ಬುಧವಾರ, ಜೂನ್ 16, 2021
28 °C

ನೋಡಿ: ಕ್ರಾಂತಿ ಕವಿಗೆ ಗೀತ ನಮನ

ಹೋರಾಟದ ಕ್ರಾಂತಿಗೀತೆಗಳನ್ನು ಬರೆದು, ಯುವಜನಾಂಗದಲ್ಲಿ ಬದಲಾವಣೆಯ ಕಿಚ್ಚು ಹಚ್ಚಿದವರು ಸಿದ್ದಲಿಂಗಯ್ಯನವರು. ಅಸಮಾಧಾನವೊಂದು ಆಕ್ರೋಶವಾಗಿ ಬದಲಾಗುವುದು, ಅದು ಪದ ಲಾಲಿತ್ಯದಲ್ಲಿ, ಧ್ವನಿ ಕಳೆದುಕೊಂಡವರ ಪಾಡು ಹಾಡಾಗಿದ್ದು ವಿಶೇಷ. ಕನ್ನಡ ಸಾಹಿತ್ಯದಲ್ಲಿ ಅಸಮಾನತೆಯ ವಿರುದ್ಧದ ಸಂವೇದನೆಯನ್ನು ದಾಖಲಿಸಿದ ಕವಿ ಸಿದ್ದಲಿಂಗಯ್ಯ ಇಂದು ಚಿರನಿದ್ರೆಗಿಳಿದರು. ಹೊಲೆ ಮಾದಿಗರ ಹಾಡು, ಅವತಾರಗಳು, ಗ್ರಾಮದೇವತೆಗಳು, ಊರು ಕೇರಿ, ಮೆರವಣಿಗೆ, ಏಕಲವ್ಯ, ಕತ್ತೆ ಮತ್ತು ಧರ್ಮ ಹೀಗೆ ಅನೇಕ ಪುಸ್ತಕಗಳಿಂದ ಹಲವರ ಆತ್ಮಕಥನಗಳಿಗೆ ಭಾಷ್ಯ ನೀಡಿದರು. ಇನ್ನೂ ಕೆಲವರಿಗೆ ಆತ್ಮವಿಶ್ವಾಸವಾದರು. ಹಲವರಿಗೆ ಆತ್ಮಶೋಧನೆಗಿಳಿಯುವಂತೆ ಮಾಡಿದರು. ದಮನಿತರ, ಶೋಷಿತರ ಧ್ವನಿಯಾಗಿ, ಆಳುವ ವರ್ಗದವರಿಗೆ ಪ್ರಶ್ನಿಸುವ ಧರ್ವನಿಯಾಗಿ, ಧರ್ಮದಿಂದ ಮೌಢ್ಯ ಬಿತ್ತುವವರ ವಿರುದ್ಧ ಟೀಕೆಯ ಧ್ವನಿಯಾಗಿ ಅವರ ಕಾವ್ಯ ಎಂದೆದಿಗೂ ಸಾಕ್ಷಿ ಪ್ರಜ್ಞೆಯಾಗಿ ನಮ್ಮೊಂದಿಗಿರುತ್ತದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...