ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟವಿಲ್ಲ ಎಂದವರಿಂದಲೇ ಸುದ್ದಿಯಾಯ್ತು ಹೊಸ ಧಾಟಿಯ ABCD ಹಾಡು

Last Updated 7 ನವೆಂಬರ್ 2019, 5:54 IST
ಅಕ್ಷರ ಗಾತ್ರ

ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ಹೊಸ ಹಾಡು ಲೈಕ್‌ ಮೇಲೆ ಲೈಕ್ ಪಡೆದು ವೈರಲ್ ಆಗುವುದು ಅಥವಾ ಭರ್ಜರಿ ವ್ಯೂಸ್‌, ಕಾಮೆಂಟ್‌ಗಳಿಂದ ಹವಾ ಎಬ್ಬಿಸಿದಾಗ ಸುದ್ದಿಯಾಗುವುದು ಸಹಜ. ಆದರೆ ಇದು ಹಾಗಲ್ಲ.ಸಾವಿರಾರು ಜನರು ‘ಛೇ, ಇದು ಇಷ್ಟವಾಗಿಲ್ಲ’ ಎಂದು ಡಿಸ್‌ಲೈಕ್, ಥಮ್ಸ್‌ ಡೌನ್‌ ಮಾಡಿ,ಆಕ್ಷೇಪದ ಕಾಮೆಂಟ್‌ಗಳನ್ನು ಪೋಸ್ಟ್‌ ಮಾಡಿರುವುದೇ ಸುದ್ದಿ.

ನಿಮ್ಮ ಮನೆಯಲ್ಲಿನರ್ಸರಿ ಮಕ್ಕಳಿದ್ದರೆ ‘ಎಬಿಸಿಡಿ’ ಅಕ್ಷರಮಾಲೆಯ ಹಾಡು ಗೊತ್ತೇ ಇರುತ್ತೆ. ಈ ಹಾಡಿನ ಧಾಟಿ ಹಲವು ವರ್ಷಗಳಿಂದ ಬಲದಾಗಿಲ್ಲ. ಆದರೆ ನಿನ್ನೆಮೊನ್ನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್‌ ಆಗಿರುವ ಅಕ್ಷರಮಾಲೆಯ ಹಾಡಿನ ಧಾಟಿ ಹೊಸದಾಗಿದೆ. ಇದೇ ಕಾರಣಕ್ಕೆ ಎಲ್ಲರ ಗಮನ ಸೆಳೆದಿದೆ.

ಅಕ್ಷರಮಾಲೆಯ ಈ ಹೊಸ ಹಾಡಿನಲ್ಲಿ ಉಳಿದದೆಲ್ಲವೂ ಚೆನ್ನಾಗಿದೆ. ಆದರೆL, M, N ಮತ್ತುO, P, Q, R, S ಅಕ್ಷರಗಳ ನಡುವೆ ಉಚ್ಚಾರಣೆ ಸರಾಗವಾಗಿಸಾಗಿ ಬರುವುದಿಲ್ಲ. ತಡೆತಡೆದು ಉಚ್ಚರಿಸಿರುವುದು ಹಲವರಿಗೆ ಕಿರಿಕಿರಿ ಎನಿಸಿದೆ.

‘ಮಕ್ಕಳಿಗೆL M N O P ಉಚ್ಚಾರಣೆ ಸ್ಪಷ್ಟವಾಗಿ ತಿಳಿಯಲಿ ಎಂದು ಹೊಸ ಧಾಟಿಯನ್ನು ರೂಪಿಸಲಾಗಿದೆ. ಆದರೆ ಈ ಐದು ಅಕ್ಷರಗಳ ಉಚ್ಚಾರಣೆಯೇ ಹಾಡು ಕೇಳಲುಕಿರಿಕಿರಿ ಉಂಟು ಮಾಡುತ್ತೆ’ ಎಂದು ನೋಹ್ ಗರ್ಫಿನ್‌ಕೆಲ್ ಎಂಬುವವರು ಟ್ವೀಟ್ ಮಾಡಿ ಆಕ್ಷೇಪಿಸಿದ್ದಾರೆ.

ಅಮೆರಿಕದ ಜನಪ್ರಿಯ ಕಮಿಡಿಯನ್ ಎಲೆನ್ ಡಿಜನರೆಸ್‌ ಅವರಿಗೂ ಈ ಹೊಸ ಧಾಟಿ ಇಷ್ಟವಾಗಿಲ್ಲ. ತಮ್ಮ ಟಿವಿ ಕಾರ್ಯಕ್ರಮದಲ್ಲಿ ‘ನಾವೆಲ್ಲರೂ ಅಕ್ಷರ ಕಲಿತ ಹಾಡನ್ನು ಇವರು ಬದಲಿಸಿದ್ದಾರೆ’ ಎನ್ನುವ ಆಕ್ಷೇಪಣೆಯೊಂದಿಗೆ ಅವರು ಈ ಹಾಡನ್ನು ಟಿವಿಯಲ್ಲಿತೋರಿಸಿದ್ದರು.

ವಿಚಿತ್ರ ಅಂದ್ರೆ ಇದೇನೂ ತೀರಾ ಹೊಸ ಹಾಡಲ್ಲ. ಮಕ್ಕಳಿಗೆ ಇಂಗ್ಲಿಷ್ ಕಲಿಸುವ ವೆಬ್‌ಸೈಟ್‌ ಡ್ರೀಮ್‌ ಇಂಗ್ಲಿಷ್2012ರಲ್ಲಿಯೇ ಈ ಧಾಟಿಯನ್ನು ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ ಪರಿಚಯಿಸಿತ್ತು. ಯುಟ್ಯೂಬ್‌ನಲ್ಲಿಯೂ ಬರೋಬ್ಬರಿ 2,700 ಡಿಸ್‌ಲೈಕ್‌ ಹೊಂದಿರುವ ಈ ಹಾಡಿನ ಬಗ್ಗೆ ಅದೇಕೋ ಇದ್ದಕ್ಕಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದೆ.

ಬಹುತೇಕರಿಗೆ ಹೊಸ ಧಾಟಿ ಇಷ್ಟವಾಗಿಲ್ಲ. ‘ಅಯ್ಯೋ ದೇವರೇ, ಇದನ್ನು ನೋಡಿ ತಲೆಕೆಡ್ತು. ನಾವು ಹೇಳ್ತಿದ್ದ ಧಾಟಿಯೇ ಚೆನ್ನಾಗಿತ್ತು’ ಎಂದು ಹಲವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT