ಬೆಂಗಳೂರು: ಜಗತ್ತಿನ ಅತೀ ಎತ್ತರದ ಗಂಡು ನಾಯಿ ಎನಿಸಿಕೊಂಡಿದ್ದ ಗ್ರೇಟ್ ಡೇನ್ ತಳಿಯ ಶ್ವಾನ ಮೃತಪಟ್ಟಿರುವುದು ವರದಿಯಾಗಿದೆ.

ಜೇವುಸ್ ಎಂಬ 3 ವರ್ಷ 10 ತಿಂಗಳ ವಯಸ್ಸಿನ ಈ ನಾಯಿ ಅಮೆರಿಕದ ಟೆಕ್ಸಾಸ್‌ನ ಬೆಡ್‌ಪೋರ್ಡ್‌ನಲ್ಲಿ ತನ್ನ ಮಾಲೀಕರ ಜೊತೆ ವಾಸವಾಗಿತ್ತು. ಎಡಗಾಲಿನ ಮೂಳೆ ಕ್ಯಾನ್ಸರ್‌ನಿಂದ ಮೃತಪಟ್ಟಿದೆ.

ಜೇವುಸ್ 1.046 ಮೀಟರ್ ಎತ್ತರ ಇದ್ದಿದ್ದನ್ನು 2022 ರಲ್ಲಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ದಾಖಲಿಸಿತ್ತು.

ಈ ಕುರಿತ ಮಾಹಿತಿಯನ್ನು ಗಿನ್ನೀಸ್ ವರ್ಲ್ಡ್ ರೆಕಾರ್ಡ್ ತನ್ನ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅತಿ ಎತ್ತರದ ನಾಯಿ ನಿಧನಕ್ಕೆ ಸಂತಾಪ ಸೂಚಿಸಿದೆ.

ಬೆಡ್‌ಪೋರ್ಡ್‌ನ ಬ್ರಿಟ್ನಿ ಎನ್ನುವವರು ಜೇವುಸ್ ಮಾಲೀಕರಾಗಿದ್ದರು. ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.

ಮಾಲೀಕಳ ತೊಡೆ ಮೇಲೆಯೇ ಜೇವುಸ್ ಮೃತಪಟ್ಟಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.