ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಸ್ವಚ್ಛಗೊಳಿಸುತ್ತಾ ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆ: ವಿಡಿಯೊ ವೈರಲ್

Last Updated 27 ಫೆಬ್ರುವರಿ 2022, 9:24 IST
ಅಕ್ಷರ ಗಾತ್ರ

ಕೀವ್: ರಷ್ಯಾದ ಸೇನಾ ಪಡೆಗಳು ಶೆಲ್ ಮತ್ತು ಕ್ಷಿಪಣಿಗಳಿಂದ ಉಕ್ರೇನ್ ನಗರಗಳನ್ನು ಹೊಡೆದುರುಳಿಸುತ್ತಿರುವಾಗ, ಪ್ರತಿಕೂಲತೆಯನ್ನು ಎದುರಿಸುತ್ತಿರುವ ಅಲ್ಲಿನ ನಾಗರಿಕರ ಹೃದಯಸ್ಪರ್ಶಿ ಕಥೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ದಾಳಿಯಿಂದಾಗಿ ಹಾನಿಗೊಳಗಾಗಿರುವ ವಸತಿ ಕಟ್ಟಡವೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಿಟಕಿ ಗಾಜಿನ ಚೂರುಗಳು ಸೇರಿದಂತೆ ಇತರೆ ಅವಶೇಷಗಳನ್ನು ಸ್ವಚ್ಛಗೊಳಿಸುವ ವೇಳೆ ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಾ ರಾಷ್ಟ್ರಗೀತೆ ಹಾಡಿದ್ದಾರೆ. ಈ ದೃಶ್ಯದ ವಿಡಿಯೊ ವೈರಲ್‌ ಆಗಿದ್ದು, ನೋಡುಗರ ಮನಕಲಕುವಂತಿದೆ.

ತಮ್ಮ ದೇಶದ ಮೇಲೆ ಆಕ್ರಮಣ ಮಾಡಿರುವ ರಷ್ಯಾ ವಿರುದ್ಧ ಉಕ್ರೇನ್ ಸೈನಿಕರು ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ನಾಗರಿಕರು ಸಹ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.

‘ಕೆಲವರು ಕಹಳೆಯ ಮೂಲಕ ರಾಷ್ಟ್ರಗೀತೆಯ ನುಡಿಸಿದ್ದಾರೆ. ಎಲ್ಲೆಡೆ ರಾಷ್ಟ್ರಗೀತೆ ಕೇಳಿಬರುತ್ತಿದೆ. ಉಕ್ರೇನ್‌ಗೆಯಶಸ್ಸು ಸಿಗಲಿ’ ಎಂದು ಉಲ್ಲೇಖಿಸಿ ರಾಜತಾಂತ್ರಿಕ ಅಧಿಕಾರಿಯೊಬ್ಬರು ವಿಡಿಯೊ ಹಂಚಿಕೊಂಡಿದ್ದಾರೆ.

ಉಕ್ರೇನ್ ಮಹಿಳೆಯೊಬ್ಬರು ರಷ್ಯಾ ಸೈನಿಕರನ್ನು ಪ್ರಶ್ನಿಸುತ್ತಿರುವ ವಿಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ಮಹಿಳೆ, ಶಸ್ತ್ರಸಜ್ಜಿತ ರಷ್ಯಾ ಯೋಧರ ಕೈಗೆ ಸೂರ್ಯಕಾಂತಿ ಬೀಜವನ್ನು ಕೊಟ್ಟು ಇದನ್ನು ಜೇಬಿನಲ್ಲಿ ಇಟ್ಟುಕೊಳ್ಳಿ. ನೀವು ಉಕ್ರೇನ್ ನೆಲದಲ್ಲಿ ಸತ್ತ ಬಳಿಕ ಸಸಿಯಾಗಿ ಬೆಳೆಯುತ್ತವೆ ಎಂದು ಹೇಳಿದ್ದರು. ಇದು ಉಕ್ರೇನ್ ದೇಶಪ್ರೇಮಿಗಳ ಹೃದಯ ಗೆದ್ದಿದೆ.

ಓದಿ..ಉಕ್ರೇನ್ ಮಹಿಳೆ ರಷ್ಯಾ ಸೈನಿಕರಿಗೆ ಸೂರ್ಯಕಾಂತಿ ಬೀಜ ಕೊಟ್ಟಿದ್ದೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT