ಗುರುವಾರ , ಸೆಪ್ಟೆಂಬರ್ 23, 2021
27 °C

Video | ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಲಾಕ್‌ಡೌನ್‌ ಬಳಿಕ ಹೆಚ್ಚುತ್ತಿದೆ ಕಳ್ಳಬೇಟೆ

ಬೆಂಗಳೂರು: ಕೋವಿಡ್‌ 19 ರೋಗ ನಿಯಂತ್ರಣದ ಸಲುವಾಗಿ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನ ಕಾಡುಗಳಲ್ಲಿ ವನ್ಯಜೀವಿಗಳ ಬೇಟೆ ಪ್ರಮಾಣ ಹೆಚ್ಚುತ್ತಿದೆ.

ರಾತ್ರಿ ವೇಳೆ ಇಬ್ಬರು ಕಳ್ಳಬೇಟೆಗಾರರು ಕೋವಿ ಹೆಗಲಿಗೇರಿಸಿಕೊಂಡು ಇಬ್ಬರು ಶಿಕಾರಿಗೆ ಹೋದ ದೃಶ್ಯ ರಾಗಿಹಳ್ಳಿ ಗ್ರಾಮ ಪಂಚಾಯಿತಿಯ ಜೈಪುರ ದೊಡ್ಡಿ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬುಧವಾರ ರಾತ್ರಿ ಸೆರೆಯಾಗಿದೆ.

ಹಾರೋಹಳ್ಳಿ ವಲಯದ ವ್ಯಾಪ್ತಿಯಲ್ಲಿ ದಾಖಲಾಗಿರುವ ಈ ದೃಶ್ಯವನ್ನು ವನ್ಯಜೀವಿ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.