ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

G7 Summit: ಜಾಗತಿಕ ನಾಯಕರನ್ನು ನಮಸ್ಕರಿಸಿ ಸ್ವಾಗತಿಸಿದ ಇಟಲಿ ಪ್ರಧಾನಿ ಮೆಲೋನಿ

Published 14 ಜೂನ್ 2024, 5:40 IST
Last Updated 14 ಜೂನ್ 2024, 5:40 IST
ಅಕ್ಷರ ಗಾತ್ರ

ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಜಿ7 ಶೃಂಗಸಭೆಗೆ ಆಗಮಿಸಿದ ಜಾಗತಿಕ ನಾಯಕರನ್ನು ಹಸ್ತಲಾಘವದ ಬದಲು ಕೈ ಮುಗಿದು ನಮಸ್ತೆ ಎನ್ನುವ ಮೂಲಕ ಸ್ವಾಗತಿಸಿದ್ದಾರೆ. 

ಮೆಲೋನಿ ಅವರು ವಿವಿಧ ದೇಶದ ನಾಯಕರಿಗೆ ನಮಸ್ತೆ ಮಾಡುವ ಮೂಲಕ ಸ್ವಾಗತಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಇಟಲಿಯು ಈ ವರ್ಷದ G7 ಶೃಂಗಸಭೆಯನ್ನು ಆಯೋಜಿಸುತ್ತಿದ್ದು, ಜೂನ್ 13-15ರವರೆಗೆ ಇಟಲಿಯ ಅಪುಲಿಯಾ ನಗರದಲ್ಲಿ ನಡೆಯುತ್ತಿದೆ.

ಜರ್ಮನಿಯ ಚಾನ್ಸಲರ್‌ ಓಲಾಫ್ ಸ್ಕೋಲ್ಜ್, ಯುರೋಪಿಯನ್‌ ಕಮಿಷನ್‌ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಸೇರಿದಂತೆ ಹಲವರಿಗೆ ಮೆಲೋನಿ ಅವರು ನಮಸ್ತೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಇಟಲಿ ತಲುಪಿದ್ದು, ಶೃಂಗಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT