ಬೆಂಗಳೂರು: ನಿಷ್ಕಲ್ಮಶವಾದ ಸ್ನೇಹ ಹಾಗೂ ಪ್ರೀತಿಗೆ ಯಾವುದೇ ಸ್ಪರ್ಧೆ ಎಂಬುದು ಇಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ.

ಸಿದ್ದ ಆಹಾರ ಪೂರೈಕೆಯಲ್ಲಿ ದೇಶದಲ್ಲಿ ಭಾರಿ ಸ್ಪರ್ಧೆ ನಡೆಸುತ್ತಿರುವ ಜೊಮಾಟೊ ಹಾಗೂ ಸ್ವಿಗ್ಗಿ ಕಂಪನಿಗಳ ಇಬ್ಬರು ಡೆಲಿವರಿ ಬಾಯ್‌ಗಳು, ಆಹಾರ ಡೆಲಿವರಿ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಿರುವ ಘಟನೆ ದೆಹಲಿಯಲ್ಲಿ ಇತ್ತೀಚೆಗೆ ನಡೆದಿದೆ.

ಬೈಕ್‌ನಲ್ಲಿ ಹೋಗುತ್ತಿದ್ದ ಸ್ವಿಗ್ಗಿ ಡೆಲಿವರಿ ಹುಡುಗ ಸೈಕಲ್‌ನಲ್ಲಿ ತೆರಳುತ್ತಿದ್ದ ಜೊಮಾಟೊ ಡೆಲಿವರಿ ಬಾಯ್‌ಗೆ ಸೈಕಲ್ ಮುಂದೆ ಹೋಗಲು ಸಹಾಯ ಮಾಡುತ್ತಾನೆ. ಜೊಮಾಟೊದವನನ್ನು ತನ್ನೊಟ್ಟಿಗೆ ಕರೆದೊಯ್ಯುತ್ತಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಅಪರೂಪದ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದ್ದು ನೋಡಿ ನಿಜವಾದ ಸ್ನೇಹಕ್ಕೆ ಯಾವುದೇ ಸ್ಪರ್ಧೆ ಎಂಬುದು ಇಲ್ಲ ಎಂದು ಕೊಂಡಾಡಿದ್ದಾರೆ.

ಆರೋಗ್ಯಯುತ ಸ್ಪರ್ಧೆ ನಡೆಸಲು ಈ ವಿಡಿಯೊ ಮಾದರಿಯಾಗುತ್ತದೆ. ಇದು ಎಲ್ಲರಿಗೂ ಮಾದರಿ ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.