ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ನೋಡಿ, ಕೈಗಳನ್ನು ಹಿಂಗ್‌ ತೊಳೆಯಬೇಕು

Last Updated 10 ಏಪ್ರಿಲ್ 2020, 15:28 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ತಗುಲದಂತೆ ತಡೆಯಲು ಕೈಗಳನ್ನು ಆಗಾಗ್ಗೆ ತೊಳೆಯುವುದು, ಶುಚಿಯಾಗಿರುವುದು ಹಾಗೂ ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವುದು ಮುಖ್ಯ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಸರಿಯಾಗಿ ಕೈಗಳನ್ನು ತೊಳೆಯುವ ಕ್ರಮದ ಬಗ್ಗೆ ಬಹಳಷ್ಟು ವಿಡಿಯೊಗಳು ವೈರಲ್‌ ಆಗಿದ್ದು, ಈಗ ರಕೂನ್‌ ಸಹ ಕೈಗಳನ್ನು ತೊಳೆಯುವುದು ಹೇಗೆಂದು ತೋರಿಸಿ ಕೊಟ್ಟಿದೆ.

ಆರೋಗ್ಯ ಇಲಾಖೆ 20 ಸೆಕೆಂಡ್‌ಗಳ ಕೈತೊಳೆಯುವ ವಿಧಾನವನ್ನು ಪ್ರಚುರ ಪಡಿಸುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇತರೆ ಪ್ರಾಣಿಗಳು ಸಹ ಕೈತೊಳೆಯುವ ಅಭ್ಯಾಸ ರೂಢಿಸಿಕೊಂಡಿರುವುದಾಗಿ ವಿಡಿಯೊಗಳನ್ನು ಹರಿಯಬಿಡಲಾಗುತ್ತಿದೆ. ಪುಟ್ಟ ಶ್ವಾನದ ಮರಿಯಂತೆ ಕಾಣುವ ರಕೂನ್‌ ಕೈತೊಳೆದಿರುವ ವಿಡಿಯೊ ವೈರಲ್‌ ಆಗಿದ್ದು, ನೆಟಿಜನ್‌ಗಳ ಗಮನ ಸೆಳೆದಿದೆ.

ಐಎಫ್‌ಎಸ್‌ ಅಧಿಕಾರಿ ಪರ್ವೀಣ್‌ ಕಾಸ್ವಾನ್‌ ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ 15 ಸೆಕೆಂಡ್‌ಗಳ ರಕೂನ್‌ ವಿಡಿಯೊ ಈಗಾಗಲೇ 20 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. 'ಎಲ್ಲರೂ ತಮ್ಮ ಕೈಗಳನ್ನು ಸರಿಯಾಗಿತೊಳೆದುಕೊಳ್ಳಬೇಕು. ರಕೂನ್‌ನಿಂದ ಎರಡನೇ ಡೆಮೊ ವಿಡಿಯೊ. ಗಮನವಿಟ್ಟು ನೋಡಿ...' ಎಂದು ಒಕ್ಕಣೆಯೊಂದಿಗೆ ವಿಡಿಯೊ ಪ್ರಕಟಿಸಿದ್ದಾರೆ.

ಪುಟ್ಟ ವಿಡಿಯೊದಲ್ಲಿ ರಕೂನ್‌ ಮೊದಲಿಗೆ ಕೈಗಳನ್ನು ನೀರು ತುಂಬಿದ ಬಟ್ಟಲಿನಲ್ಲಿಟ್ಟು ತೊಳೆದುಕೊಳ್ಳುತ್ತದೆ. ನಂತರ ಸೋಪು ನೀರಿನ ಬಟ್ಟಲಿನಲ್ಲಿ ಕೈಗಳನ್ನು ಎದ್ದಿ ತೆಗೆದು, ಚೆನ್ನಾಗಿ ಉಜ್ಜಿಕೊಂಡು ಮತ್ತೆ ನೀರಿನಲ್ಲಿ ಕೈಗಳನ್ನು ತೊಳೆದುಕೊಳ್ಳುತ್ತದೆ. ವಿಡಿಯೊ ವೀಕ್ಷಿಸಿರುವ ಟ್ವೀಟಿಗರು, ಮನುಷ್ಯರಿಗಿಂತಲೂ ಬಹಳ ಸ್ಮಾರ್ಟ್‌ ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT