ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ripped Jeans Twitter: ಸಿಎಂ ರಾವತ್ ಹೇಳಿಕೆಗೆ ಟ್ವಿಟರ್‌ನಲ್ಲಿ ಭಾರಿ ವಿರೋಧ

Last Updated 18 ಮಾರ್ಚ್ 2021, 10:42 IST
ಅಕ್ಷರ ಗಾತ್ರ

ಬೆಂಗಳೂರು: ಹರಿದ ಜೀನ್ಸ್ ಬಟ್ಟೆಯನ್ನು ಮಹಿಳೆಯರು ಧರಿಸುವುದರಿಂದ ಮಕ್ಕಳ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ಸಿಂಗ್ ರಾವತ್ ನೀಡಿರುವ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನೇ ಮೂಡಿಸಿದೆ.

ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್‌ನಲ್ಲಿ #RippedJeansTwitter ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಮಹಿಳೆಯರಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ.

ಮಹಿಳೆಯರು ಜೀನ್ಸ್ ಉಡುಗೆಯೊಂದಿಗಿನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ಸಿಂಗ್ ರಾವತ್ ವಿರುದ್ಧ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ಮಹಿಳೆಯರ ಈ ಅಭಿಯಾನಕ್ಕೆ ಪುರುಷರು ಸಹ ಕೈಜೋಡಿಸಿದ್ದಾರೆ.

ಏನಿದು ವಿವಾದ: ಸಂಪೂರ್ಣ ಸುದ್ದಿ ಓದಿ

ನಟಿ ಗುಲ್ ಪನಾಗ್ ಸಹ ಹರಿದ ಜೀನ್ಸ್ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ಹರಿದ ಜೀನ್ಸ್ ಮತ್ತು ಪುಸ್ತಕ. ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಪುರುಷರಿಂದ ಪ್ರಭಾವಿತವಾಗಿದೆ. ಅಲ್ಲಿ ಕುಳಿತುಕೊಂಡು ಮಹಿಳೆಯರು ಮತ್ತು ಆವರ ಆಯ್ಕೆಗಳನ್ನು ನಿರ್ಣಯಿಸುತ್ತಾರೆ. ಮುಖ್ಯಮಂತ್ರಿ ರಾವತ್ ಅವರೇ ಮೊದಲು ಚಿಂತನೆ ಬದಲಿಸಿ, ಆಗ ಮಾತ್ರ ದೇಶ ಬದಲಾಗಲಿದೆ ಎಂದು ಶಿವಸೇನಾ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಪ್ರತಿಕ್ರಿಯೆಗಳನ್ನು ಇಲ್ಲಿ ಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT