ಮಂಗಳವಾರ, ಏಪ್ರಿಲ್ 20, 2021
32 °C

VIDEO: ಮರಕ್ಕೆ ಕಾರು ಡಿಕ್ಕಿಯಾಗಿ ಹೊತ್ತಿಕೊಂಡ ಬೆಂಕಿ| ಚಾಲಕ ಸಜೀವ ದಹನ

ರಾಯಚೂರು: ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಕಾರು ಜಮೀನೊಂದಕ್ಕೆ ನುಗ್ಗಿ ಬೆಂಕಿಯಲ್ಲಿ ಬೆಂದುಹೋಗಿದ್ದು, ಅದರಲ್ಲಿದ್ದ ಚಾಲಕ ಸಜೀವ ದಹನವಾದ ಘಟನೆ ರಾಯಚೂರು ತಾಲ್ಲೂಕಿನ ಕಲ್ಮಲಾ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ. ಸಿರವಾರ ತಾಲ್ಲೂಕು ಮಲ್ಲಟ ಗ್ರಾಮದ ಸದಾನಂದಗೌಡ ಮಾಲಿಪಾಟೀಲ (60) ದಹನಗೊಂಡಿದ್ದು, ರಾಯಚೂರಿನತ್ತ ಬರುವಾಗ ಈ ಅನಾಹುತ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದರೂ ಬೆಂಕಿ ಕೆನ್ನಾಲಿಗೆ ನೋಡಿ ನಿಸ್ಸಹಾಯಕರಾಗಿದ್ದಾರೆ.

ಇದನ್ನೂ ನೋಡಿ.. VIDEO: ಟಿಪ್ಪರ್ ಲಾರಿಯ ಡೀಸೆಲ್‌ ಟ್ಯಾಂಕರ್‌ಗೆ ಕಾರು ಡಿಕ್ಕಿ: ಹೊತ್ತಿ ಉರಿದ ಎರಡೂ ವಾಹನಗಳು