ಬುಧವಾರ, ಜೂನ್ 16, 2021
23 °C

ಕುಕ್ಕರ್ ಚಿತ್ರಾನ್ನ - ನೋಡಿ ಕಲಿಯಿರಿ

ಬೇಕಾಗುವ ಸಾಮಗ್ರಿಗಳು: ಅಕ್ಕಿ 1 ಕಪ್, ಎಣ್ಣೆ 3-4 ಚಮಚ, ಸಾಸಿವೆ ಅರ್ಧ ಚಮಚ, ಕಡಲೆ ಬೇಳೆ ಒಂದು ಚಮಚ, ಕಡಲೆಬೀಜ ಎರಡು ಚಮಚ, ಹಸಿಮೆಣಸಿನಕಾಯಿ 6, ಈರುಳ್ಳಿ 1, ಟೊಮೆಟೊ 1, ಉಪ್ಪು ರುಚಿಗೆ ತಕ್ಕಷ್ಟು, ಕರಿಬೇವು 10 ಎಲೆಗಳು.

ಮಾಡುವ ವಿಧಾನ: ಮೊದಲು ಕುಕ್ಕರ್ ಗೆ ಎಣ್ಣೆಯನ್ನು ಹಾಕಿ, ಅದು ಕಾದ ನಂತರ ಸಾಸಿವೆ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ.ಈಗ ಇದಕ್ಕೆ ಕಡಲೆಬೇಳೆ ಹಾಗೂ ಕಡಲೆಕಾಯಿ ಬೀಜ ಹಾಕಿ ಹುರಿದುಕೊಳ್ಳಿ, ನಂತರ ಈರುಳ್ಳಿ ಮೆಣಸಿನಕಾಯಿ ಟೊಮೆಟೊ ಹಾಕಿ ಚೆನ್ನಾಗಿ ಹುರಿದುಕೊಂಡು,ಎರಡು ಲೋಟ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಕುದಿ ಬಂದ ನಂತರ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಕುಕ್ಕರ್ ಮುಚ್ಚಿ ಎರಡು ಕೂಗು ಕೂಗಿಸಿ. ಈಗ ರುಚಿಯಾದ ಧಿಡೀರನೆ ಮಾಡುವಂತ ಕುಕ್ಕರ್ ಚಿತ್ರಾನ್ನ ಸವಿಯಲು ಸಿದ್ಧ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp