ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೌಟುಂಬಿಕ ದೌರ್ಜನ್ಯ ಸಹಾಯಹಸ್ತ: ಹೊಡೆದರಷ್ಟೆ ದೌರ್ಜನ್ಯವೇ?

Published : 11 ಏಪ್ರಿಲ್ 2025, 23:30 IST
Last Updated : 11 ಏಪ್ರಿಲ್ 2025, 23:30 IST
ಫಾಲೋ ಮಾಡಿ
Comments
ಹೊಡೆಸಿಕೊಳ್ಳುವವರಿಗಿಂತಲೂ ಹೊಡೆಯುವವರು ನಿಜವಾದ ದುರ್ಬಲರು. ಆ ಕ್ಷಣಕ್ಕೆ ಕೋಪವನ್ನು ನಿಯಂತ್ರಿಸುವ ಶಕ್ತಿ ಹಾಗೂ ವಿವೇಚನೆಯನ್ನು ಹೊಡೆಯುವವರು ಕಳೆದುಕೊಂಡಿರುತ್ತಾರೆ. ಕೌಟುಂಬಿಕ ದೌರ್ಜನ್ಯದ ಜಾಲದಲ್ಲಿ ಸಿಲುಕಿ ನಲುಗುವುದಕ್ಕೆ ಹೆಣ್ಣು–ಗಂಡಿನ ಭೇದವಿಲ್ಲವಾದರೂ ಇಲ್ಲಿಯೂ ಈ ದೌರ್ಜನ್ಯವನ್ನು ತುಟಿಕಚ್ಚಿ ಸಹಿಸುವವರು ಬಹುಪಾಲು ಹೆಣ್ಣುಮಕ್ಕಳೇ.
‘ರೀಚ್‌ ಲಾಯರ್‌’ ಮಾಡುವುದಿಷ್ಟು
ನೊಂದ ಹೆಣ್ಣುಮಗಳಿಗೆ ಮೂರರಿಂದ ನಾಲ್ಕು ಬಾರಿ ಆಪ್ತಸಮಾಲೋಚನೆ ನಡೆಸಿ, ಆಕೆಯ ನಿಜವಾದ ಸಮಸ್ಯೆ ಹಾಗೂ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಲಾಗುತ್ತದೆ. ಆ ಸಮಸ್ಯೆಗೆ ಯೋಗ್ಯವಾದ ಕಾನೂನಾತ್ಮಕ ಪರಿಹಾರದ ಜತೆಗೆ ರಚನಾತ್ಮಕ ದಾರಿಯ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ಹಲವು ಬಾರಿ ಕುಟುಂಬದಲ್ಲಿ ವಿಚ್ಛೇದನ ಇಷ್ಟ ಇರುವುದಿಲ್ಲ. ಕೌಟುಂಬಿಕವಾಗಿ, ಸಾಮಾಜಿಕವಾಗಿ ಹಲವು ಒತ್ತಡಗಳಿರುತ್ತವೆ. ಇವುಗಳನ್ನೆಲ್ಲ ಪರಿಗಣಿಸಿ, ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಗಳ ಮುಂದೆ ಹಲವು ಕಾನೂನಾತ್ಮಕ ಆಯ್ಕೆಗಳನ್ನು ತೆರೆದಿಡಲಾಗುತ್ತದೆ ಎನ್ನುತ್ತಾರೆ ವೆಂಕಟೇಶ್‌. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಕಾನೂನು ಸಲಹೆ ಪಡೆಯಲು 91-89718 63465 ಸಂಪರ್ಕಿಸಬಹುದು.ಜತೆಗೆ speak2soz@gmail.com ಮೇಲ್ ಕೂಡ ಮಾಡಬಹುದು.
ಮಾನಸಿಕ ಸದೃಢತೆ ಅಗತ್ಯ
ಕೌಟುಂಬಿಕ ದೌರ್ಜನ್ಯಕ್ಕೆ ಕಾರಣಗಳು ಸಂದರ್ಭಕ್ಕಾನುಸಾರ ಬೇರೆ ಬೇರೆ ಇರುತ್ತವೆ. ಈಡೇರದ ಬಯಕೆಗಳು, ಹೊಂದಾಣಿಕೆ ಸಮಸ್ಯೆ, ಒತ್ತಾಯದ ಮದುವೆ ಮತ್ತು ಉಳಿಯದ ಬದ್ಧತೆ ಹೀಗೆ ನಾನಾ ಕಾರಣಗಳಿಗೆ ದೌರ್ಜನ್ಯ ಉಂಟಾಗಬಹುದು. ಪ್ರತಿ ಕಥೆಯೂ ಬೇರೆಯದ್ದೇ ಆಗಿರುತ್ತದೆ. ಸಾಮಾಜಿಕ, ದೈಹಿಕ, ಭಾವಾನಾತ್ಮಕ ದೌರ್ಜನ್ಯಗಳಿರುತ್ತವೆ. ಹೊಡೆಯದೆಯೂ ‘ನಿನ್ನ ಕೈಲಿ ಏನು ಆಗುತ್ತೆ. ನಿನ್ನ ಬದುಕೇ ನಿಷ್ಪ್ರಯೋಜಕ’ ಅಂಥ ಸದಾ ಸಂಗಾತಿಯನ್ನು ಹಳಿಯುತ್ತ ಇರುವುದು ಮಾನಸಿಕ ಆಘಾತವನ್ನು ಉಂಟು ಮಾಡಬಹುದು. ಈ ದೌರ್ಜನ್ಯ ಮಾಡುವವರಿಗೆ ಗಂಡು ಹೆಣ್ಣೆಂಬುದಿರುವುದಿಲ್ಲ. ಇದೊಂದು ಮನಸ್ಥಿತಿ. ಕೆಲವೊಮ್ಮೆ ಗಂಡ ಹೆಂಡತಿಯ ನಡುವೆ ಸಮಸ್ಯೆ ಇರುವುದಿಲ್ಲ. ಅತ್ತೆ ಮತ್ತು ಸೊಸೆಯ ನಡುವೆ ಹೊಂದಾಣಿಕೆಯ ಕೊರತೆ ಉಂಟಾಗಿ ಅದು ದೌರ್ಜನ್ಯಕ್ಕೆ ಕಾರಣವಾಗಬಹುದು. ಹೆಣ್ಣಿರಲಿ, ಗಂಡಿರಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾನಸಿಕ ಸದೃಢತೆಯನ್ನು ಬೆಳೆಸಿಕೊಳ್ಳಬೇಕು.– ಮೀನಾ ಜೈನ್‌, ಮನೋಚಿಕಿತ್ಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT