ಗುರುವಾರ , ಜೂಲೈ 2, 2020
28 °C

ಬಿಡದಿ ಬಳಿ ಹೊತ್ತಿ ಉರಿದ ಕಾರು: ವಿಡಿಯೊ ನೋಡಿ

ರಾಮನಗರ: ತಾಲ್ಲೂಕಿನ ಬಿಡದಿ ಬಳಿ ಶನಿವಾರ ರಾತ್ರಿ  ಮಾರುತಿ ಕಾರೊಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿಯಿತು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊರಟಿದ್ದ ಕಾರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ಚಾಲಕ ಕೆಳಗಿಳಿದು ನೋಡುವಷ್ಟರಲ್ಲಿ ಬೆಂಕಿ ಕೆನ್ನಾಲಗೆ ವ್ಯಾಪಿಸಿತು. ಅಗ್ನಿಶಾಮಕ ದಳ ಬರುವ ಹೊತ್ತಿಗೆ ಕಾರು ಸುಟ್ಟು ಕರಕಲಾಗಿತ್ತು. ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ.