ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಫೈನಲ್ ಪಂದ್ಯದಲ್ಲಿ ಕೆಜಿಎಫ್ 2 ಹಾಡಿಗೆ ಕುಣಿದು ಸಂಭ್ರಮಿಸಿದ ಜನ

ಅಕ್ಷರ ಗಾತ್ರ

ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಎಲ್ಲರ ಹುಬ್ಬೇರಿಸುವಂತಹ ಗಳಿಕೆ ಮಾಡಿರುವುದು ಹಳೆಯ ಸುದ್ದಿ.

ಅದೇ ಕೆಜಿಎಫ್ 2 ಚಿತ್ರದ ಹಾಡನ್ನು ಟಾಟಾ ಐಪಿಎಲ್ 2022 ಫೈನಲ್ ಪಂದ್ಯದ ವೇಳೆ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಕಲಾಗಿತ್ತು.

ಕೆಜಿಎಫ್‌ 2 ಸಿನಿಮಾದ ಜನಪ್ರಿಯ ಹಿನ್ನೆಲೆ ಸಂಗೀತವನ್ನು ಬಣ್ಣ ಬಣ್ಣದ ಬೆಳಕಿನ ಸಂಯೋಜನೆಯೊಂದಿಗೆ ಕ್ರೀಡಾಂಗಣದಲ್ಲಿ ಪ್ರಸಾರ ಮಾಡುತ್ತಲೇ ಜನರು ಮೋಡಿಗೆ ಒಳಗಾದವರಂತೆ ಹುಚ್ಚೆದ್ದು ಕುಣಿದಿದ್ದಾರೆ.

ಮೊಬೈಲ್ ಫ್ಲ್ಯಾಶ್ ಲೈಟ್ ಆನ್ ಮಾಡಿ ತಮ್ಮ ಇರುವಿಕೆಯನ್ನು ಜನರು ತೋರಿಸಿದ್ದು, ಅದರ ವಿಡಿಯೊ ವೈರಲ್ ಆಗಿದೆ.

ಕೆಜಿಎಫ್ ಚಾಪ್ಟರ್ 2 ಟ್ವಿಟರ್ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಜೂನ್ 3ರಿಂದ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT