ವಾಷಿಂಗ್ಟನ್: 2024ರ ಜುಲೈನಲ್ಲಿ ನಡೆದ ಉದ್ಯಮಿ ಅಂಬಾನಿ ಕುಟುಂಬದ ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಅಮೆರಿಕದ ಸೆಲೆಬ್ರಿಟಿ ರೂಪದರ್ಶಿ ಮತ್ತು ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಷಿಯಾನ್ ಮತ್ತು ಅವರ ಸಹೋದರಿ ಖ್ಲೋ ಕರ್ದಷಿಯಾನ್ ಭಾಗಿಯಾಗಿದ್ದರು.

ಆದರೆ ಅಸಲಿಗೆ ಅಂಬಾನಿ ಯಾರು ಎಂದೇ ನನಗೆ ಗೊತ್ತಿರಲಿಲ್ಲ ಎಂದು ಕಿಮ್ ಹೇಳಿದ್ದು ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

‘ಮದುವೆಯ ಆಮಂತ್ರಣ ಪತ್ರಿಕೆ ಬಂದಾಗ ಅಚ್ಚರಿಯಾಗಿತ್ತು’ ಎಂದು ಕಿಮ್ ಹೇಳಿರುವುದಾಗಿ ವರದಿಗಳನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ನಲ್ಲಿ ವರದಿಯಾಗಿದೆ.

‘ಅಂಬಾನಿ ಕುಟುಂಬದ ಸ್ನೇಹಿತೆಯೊಬ್ಬರು ನಮಗೂ ಸ್ನೇಹಿತೆಯಾಗಿದ್ದರು. ಆಭರಣ ವಿನ್ಯಾಸಗಾರ್ತಿ ಲೋರೆನ್ ಶ್ವಾರ್ಟ್ಜ್ ನಮ್ಮ ಉತ್ತಮ ಸ್ನೇಹಿತೆ. ಲೋರೆನ್ ಅಂಬಾನಿ ಕುಟುಂಬದ ಮದುವೆಯಲ್ಲಿ ಆಭರಣಗಳ ವಿನ್ಯಾಸ ಮಾಡಿದ್ದರು. ಲೋರೇನ್ ನಮ್ಮ ಬಳಿ ಬಂದು ಮದುವೆಗೆ ಹೋಗುತ್ತಿರುವ ಬಗ್ಗೆ ಮತ್ತು ಅಂಬಾನಿ ಕುಟುಂಬ ನಮ್ಮನ್ನೂ ಆಹ್ವಾನಿಸಲು ಬಯಸುತ್ತಿರುವ ಕುರಿತು ಹೇಳಿದರು. ನಾವೂ ಅವರೊಂದಿಗೆ ತೆರಳಿದೆವು’ ಎಂದು ಹೇಳಿದ್ದಾರೆ.

ಕಿಮ್ ಸಹೋದರಿ ಆಮಂತ್ರಣ ಪತ್ರಿಕೆಯ ಬಗ್ಗೆ ಮಾತನಾಡಿ, ‘ಪತ್ರಿಕೆ ಸುಮಾರು 18–20 ಕೆ.ಜಿಯಷ್ಟು ತೂಕವಿತ್ತು. ಅದನ್ನು ತೆರೆದಾಗ ಸಂಗೀತ ಹೊರಹೊಮ್ಮುತ್ತಿತ್ತು. ಅದನ್ನು ನೋಡಿ ನಾವು ಇನ್ನಷ್ಟು ಪ್ರಭಾವಿತರಾಗಿದ್ದೆವು. ಈ ರೀತಿ ಆಮಂತ್ರಣಕ್ಕೆ ಇಲ್ಲವೆನ್ನಲು ಸಾಧ್ಯವಾಗಲಿಲ್ಲ’ ಎಂದಿದ್ದಾರೆ.
.ರಾಧಿಕಾ - ಅನಂತ್ ಅಂಬಾನಿ ವಿವಾಹ: ಕಿಮ್ ಕರ್ದಾಶಿಯಾನ್ ಸೋದರಿಯರ ಆಟೋ ರಿಕ್ಷಾ ಪಯಣ.PHOTOS: ಅಂಬಾನಿ ಪುತ್ರನ ಅದ್ಧೂರಿ ಮದುವೆ– ಹರಿದು ಬಂದ ಗಣ್ಯರ ದಂಡು.
ಕಿಮ್ ಮತ್ತು ಸಹೋದರಿ ಅಂಬಾನಿ ಕುಟುಂಬದ ಮದುವೆಯಲ್ಲಿ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿದ ವಜ್ರ ಮತ್ತು ಹರಳಿನ ಮೂಲಕ ಸಿದ್ಧಪಡಿಸಿದ ಲೆಹೆಂಗಾವನ್ನು ಧರಿಸಿದ್ದರು.

ಅಂಬಾನಿ ಕುಟುಂಬದ ಮದುವೆಯಲ್ಲಿ ಪಾಲ್ಗೊಂಡ ಕುರಿತು ಕಿಮ್ ಸಾಮಾಜಿಕ ಜಾಲತಾಣದಲ್ಲಿ ಪೋಟೊಗಳನ್ನು ಹಂಚಿಕೊಂಡಿದ್ದಾರೆ.

ಅನಂತ್ ಮತ್ತು ರಾಧಿಕಾ ಜತೆಗಿರುವ ಹಾಗೂ ಇಶಾ ಅಂಬಾನಿಯೊಂದಿಗೆ ಫೋಟೊ ಹಂಚಿಕೊಂಡು ‘ಭಾರತ ನನ್ನ ಹೃದಯದಲ್ಲಿದೆ’ ಎಂದು ಹಾರ್ಟ್ ಎಮೋಜಿ ಹಾಕಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.