ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

90ರ ದಶಕದ ವಿವಾಹದ ಮೆನು ಕಾರ್ಡ್ ಹೇಗಿತ್ತು ಗೊತ್ತಾ? ನೆಟಿಜನ್‌ಗಳ ಪ್ರತಿಕ್ರಿಯೆ...

ಅಕ್ಷರ ಗಾತ್ರ

ಮದುವೆ ಎಂದ ಕೂಡಲೇ ನಾವು ಎರಡು ವಿಚಾರದ ಬಗ್ಗೆ ಎದುರು ನೋಡುತ್ತೇವೆ. ಒಂದು ಹೊಸದಾಗಿ ಮದುವೆಯಾದ ದಂಪತಿಯಾದರೆ ಮತ್ತೊಂದು ಸಹಜವಾಗಿಯೇ ರುಚಿಕರವಾದ ಆಹಾರವಾಗಿರುತ್ತದೆ. ವರ್ಷಗಳು ಕಳೆಯುತ್ತಿರುವಂತೆಯೇ ವಿವಾಹಗಳು ಮತ್ತು ಅವುಗಳನ್ನು ನಡೆಸುವ ವಿಧಾನಗಳಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಮದುವೆಗಳು ಆಡಂಬರ ಮತ್ತು ಪ್ರದರ್ಶನಕ್ಕೆ ಸೀಮಿತವಾದಂತಿರುತ್ತವೆ. ಆದರೆ ಹಿಂದಿನ ಕಾಲದಲ್ಲಿನ ವಿವಾಹಗಳು ಸರಳ ಮತ್ತು ಆಡಂಬರವಿಲ್ಲದವಾಗಿರುತ್ತಿದ್ದವು.

ಮಗುವಾಗಿದ್ದಾಗ, ನಮ್ಮಲ್ಲಿ ಹೆಚ್ಚಿನವರು ಹಲವಾರು ಮದುವೆಗಳಿಗೆ ಹಾಜರಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಆ ಘಟನೆಗಳಿಂದ ನಮಗೆ ಇಷ್ಟವಾದಂತಹ ನೆನಪುಗಳಿರುತ್ತವೆ. ಟ್ವಿಟ್ಟರ್ ಬಳಕೆದಾರರೊಬ್ಬರು ಇತ್ತೀಚೆಗೆ ತನ್ನ ಹೆತ್ತವರ ವಿವಾಹದ ಆಹ್ವಾನ ಪತ್ರಿಕೆಯ ಮೆನು ಕಾರ್ಡ್‌ನ ಚಿತ್ರಗಳನ್ನು ಹಂಚಿಕೊಂಡಿದ್ದು, ನೆಟಿಜನ್‌ಗಳ ಗಮನ ಸೆಳೆಯುತ್ತಿದೆ.

ಈ ಮೆನು ಕಾರ್ಡ್ 1990ರಲ್ಲಿ ನಡೆದ ಬಂಗಾಳಿ ವಿವಾಹವೊಂದರದ್ದಾಗಿದ್ದು, ಈ ಚಿತ್ರಗಳನ್ನು ಜುಲೈ 4 ರಂದು ಟ್ವಿಟರ್‌ನಲ್ಲಿ 'ಓಎಂಜಿ ನನ್ನ ಸೋದರ ಸಂಬಂಧಿಯೊಬ್ಬರಿಗೆ 'ನನ್ನ ಹೆತ್ತವರ ವಿವಾಹ ರಿಸಪ್ಶನ್‌ನ ಮೆನು ಕಾರ್ಡ್' ಸಿಕ್ಕಿದೆ' ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳಲಾಗಿದೆ. ಈ ಮೆನು ಕಾರ್ಡ್‌ನಲ್ಲಿ ಕೆಲವು ರುಚಿಕರವಾದ ಆಹಾರ ಪದಾರ್ಥಗಳ ಪಟ್ಟಿಯನ್ನೇ ಕಾಣಬಹುದು.

90ರ ದಶಕದ ಈ ಮೆನು ಕಾರ್ಡ್‌ಗೆ ನೆಟಿಜನ್‌ಗಳು ಅದ್ಭುತ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 'ಇದೊಂದು ಕಾರಣಕ್ಕಾಗಿಯೇ ನಾನು ಆ ಕಾಲಘಟ್ಟಕ್ಕೆ ಚಲಿಸಲು ಇಷ್ಟಪಡುತ್ತೇನೆ' ಎಂದೊಬ್ಬರು ಕಮೆಂಟಿಸಿದ್ದರೆ, 'ಇದು ತುಂಬಾ ಸ್ವೀಟ್. ಬಂಗಾಳಿ ವಿವಾಹದ ಮೆನುಗಳು ತುಂಬಾ ಹಾಸ್ಯಮಯವಾಗಿವೆ' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

'ಚಿಲ್ಲಿ ಫಿಶ್ ಮತ್ತು ಪ್ರೈಡ್ ರೈಸ್!' ವಾವ್!. ಇಂತಹ ಕಾಂಬೊವನ್ನು ಯಾವುದೇ ವಿವಾಹ ಸಮಾರಂಭದಲ್ಲಿ ನೋಡಿಲ್ಲ' ಎಂದು ಮತ್ತೊಬ್ಬ ಬಳಕೆದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT