ಮಂಗಳವಾರ, ಜೂನ್ 28, 2022
24 °C

ಆರ್ಡರ್ ಮಾಡಿದ್ದು ಕ್ರಿಸ್ಪಿ ಫ್ರೈಡ್ ಚಿಕನ್: ಬಂದಿದ್ದು ಫ್ರೈಡ್ ಕಿಚನ್ ಟವೆಲ್!

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಫಿಲಿಪ್ಪೀನ್ಸ್‌ನಲ್ಲಿ ಮಹಿಳೆಯೊಬ್ಬರು ಆನ್‌ಲೈನ್ ಮೂಲಕ ಕ್ರಿಸ್ಪಿ ಚಿಕನ್ ಖಾದ್ಯ ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಆಹಾರ ಡೆಲಿವರಿ ಲಭಿಸಿ, ಅದನ್ನು ತೆರೆದು ನೋಡಿದಾಗ ಅದರಲ್ಲಿ ಗರಿಗರಿಯಾದ ಫ್ರೈಡ್ ಚಿಕನ್ ಬದಲಿಗೆ ಫ್ರೈಡ್ ಟವೆಲ್ ಕಾಣಿಸಿದೆ.

ಅಲಿಕ್ ಪೆರೆಝ್ ಎಂಬಾಕೆ ತನ್ನ ಮಗನಿಗಾಗಿ ಜೋಲಿಬಿ ಎಂಬ ಫಿಲಿಪ್ಪೀನ್ಸ್‌ನ ಪ್ರಸಿದ್ಧ ಫಾಸ್ಟ್ ಫುಡ್ ಸಂಸ್ಥೆಯಿಂದ ರಾತ್ರಿ ಊಟಕ್ಕೆ ಎಂದು ಕ್ರಿಸ್ಪಿ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದರು.

ಊಟ ಡೆಲಿವರಿ ಬಂದಾಗ, ಅದನ್ನು ತೆರೆದು ನೋಡಿದಾಗ, ಅಲ್ಲಿ ಚಿಕನ್ ಬದಲು ಕಿಚನ್‌ನಲ್ಲಿ ಬಳಸುವ ಟವೆಲ್ ಅನ್ನು ಮಸಾಲೆ ಬೆರೆಸಿ ಫ್ರೈ ಮಾಡಿ ಕೊಟ್ಟಿರುವುದು ಕಂಡುಬಂದಿದೆ. ಆರಂಭದಲ್ಲಿ ಚಿಕನ್ ಎಂದೇ ಅಲಿಕ್ ಮಗ ತಿನ್ನಲು ಮುಂದಾದಾಗ, ಚಿಕನ್ ಬದಲು ಟವೆಲ್ ಇದ್ದಿದ್ದು ನೋಡಿ ಹೌಹಾರಿದ್ದಾರೆ.

ಅಲಿಕ್ ಮಗ, ಚಿಕನ್ ಕ್ರಿಸ್ಪಿಯಾಗಿದೆ ಆದರೆ ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ದೂರಿದಾಗ ಸ್ವತಃ ಆಕೆಯೇ ಪರಿಶೀಲಿಸಿ ನೋಡಿದಾಗ ಈ ಸಂಗತಿ ಬಯಲಾಗಿದೆ. ಕೂಡಲೇ ಆಕೆ ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದು ವಿಡಿಯೊ ಮತ್ತು ಫೋಟೊ ಪೋಸ್ಟ್ ಮಾಡಿದ್ದಾರೆ.

ಅಲಿಕ್ ಪೋಸ್ಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಜನರು ಜೋಲಿಬಿ ಫುಡ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಂಪನಿ ದೇಶದಲ್ಲಿ ತಾತ್ಕಾಲಿಕವಾಗಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು