ಗುರುಗ್ರಾಮ: ಬಿಯರ್ ಖರೀದಿಸುವಾಗ ರಿಯಾಯಿತಿ ನೀಡಲಿಲ್ಲ ಎಂದು ರೊಚ್ಚಿಗೆದ್ದ ಕ್ಯಾಬ್ ಚಾಲಕನೊಬ್ಬ ಕಾರನ್ನು ಮದ್ಯದಂಗಡಿಗೆ ನುಗ್ಗಿಸಿ ಇಬ್ಬರು ಗಂಭೀರವಾಗಿ ಗಾಯಗೊಳ್ಳುವಂತೆ ಮಾಡಿರುವ ಘಟನೆ ದೆಹಲಿ ಹೊರವಲಯದ ಗುರುಗ್ರಾಮ ಬಳಿ ನಡೆದಿದೆ.

ಗುರುಗ್ರಾಮದ ಸೆಕ್ಟರ್ 48 ಬಳಿ ಈ ಘಟನೆ ನಡೆದಿದ್ದು ಆರೋಪಿ ಕ್ಯಾಬ್ ಚಾಲಕ ಅಮಿತ್ ಎಂಬುವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ರಾತ್ರಿ ಶಾಮ್ ವೈನ್ಸ್ ಎಂಬ ಮದ್ಯದಂಗಡಿಗೆ ತನ್ನ ಕ್ಯಾಬ್ನಲ್ಲಿ ತೆರಳಿದ್ದ ಅಮಿತ್ ಬಿಯರ್ ಬಾಟಲ್ಗಳಿಗೆ ರಿಯಾಯಿತಿ ನೀಡಲು ಪಟ್ಟು ಹಿಡಿದಿದ್ದ. ಇದನ್ನು ಅಂಗಡಿ ಸಿಬ್ಬಂದಿ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದು ಕಾರನ್ನು ಅಂಗಡಿ ಒಳಗೆ ನುಗ್ಗಿಸಿ ಅಟ್ಟಹಾಸ ಮೆರೆದಿದ್ದ.

ಇದರಿಂದ ಸಿಬ್ಬಂದಿಗಳಾದ ನೀರಜ್, ಸುನೀಲ್ ಕುಮಾರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.