ಬೆಂಗಳೂರು: ರಷ್ಯಾದ ಪ್ರತಿಷ್ಠಿತ ಮದ್ಯ ತಯಾರಿಕಾ ಕಂಪನಿ ರಿವರ್ಟ್, ತಾನು ಉತ್ಪಾದಿಸುವ ಬಿಯರ್ ಕ್ಯಾನ್ ಮೇಲೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರ ಬಳಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಶ್ರೀ ಸುಪರ್ನೊ ಸತ್ಪಥಿ ಎಂಬ ಖಾತೆಯಿಂದ ಬಿಯರ್ನ ಚಿತ್ರವನ್ನು ಹಂಚಿಕೊಂಡು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಇನ್ನುಮುಂದೆ ಸಿದ್ಧಗೊಳ್ಳುವ ಬಿಯರ್ ಕ್ಯಾನ್ ಮೇಲೆ ಚಿತ್ರವನ್ನು ಮುದ್ರಿಸದಂತೆ ಆಗ್ರಹಿಸಿದ್ದಾರೆ.

‘ಬಿಯರ್ಗೆ ‘ಗಾಂಧೀಜಿ ಎಸ್ಎಸ್’ ಎಂಬ ಹೆಸರಿಟ್ಟು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಇದೆ. ಮೋದಿ ಅವರು ಈ ಗಂಭೀರ ವಿಷಯವನ್ನು ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಚರ್ಚಿಸಬೇಕು’ ಎಂದು ಆಗ್ರಹಿಸಿದ್ದಾರೆ’ ಎಂದು ಆಗ್ರಹಿಸಿದ್ದಾರೆ.

ಸತ್ಪಥಿ ಅವರ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಇದೊಂದು ಆಘಾತಕಾರಿ ಸುದ್ದಿಯಾಗಿದ್ದು, ಎಂದಿಗೂ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

‘ರಷ್ಯಾದ ಬ್ರುವರಿ ರಿವರ್ಟ್ ಕಂಪನಿಯು ‘ಮಹಾತ್ಮಾ ಜಿ’ ಎಂಬ ಹೆಸರಿನಲ್ಲಿ ಬಿಯರ್ ಮಾರಾಟ ಮಾಡುತ್ತಿದೆ. ಶಾಂತಿ ಉತ್ತೇಜಿಸಿ ಮತ್ತು ಮದ್ಯಪಾನವನ್ನು ಸದಾ ವಿರೋಧಿಸಿದ್ದ ಮಹಾತ್ಮಾ ಗಾಂಧೀಜಿ ಅವರ ಸಿದ್ಧಾಂತಕ್ಕೆ ಮಾಡಿರುವ ಅಪಮಾನವಾಗಿದೆ. ಭಾರತೀಯ ಮೌಲ್ಯ ಹಾಗೂ ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಆಗಿರುವ ಅವಮಾನವಾಗಿದೆ. ಪ್ರಧಾನಿ ಮತ್ತು ವಿದೇಶಾಂಗ ಸಚಿವರು ಈ ವಿಷಯವನ್ನು ರಷ್ಯಾ ಸರ್ಕಾರದ ಗಮನಕ್ಕೆ ತರಬೇಕು. ಮದ್ಯದ ಉತ್ಪನ್ನಗಳಿಗೆ ಗಾಂಧೀಜಿ ಅವರ ಹೆಸರು ಇಟ್ಟಿರುವುದನ್ನು ವಿರೋಧಿಸಬೇಕು’ ಎಂದಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ, ‘ಮಹಾತ್ಮಾ ಗಾಂಧೀಜಿ ಅವರಿಗೆ ಸಂದ ಗೌರವವಿದು. ಇಂಥ ಪವಿತ್ರ ಹೆಸರಿನಲ್ಲಿ ವಿಸ್ಕಿ ಹಾಗೂ ರಮ್ಗಳನ್ನೂ ಪರಿಚಯಿಸಬೇಕು’ ಎಂದಿದ್ದಾರೆ.

ಮತ್ತೊಬ್ಬ ಬಳಕೆದಾರ, ‘ದೇಶದ ವಿಭಜನೆಯನ್ನು ಯಾರೂ ಪ್ರಜ್ಞಾಪೂರ್ವಕವಾಗಿ ಮಾಡಿರಲು ಸಾಧ್ಯವಿಲ್ಲ. ಹೀಗಾಗಿ ಬಿಯರ್ಗೆ ಹೆಸರು ಇಟ್ಟಿರುವುದು ಸರಿ ಇದೆ’ ಎಂದಿದ್ದಾರೆ.

‘ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರವನ್ನು ಮದ್ಯದ ಬಾಟಲಿ ಮೇಲೆ ಮುದ್ರಿಸಿದ ಪ್ರಕರಣ ಇದೇ ಮೊದಲಲ್ಲ. 2019ರಲ್ಲಿ ಇಸ್ರೇಲ್ ಕಂಪನಿಯೊಂದು ಮದ್ಯದ ಬಾಟಲಿ ಮೇಲೆ ಗಾಂಧೀಜಿ ಅವರ ಭಾವಚಿತ್ರ ಮುದ್ರಿಸಿತ್ತು. ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಭಾರತೀಯ ಸರ್ಕಾರದ ಕ್ಷಮೆ ಯಾಚಿಸಿತ್ತು. ಚೆಕ್ ರಿಪಬ್ಲಿಕ್ ಕಂಪನಿಯೊಂದು ‘ಮಹಾತ್ಮಾ ಇಂಡಿಯಾ ಪಾಲೆ ಅಲೆ’ ಎಂಬ ಹೆಸರಿನ ಮದ್ಯವನ್ನು ಪರಿಚಯಿಸಿತ್ತು. ಇದಕ್ಕೆ ಭಾರತೀಯ ಸ್ವಯಂ ಸೇವಾ ಸಂಸ್ಥೆ ತೀವ್ರವಾಗಿ ವಿರೋಧಿಸಿತ್ತು. ಅಮೆರಿಕದ ಕಂಪನಿಯೊಂದು ಇಂಥದ್ದೇ ದುಸ್ಸಾಹಸಕ್ಕೆ ಕೈಹಾಕಿತ್ತು. ಇದನ್ನು ಅರ್ಜಿದಾರರೊಬ್ಬರು ಹೈದರಾಬಾದ್ನ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು’ ಎಂದು ಇನ್ಸ್ಟಾಗ್ರಾಂನಲ್ಲಿ ಜಿಸ್ಟ್ ನ್ಯೂಸ್ ಎಂಬ ಖಾತೆ ಪೋಸ್ಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.