ಗುರುವಾರ , ಆಗಸ್ಟ್ 5, 2021
22 °C

ಜಸ್ಟ್ ಮ್ಯೂಸಿಕ್ 26: ಎಚ್.ಆರ್.ಲೀಲಾವತಿ ಅವರ ಒಂದು ರೂಪಾಯಿ ನೋಟಿನ ಕತೆ!

ಕನ್ನಡ ಸುಗಮ ಸಂಗೀತ ಪರಂಪರೆಯ ಬೇರು ಈಗಲೂ ಹಸಿರಾಗಿದೆ. ಪಿ.ಕಾಳಿಂಗರಾಯರಿಂದ ಜನ್ಮತಾಳಿದ ಸುಗಮ ಸಂಗೀತ ಪರಂಪರೆಯನ್ನು ಪದ್ಮಚರಣ್‌, ಎಚ್‌.ಆರ್‌.ಲೀಲಾವತಿ, ಎಚ್‌.ಕೆ.ನಾರಾಯಣ ಪೋಷಣೆ ಮಾಡಿ ಹೊಸ ತಲೆಮಾರಿಗೆ ಹಂಚಿದರು. ಇವರನ್ನು ಸುಗಮ ಸಂಗೀತದ ತ್ರಿಮೂರ್ತಿಗಳು ಎಂದೇ ಕರೆಯಲಾಗುತ್ತದೆ. ಕವಿಗಳ ಪ್ರೀತಿಯ ಗಾಯಕಿಯಾಗಿದ್ದ ಎಚ್‌.ಆರ್‌.ಲೀಲಾವತಿ ಅವರು ಆಕಾಶವಾಣಿಯ ಮೊಟ್ಟ ಮೊದಲ ಸಂಗೀತ ಸಂಯೋಜಕಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಬರೋಬ್ಬರಿ ನಾಲ್ಕು ಗಂಟೆ ಹಾಡುತ್ತಿದ್ದ ಅವರು ಕೇಳುಗರ ಮನಸೂರೆಗೊಳ್ಳುತ್ತಿದ್ದರು. 50 ವರ್ಷಗಳ ಹಿಂದೆ ಹೊಳೇನರಸಿಪುರದಲ್ಲಿ ಎಚ್.ಆರ್.ಲೀಲಾವತಿ ಅವರು ಅನುಭವಿಸಿದ ಒಂದು ಘಟನೆಯ ಹಿತಾನುಭವ ಈ ವಾರದ ‘ಜಸ್ಟ್‌ ಮ್ಯೂಸಿಕ್‌’ ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...