ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಅಜಾತಶತ್ರು ಎಂದೇ ಪ್ರಸಿದ್ಧಿ ಪಡೆದಿರುವ ಖ್ಯಾತ ಸಂಗೀತ ನಿರ್ದೇಶಕ ಬಿ.ವಿ.ಶ್ರೀನಿವಾಸ್ ಕನ್ನಡಕ್ಕೆ ಮೊಟ್ಟಮೊದಲ ಬಾರಿಗೆ ಗೋಲ್ಡನ್ ಡಿಸ್ಕ್ ಪ್ರಶಸ್ತಿ ತಂದುಕೊಟ್ಟವರು. ಬಹುವಾದ್ಯ ಪಾರಂಗತರಾಗಿರುವ ಅವರು ಹಾರ್ಮೋನಿಯಂ, ಕೀಬೋರ್ಡ್, ವೈಲಿನ್, ಸಿತಾರ್, ಕೊಳಲು, ಕಂಜೀರಾ ನುಡಿಸಿ ಆಶ್ಚರ್ಯ ಸೃಷ್ಟಿಸಿದ್ಧಾರೆ. 3 ಸಾವಿರಕ್ಕೂ ಹೆಚ್ಚು ದೇವಾಲಯಗಳ ಕುರಿತಂತೆ ಹೊರತಂದಿರುವ ಧ್ವನಿಸುರಳಿಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ದಿಗ್ಗಜ ಸಂಗೀತಗಾರರ ಜೊತೆ ಕೆಲಸ ಮಾಡಿದ್ಧಾರೆ. ಸುಗಮ ಸಂಗೀತದ ಮೂಲಪುರುಷ ಪಿ.ಕಾಳಿಂಗರಾಯರಿಂದ ಹಿಡಿದು ಇಂದಿನ ಯುವ ತಲೆಮಾರಿನ ಗಾಯಕರು ಶ್ರೀನಿವಾಸ್ ಸ್ವರ ಸಂಯೋಜನೆ ಮಾಡಿರುವ ಗೀತೆಗಳನ್ನು ಹಾಡಿದ್ಧಾರೆ. ರಾಜ್ಯದಾದ್ಯಂತ ಸುಗಮ ಸಂಗೀತ ತರಬೇತಿ ಶಿಬಿರ ನಡೆಸಿದ್ದಾರೆ. ವಾದ್ಯ ಸಂಯೋಜನೆಯಲ್ಲಿ ದೊಡ್ಡ ಸಾಧನೆ ಮಾಡಿರುವ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ಧಾರೆ. ಹಾಡುಗಳಿಗೆ ಸ್ವರ ಹಾಕುವಲ್ಲಿ ಅವರ ಸಾಧನೆ ಬಲುದೊಡ್ಡದು. ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋನಲ್ಲಿ ಎಸ್‌ಪಿಬಿ ಅವರ ಜೊತೆ ಕೆಲಸ ಮಾಡಿರುವ ಅವರು ಸ್ಪರ್ಧಿಗಳಿಗೆ ತರಬೇತಿ ನೀಡಿದ್ದಾರೆ. ಬಿ.ವಿ.ಶ್ರೀನಿವಾಸ್ ಅವರ ಸಂಗೀತ ಪ್ರತಿಭೆಯನ್ನು ಕೊಂಡಾಡಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ತೆಲುಗಿನ ‘ಪಾಡುತಾ ತೀಯಗ’ ಸರಣಿಗೂ ಸಂಗೀತ ಸೇವೆ ಕೊಡಿಸಿದ್ದಾರೆ. ಕರ್ನಾಟಕ ಕಲಾಶ್ರೀ ಬಿ.ವಿ.ಶ್ರೀನಿವಾಸ್ ಅವರ ಹಿತಾನುಭವ ಈ ವಾರದ ಜಸ್ಟ್ ಮ್ಯೂಸಿಕ್ ಸರಣಿಯಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.