ಬುಧವಾರ, ಮೇ 27, 2020
27 °C
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್

ವೈರಲ್ ವಿಡಿಯೊ: ‘ಎಣ್ಣೆ’ ನೀಡದಿದ್ರೆ ಆತ್ಮಹತ್ಯೆ, ಪ್ರಧಾನಿ ಮೋದಿಗೇ ಬೆದರಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಕುಡಿಯಲು ಮದ್ಯ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಿಸಿದ್ದಾರೆ.

ಕೊರೊನಾ ಸೋಂಕಿನ ಭೀತಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಜಾರಿಗೆ ತಂದಿರುವುದರಿಂದ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಮದ್ಯವ್ಯಸನಿಗಳು ಮದ್ಯಕ್ಕಾಗಿ ಪರದಾಡುತ್ತಿದ್ದಾರೆ.

ವಿಡಿಯೊದಲ್ಲಿ ವ್ಯಕ್ತಿ ‘ನನಗೆ ಎಣ್ಣೆ (ಮದ್ಯ) ಬೇಕು. ಇಲ್ಲಾಂದ್ರೆ ಸಂಜೆಯೊಳಗೆ ಆತ್ಮಹತ್ಯೆ ಮಾಡಿಕೊಳ್ಳುವೆ. ಇದಕ್ಕೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯೇ ನೇರ ಕಾರಣರಾಗುತ್ತಾರೆ. ನಂಗೆ ಒಂದು ವಾರದಿಂದ ನಿದ್ದೆ ಬಂದಿಲ್ಲ. ಕುಡಿದ್ರೇನೇ ನಿದ್ದೆ ಬರೋದು. ನಾನೇ ವಾಟ್ಸ್‌ಆ್ಯಪ್‌ ಮಾಡ್ಸಿದ್ದೀನಿ. ನನ್ನ ಹೆಸರು ಗೋವಿಂದಯ್ಯ, ದೊಂಬರನಹಳ್ಳಿ ತುರುವೇಕೆರೆ ತಾಲ್ಲೂಕಿನವ’ ಎಂದು ಹೇಳಿಕೊಂಡಿದ್ದಾರೆ.

ಈ ವಿಡಿಯೋ ಫೇಸ್‍ಬುಕ್‍ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಭಾನುವಾರ ಮಧ್ಯಾಹ್ನದಿಂದ ಹರಿದಾಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು