ಗುರುವಾರ , ಜುಲೈ 29, 2021
21 °C

ಉಡುಪಿ: ದೋಣಿಯಲ್ಲಿ ವಿದ್ಯಾರ್ಥಿಗಳನ್ನು ಕರೆತಂದ ಡಿಡಿಪಿಐ

ಉಡುಪಿ: ಮಳೆಯ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಡಿಡಿಪಿಐ ಎನ್‌.ಎಚ್‌.ನಾಗೂರ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಬೈಂದೂರು ತಾಲ್ಲೂಕಿನ ಕುರುದ್ವೀಪಕ್ಕೆ ತೆರಳಿ ಅಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ದೋಣಿಯ ಸಹಾಯದಿಂದ ಪರೀಕ್ಷಾ ಕೇಂದ್ರಕ್ಕೆ ಕರೆತಂದರು.

ಭಾರಿ ಮಳೆಗೆ ಮರವಂತೆ ಸಮೀಪದ ಕುರುದ್ವೀಪ ಜಲಾವೃತಗೊಂಡು ಸಾರಿಗೆ ಸಂಪರ್ಕ ಕಡಿದುಕೊಂಡಿತ್ತು. ನೆರೆಯ ನಡುವೆಯೇ ದ್ವೀಪದಲ್ಲಿದ್ದ ಶಿಲ್ಪಾ ಹಾಗೂ ಸಂಜನಾ ಎಂಬ ವಿದ್ಯಾರ್ಥಿನಿಯರು ಜುಲೈ 19ರಂದು ದೋಣಿಯಲ್ಲಿ ಬಂದು ಪರೀಕ್ಷೆ ಬರೆದಿದ್ದರು. ಈ ವಿಚಾರ ತಿಳಿದ ಡಿಡಿಪಿಐ ಗುರುವಾರ ಬೆಳಿಗ್ಗೆ ಬೈಂದೂರು ತಹಶೀಲ್ದಾರ್ ಹಾಗೂ ಬಿಇಒ ಜತೆ ದ್ವೀಪಕ್ಕೆ ತೆರಳಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು. ನಂತರ ದೋಣಿಯಲ್ಲಿ ದಡಕ್ಕೆ ಕರೆತಂದು ಅಲ್ಲಿಂದ ಇಲಾಖೆಯ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು.