ಸೋಮವಾರ, ಜೂನ್ 14, 2021
26 °C

ಅಂತ್ಯಕ್ರಿಯೆಗೆ ನೆರವಾಗದ ಗ್ರಾಮಸ್ಥರು: ಬೈಕಿನಲ್ಲಿ ಶವ ಸಾಗಣಿಕೆ

 

ಚಾಮರಾಜನಗರ: ಇಲ್ಲಿನ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮಹದೇವಯ್ಯ (65) ಅವರ ಅಂತ್ಯಕ್ರಿಯೆಗೆ ಗ್ರಾಮಸ್ಥರು ನೆರವಾಗಲಿಲ್ಲ. ಮೃತಪಟ್ಟ 2 ದಿನಗಳ ನಂತರ ಪಿಎಫ್‌ಐ ಸಂಘಟನೆಯ ಸ್ವಯಂಸೇವಕರು ಇವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಯತ್ನಿಸಿದರಾದರೂ ಪಕ್ಕದ ಹಳ್ಳಿಯ ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಕೊನೆಗೆ ಪೊಲೀಸರ ಸಹಕಾರದಿಂದ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.