆಯೇ? ಆದರೆ ಈ ವಯಸ್ಸಿನಲ್ಲಿ ನಾನಿದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

 

 

 

ಡಾ. ಅಜಿತ್ ವರ್ವಾಂದ್ಕರ್ ಎಂಬವರು ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೂ ವರನ ಉತ್ತರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪತ್ನಿಗೆ ಗೌರವ ತೋರಿಸಿದ್ದಕ್ಕಾಗಿ ಅನೇಕ ಬಳೆಕದಾರರು ವರನನ್ನು ಶ್ಲಾಘಿಸಿದರೆ, ಇನ್ನು ಕೆಲವರು ವಿವಾಹದಲ್ಲಿ ಸಮಾನತೆಯ ಹಕ್ಕನ್ನು ಪ್ರತಿಪಾದಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು