ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಬಿಳಿ ಚರ್ಮ, ನೀಲಿ ಕಣ್ಣುಗಳು.. ಇದು ವಿರಳಾತಿವಿರಳ ಮೊಸಳೆ– ವಿಡಿಯೊ ನೋಡಿ

ಅಮೆರಿಕದ ಓರ್ಲಾಂಡೊ ವೈಲ್ಡ್ ಲೈಫ್ ಪಾರ್ಕ್‌ನಲ್ಲಿ ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಕೂಡಿರುವ ಹಾಗೂ ನೀಲಿ ಕಂಗಳನ್ನು ಹೊಂದಿರುವ ಮೊಸಳೆ ಮರಿ ಜನಿಸಿದೆ
Published 9 ಡಿಸೆಂಬರ್ 2023, 10:08 IST
Last Updated 9 ಡಿಸೆಂಬರ್ 2023, 10:08 IST
ಅಕ್ಷರ ಗಾತ್ರ

ಅಮೆರಿಕದ ಫ್ಲೋರಿಡಾದ ಓರ್ಲಾಂಡೊ ವೈಲ್ಡ್ ಲೈಫ್ ಮೊಸಳೆ ಪಾರ್ಕ್‌ನಲ್ಲಿ ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಕೂಡಿರುವ ಹಾಗೂ ನೀಲಿ ಕಂಗಳನ್ನು ಹೊಂದಿರುವ ಮೊಸಳೆ ಮರಿ ಜನಿಸಿದೆ.

ಇದು ಪ್ರಪಂಚದಲ್ಲೇ ವಿರಳಾತಿವಿರಳ ಎನ್ನಲಾಗಿದೆ.

ಈ ಕುರಿತು ಓರ್ಲಾಂಡೊ ವೈಲ್ಡ್ ಲೈಫ್ ಪಾರ್ಕ್‌ ತನ್ನ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ತಿಳಿಸಿ ಮೊಸಳೆ ಮರಿಯ ಫೋಟೊಗಳನ್ನು ಹಂಚಿಕೊಂಡಿದೆ.

ಅಮೆರಿಕದಲ್ಲಿ ಕಂಡು ಬರುವ ಅಲ್ಬಿನೊ (ಬಿಳಿ ಅಥವಾ ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಹೊಂದಿರುವ ಮೊಸಳೆಗಳು) ಮೊಸಳೆಗಳ ಚರ್ಮದ ಬಣ್ಣದಲ್ಲಿ ಸಾಮಾನ್ಯವಾಗಿ ವ್ಯತ್ಯಾಸ ಕಂಡು ಬರುತ್ತದೆ. ಅವುಗಳಲ್ಲಿ ಇನ್ನೂ ಚರ್ಮ ಬಿಳಿ ಎನ್ನುವಂತೆ ಕಂಡು ಬರುವ ಮೊಸಳೆಗಳನ್ನು Leucistic ಮೊಸಳೆಗಳು ಎನ್ನುತ್ತಾರೆ. Leucistic ಮೊಸಳೆಗಳು ಜಗತ್ತಿನಲ್ಲಿ ಕೇವಲ 8 ಇವೆ ಎಂದು ಹೇಳಲಾಗಿದೆ.

ಆದರೆ, ಈಗ ಈ ಪಾರ್ಕ್‌ನಲ್ಲಿ ಕಂಡು ಬಂದಿರುವ ಸಂಪೂರ್ಣ ಬಿಳಿ ಬಣ್ಣದ ಮೊಸಳೆ ಮರಿ ತೀರಾ ಅಪರೂಪ ಎನ್ನಲಾಗಿದ್ದು, ಈ ರೀತಿಯ ಮೊಸಳೆ ಮರಿ ಹುಟ್ಟಿದ್ದಕ್ಕೆ ಪಾರ್ಕ್ ಸಿಬ್ಬಂದಿ ಸಂಭ್ರಮ ವ್ಯಕ್ತಪಡಿಸಿದ್ದು, ಇದಕ್ಕೆ ಆಕರ್ಷಕ ಹೆಸರು ಸೂಚಿಸಿ ಎಂದು ಜನರಿಗೆ ಮನವಿ ಮಾಡಿಕೊಂಡಿದೆ.

ಸದ್ಯ ಈ ಮೊಸಳೆ ಮರಿ 49 ಸೆಂಟಿ ಮೀಟರ್ ಉದ್ದವಿದೆ ಎಂದು ಪಾರ್ಕ್ ತಿಳಿಸಿದೆ.

ಈ ಕುರಿತು ಫೇಸ್‌ಬುಕ್ ಹೇಳಿಕೆಯಲ್ಲಿ ಪಾರ್ಕ್ ಸಿಇಒ Mark McHugh, ‘ಇದು ವಿರಳಾತಿವಿರಳ. ಅತ್ಯಂತ ವಿಶೇಷ ಎಂದರೆ ಇದೇ’ ಎಂದು ಹೇಳಿದ್ದಾರೆ.

ಚರ್ಮದ ಬಣ್ಣಕ್ಕೆ ಕಾರಣವಾಗುವ ಮೆಲಾನಿನ್ ರಾಸಾಯನಿಕದಲ್ಲಿನ ವ್ಯತ್ಯಾಸದಿಂದ ಈ ರೀತಿ ಪ್ರಾಣಿಗಳ ಚರ್ಮದಲ್ಲಿ ವ್ಯತ್ಯಾಸ ಕಂಡು ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT