ಗುರುವಾರ , ಆಗಸ್ಟ್ 5, 2021
21 °C

ತರಕಾರಿಯನ್ನು ಕಾಲಿನಿಂದ ಚೆಲ್ಲಾಪಿಲ್ಲಿಗೊಳಿಸಿ ಅಸಭ್ಯ ವರ್ತನೆ: ಪಿಎಸ್ಐ ಅಮಾನತು

ರಾಯಚೂರು: ನಗರದ ರಸ್ತೆ ಪಕ್ಕದಲ್ಲಿ ಭಾನುವಾರ ತರಕಾರಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಧಾವಿಸಿ, ಕಾಲಿನಿಂದ ತರಕಾರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಅಸಭ್ಯವಾಗಿ ವರ್ತಿಸಿದ ಸದರ್ ಬಜಾರ್ ಠಾಣೆಯ ಪಿಎಸ್ಐ ಆಜಮ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ‌ಅವರು ಸೇವೆಯಿಂದ ಅಮಾನತು ಮಾಡಿದ್ದಾರೆ.