ಭಾನುವಾರ, ಸೆಪ್ಟೆಂಬರ್ 19, 2021
29 °C

ಮೀಮ್‌ಗಳಲ್ಲಿ ವರ್ಕ್‌ ಫ್ರಮ್ ಹೋಂ ಕಷ್ಟಸುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್ ಹಾವಳಿಯಿಂದ ವರ್ಕ್‌ ಫ್ರಮ್ ಹೋಂ ಆರಂಭಿಸಿ ಎಲ್ಲರೂ ಮನೆ ಸೇರಿದ್ದಾಗಿದೆ. ಮನೆಯ ಕೆಲಸಗಳಿಂದ ತಪ್ಪಿಸಿಕೊಳ್ಳಲು ಆಫೀಸ್ ಕೆಲಸವಿದೆ ಎಂದು ಹೆಂಡತಿಗೆ ಸುಳ್ಳು ಹೇಳುತ್ತಿದ್ದ ಗಂಡಂದಿರು ಈಗ ಬೋನಿಗೆ ಬಿದ್ದ ಹುಲಿಯ ಸ್ಥಿತಿಯಲ್ಲಿದ್ದಾರೆ. ಇನ್ನೂ ಮನೆ, ಕಚೇರಿ ಎರಡನ್ನೂ ಸಂಭಾಳಿಸುತ್ತಿದ್ದ ಮಹಿಳೆಯರ ಸ್ಥಿತಿ ಹೇಳತೀರದು. ಇತ್ತ ಮನೆಯ ಕೆಲಸಗಳು ಮುಗಿಯದೇ, ಕಚೇರಿ ಕೆಲಸಗಳನ್ನು ಮಾಡಲು ಸರಿಯಾಗಿ ಆಗದೆ ತಲೆಬಿಸಿ ಮಾಡಿಕೊಳ್ಳುತ್ತಿದ್ದಾರೆ.ಈ ತಲೆಬಿಸಿಗಳ ನಡುವೆಯೇ ನಮ್ಮ ಮುಖದಲ್ಲಿ ನಗು ಅರಳಿಸುತ್ತವೆ ವರ್ಕ್‌ ಫ್ರಂ ಹೋಮ್ ಪರಿಸ್ಥಿತಿಯ ಬಗ್ಗೆ ನೂರಾರು ಹಾಸ್ಯಪೂರಿತ ಮೀಮ್‌ಗಳು. ಇವುಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಬೆಂಗಳೂರಿನ ವೆಂಕಟೇಶ್‌ ಶರ್ಮಾ ಅವರ ’ಯಾರಿವನು‘ ಪೇಜ್‌ನಲ್ಲಿ ಹಂಚಿಕೊಂಡ ’ಬೆಳಿಗ್ಗೆಯಿಂದ ಸಂಜೆವರೆಗೂ ಅವರ ಬಾಸ್‌ ಹೇಳಿದ ನೂರು ಕೆಲ್ಸ ಮಾಡ್ತಾನೆ ನಾನು ಹೇಳಿದ ಒಂದು ಕೆಲಸ ಮಾತ್ರ ಮಾಡಲ್ಲ‘ ಎಂಬ ಅಮ್ಮನ ಬೈಗುಳದ ಟ್ರೋಲ್‌ ವೈರಲ್ ಆಗಿತ್ತು.

ಹಾಗೇ ಮಹಿಳೆಯೊಬ್ಬರು ಅತಿ ತರಲೆ ಮಾಡುತ್ತಿದ್ದ ತಮ್ಮ ಮಕ್ಕಳ ಬಾಯಿಗೆ ಪ್ಲಾಸ್ಟರ್‌ ಹಾಕಿ ಕೈಕಾಲು ಕಟ್ಟಿಹಾಕಿ ತಾವು ಕೆಲಸ ಮಾಡುತ್ತಿರುವ ಮೀಮ್‌ ಕೂಡ ಜನಪ್ರಿಯಗೊಂಡಿತ್ತು.

ಇನ್ನೂ ಕೊರೊನಾ ವೈರಸ್‌ ಪರೀಕ್ಷೆ ಬರೆಯಲಿರುವ ಮಕ್ಕಳನ್ನು ರಕ್ಷಿಸುತ್ತಿರುವ ಮೀಮ್, ಮನೆಯಲ್ಲಿ ಆರಾಮಾಗಿ ಕೆಲಸ ಮಾಡಬಹುದು ಎಂದುಕೊಂಡವರಿಗೆ; ಹೆಂಡತಿ ಅಡುಗೆ ಕೆಲಸ ಮಾಡಿಸುತ್ತಿರುವುದು ತಮಾಷೆಯಾಗಿತ್ತು. 

ಹೆಂಡತಿ ಮಕ್ಕಳ ಕಾಟ ತಾಳಲಾರದೆ ತಮ್ಮ ಬಾಸ್‌ಗೆ ಫೋನ್‌ ಮಾಡಿ ’ದಯವಿಟ್ಟು ನನ್ನ ಆಫೀಸ್‌ಗೆ ಕರೆಸಿಕೊಳ್ಳಿ‘ ಎಂದು ಕೇಳಿಕೊಳ್ಳುವ ಹತ್ತಾರು ಇಮೇಜ್‌ ಮೀಮ್‌ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೊನಾಲಿಸಗೆ ಮಾಸ್ಕ್‌ ತೊಡಿಸಿರುವ ಇಮೇಜ್ ಮೀಮ್‌ ’ಕೊರೊನಾಲಿಸ‘ ಅಡಿಬರಹದೊಂದಿಗೆ ಹೆಚ್ಚು ಅಕ್ಷರಗಳೇ ಇಲ್ಲದೆ ಮಜಾ ಕೊಡುತ್ತಿದೆ. ಹಾಗೇ ಇಮೋಜಿಗಳಿಗೂ ಕೊರೊನಾ ವೈರಸ್‌ ಭಯದಿಂದ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿವೆ.

'ಕೊರೊನಾ ವೈರಸ್‌ ವಿಚಾರ ಗಂಭೀರವಾದದ್ದು, ಈ ಬಗ್ಗೆ ಜನರು ಇನ್ನೂ ಹೆಚ್ಚು ಹೆದರುತ್ತಿದ್ದಾರೆ. ಈ ಟೆನ್ಶನ್ ನಡುವೆ ಒಂದು ತಮಾಷೆ ಇರಲಿ; ಎಲ್ಲರು ನಕ್ಕು ಹಗುರಾಗಲಿ ಎಂಬುದು ಮೀಮ್‌ಗಳ ಉದ್ದೇಶವಷ್ಟೆ' ಎನ್ನುವುದು ಯಾರಿವನು ಪುಟದ ಅಡ್ಮಿನ್ ವೆಂಕಟೇಶ್‌ ಶರ್ಮಾ ಅವರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು