ಕೇರಳದ ಮಲಪ್ಪುರಂ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ರಾಣಿ ಸೋಯಾಮೋಯ್, ಅಂದು ಆ ಊರಿನ ಪ್ರತಿಷ್ಠಿತ ಕಾಲೇಜಿಗೆ ಭೇಟಿ ನೀಡುವವರಿದ್ದರು. ಆ ಯುವ ಮಹಿಳಾ ಅಧಿಕಾರಿಗಾಗಿ ತುದಿಗಾಲಿನಲ್ಲಿ ಕಾಯುತ್ತಾ ನಿಂತಿದ್ದ ವಿದ್ಯಾರ್ಥಿಗಳಿಗೆ, ಅವರನ್ನು ಕಂಡ ಕೂಡಲೆ ಭಾರಿ ನಿರಾಸೆಯಾಯಿತು. ಆಧುನಿಕ ಗೆಟಪ್ಪಿನ ವರ್ಚಸ್ವಿ ಯುವತಿಯೊಬ್ಬರನ್ನು ನಿರೀಕ್ಷಿಸಿದ್ದವರಿಗೆ, ಕಪ್ಪು ಮೈಬಣ್ಣದ, ಮೇಕಪ್ಪಿನ ಸೋಂಕೂ ಇರದ, ಪೇಲವ ಮುಖಭಾವದ ಆ ಮಹಿಳೆಯನ್ನು ಜಿಲ್ಲಾಧಿಕಾರಿ ಎಂದು ನಂಬಲೂ ಸಾಧ್ಯವಾಗಲಿಲ್ಲ.

ಒಂದೆರಡು ನಿಮಿಷಗಳಲ್ಲೇ ಆಕೆ ಮಾತು ಮುಗಿಸಿದ್ದರು. ಆದರೆ ಅದು ಸಂಪೂರ್ಣ ಆತ್ಮವಿಶ್ವಾಸ ಮತ್ತು ಬದ್ಧತೆಯಿಂದ ಕೂಡಿತ್ತು. ಬಳಿಕ ನಡೆದ ಸಂವಾದದಲ್ಲಿ ಮಕ್ಕಳ ಪ್ರಶ್ನೆಗಳಿಗೆ ರಾಣಿ ಶಾಂತಚಿತ್ತರಾಗಿ, ಚುಟುಕಾಗಿ ಉತ್ತರಿಸಿದರು. ತುಂಟ ಹುಡುಗಿಯೊಬ್ಬಳು ಎದ್ದುನಿಂತು ‘ಮೇಡಂ, ನೀವ್ಯಾಕೆ ಮುಖಕ್ಕೆ ಮೇಕಪ್ಪನ್ನೇ ಹಾಕಿಕೊಂಡಿಲ್ಲ? ಕನಿಷ್ಠ ಪೌಡರ್ ಅನ್ನೂ ಹಚ್ಚಿಲ್ಲ?’ ಎಂದು ತನ್ನ ಮನದಲ್ಲಿ ಆಗಿನಿಂದಲೂ ಕೊರೆಯುತ್ತಲೇ ಇದ್ದ ಪ್ರಶ್ನೆಯನ್ನು ಕೇಳಿಯೇಬಿಟ್ಟಳು. ಕೂಡಲೇ ಜಿಲ್ಲಾಧಿಕಾರಿಯ ಮುಖ ಕಪ್ಪಿಟ್ಟಿತು, ಮುಗುಳ್ನಗು ಮಾಯವಾಯಿತು. ಅದನ್ನು ಕಂಡ ಪ್ರೇಕ್ಷಕರೂ ಒಮ್ಮೆಗೇ ಮೌನವಾದರು. ಮೇಜಿನ ಮೇಲಿದ್ದ ಬಾಟಲಿಯನ್ನೆತ್ತಿ ಗಟಗಟನೆ ನೀರು ಕುಡಿದ ಜಿಲ್ಲಾಧಿಕಾರಿ ನಿಧಾನವಾಗಿ ಮಾತನಾಡತೊಡಗಿದರು.

‘ಈ ಪ್ರಶ್ನೆಗೆ ನಾನು ಒಂದು ವಾಕ್ಯದ ಉತ್ತರ ಕೊಡುವುದು ಅಸಾಧ್ಯ. ಅದಕ್ಕಾಗಿ ನನ್ನ ಜೀವನಗಾಥೆಯನ್ನೇ ನಾನೀಗ ಹೇಳಬೇಕಾಗುತ್ತದೆ. ಕೇಳಲು ನಿಮ್ಮ ಅಮೂಲ್ಯವಾದ ಒಂದಷ್ಟು ಸಮಯವನ್ನು ನನಗಾಗಿ ಕೊಡುವಿರಾ?’ ಎಂದಾಗ ‘ಓ ಆಗಲಿ’ ಎಂಬ ಧ್ವನಿ ಸಭಾಂಗಣದಲ್ಲಿ ಮೊಳಗಿತು. ‘ಹಾಗಿದ್ದರೆ ಕೇಳಿ. ನಾನು ಹುಟ್ಟಿದ್ದು ಜಾರ್ಖಂಡ್ ರಾಜ್ಯದ ಕೊಡೆರ್ಮ ಜಿಲ್ಲೆಯ ಬುಡಕಟ್ಟು ಪ್ರದೇಶವೊಂದರಲ್ಲಿ. ಅಲ್ಲಿದ್ದ ಪುಟ್ಟ ಗುಡಿಸಲಿನಲ್ಲಿ ನನ್ನ ಇಬ್ಬರು ಅಣ್ಣಂದಿರು, ಒಬ್ಬಳು ತಂಗಿ ಎಲ್ಲರೂ ನೆಲಸಿದ್ದೆವು. ನನ್ನ ಅಪ್ಪ– ಅಮ್ಮ ಕನಿಷ್ಠ ಕೂಲಿಗಾಗಿ ಮೈಕಾ (ಅಭ್ರಕ ಅಥವಾ ಕಾಗೆ ಬಂಗಾರ) ಗಣಿಯಲ್ಲಿ ದುಡಿಯುತ್ತಿದ್ದರು’.

‘ಅದೊಂದು ದುರ್ಗಮ ಕೆಲಸವಾಗಿತ್ತು. ನಾನು ನಾಲ್ಕು ವರ್ಷದವಳಾಗಿದ್ದಾಗ ನನ್ನ ಹೆತ್ತವರು ಮತ್ತು ಅಣ್ಣಂದಿರು ಕಾಯಿಲೆಯಿಂದ ಹಾಸಿಗೆ ಹಿಡಿದರು. ತಮ್ಮ ಉಸಿರಿನಲ್ಲಿ ಬೆರೆತುಹೋಗಿದ್ದ ಮೈಕಾ ದೂಳೇ ಅದಕ್ಕೆ ಕಾರಣ ಎಂಬುದು ಅವರಿಗೆ ತಿಳಿದಿರಲೇ ಇಲ್ಲ. ನಾನು ಐದರ ಪೋರಿಯಾದಾಗ ನನ್ನ ಇಬ್ಬರೂ ಅಣ್ಣಂದಿರು ಹಸಿವು ಮತ್ತು ಕಾಯಿಲೆಗೆ ಬಲಿಯಾಗಿಹೋದರು’.

ಹೀಗೆ ಹೇಳುತ್ತಲೇ ನಿಟ್ಟುಸಿರು ಬಿಟ್ಟ ಜಿಲ್ಲಾಧಿಕಾರಿ, ಕ್ಷಣಕಾಲ ಮಾತು ನಿಲ್ಲಿಸಿದರು. ತುಂಬಿದ್ದ ಕಣ್ಣಾಲಿಗಳನ್ನು ಮುಚ್ಚಿಕೊಂಡರು.

‘ಎಷ್ಟೋ ದಿನ ನಮ್ಮ ಊಟ ಬರೀ ನೀರು ಅಥವಾ ಒಂದೆರಡು ತುಂಡು ಬ್ರೆಡ್ ಆಗಿರುತ್ತಿತ್ತು. ಮೂಳೆಚಕ್ಕಳ ಬಿಟ್ಟುಕೊಂಡು ಕೃಶವಾಗಿಹೋಗಿದ್ದ ನನ್ನನ್ನು ಒಂದು ದಿನ ನನ್ನಪ್ಪ ಸಮೀಪದಲ್ಲಿದ್ದ ಮೈಕಾ ಗಣಿಗೆ ಎಳೆದೊಯ್ದರು. ಅಬ್ಬಾ, ಅದೆಷ್ಟು ದೊಡ್ಡದಾಗಿತ್ತು ಗೊತ್ತೇ? ತೋಡಿ ತೋಡಿ ಆಳಕ್ಕಿಳಿದಿದ್ದ ಅಲ್ಲಿನ ಕೊರಕಲುಗಳ ಪುಟ್ಟ ಪುಟ್ಟ ಗುಹೆಗಳ ಒಳಗೆ ತೆವಳಿಕೊಂಡು ಹೋಗಿ, ಮೈಕಾ ಅದಿರನ್ನು ಹೆಕ್ಕಿ ತರುವ ಕೆಲಸಕ್ಕೆ ನನ್ನನ್ನು ಹಚ್ಚಿದರು. ‘ರ್ಯಾಟ್ ಮೈನಿಂಗ್’ ಎನ್ನಲಾಗುವ ಆ ಕಾರ್ಯವನ್ನು 10 ವರ್ಷದ ಒಳಗಿನ ಮಕ್ಕಳಷ್ಟೇ ಮಾಡಲು ಸಾಧ್ಯ. ನನ್ನ ಜೀವನದಲ್ಲಿ ಅಂದೇ ಮೊದಲ ಬಾರಿ ನಾನು ಹೊಟ್ಟೆ ತುಂಬಾ ಉಂಡಿದ್ದೆ’.

‘ಹೊರಪ್ರಪಂಚದಲ್ಲಿ ನನ್ನ ಓರಗೆಯ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುತ್ತಿದ್ದಾಗ, ನಾನು ಗಣಿಯ ವಿಷಕಾರಿ ದೂಳು ಕುಡಿಯುತ್ತಾ ಕಗ್ಗತ್ತಲ ಗುಹೆಗಳಲ್ಲಿ ‘ಕಾಗೆ ಬಂಗಾರ’ದ ಬೆನ್ನು ಹತ್ತುತ್ತಿದ್ದೆ. ನನ್ನಂತೆಯೇ ದುಡಿಯುತ್ತಿದ್ದ ಎಷ್ಟೋ ಮಕ್ಕಳು, ಆಗಾಗ ಸಂಭವಿಸುತ್ತಿದ್ದ ಭೂಕುಸಿತಕ್ಕೆ ಅಥವಾ ಕಾಯಿಲೆಗಳಿಗೆ ಬಲಿಯಾಗುವುದು ಸಾಮಾನ್ಯ ಸಂಗತಿಯಾಗಿ ಹೋಗಿತ್ತು. ಹಸಿವು, ನೀರಡಿಕೆಯಿಂದ ಕಂಗೆಟ್ಟಿದ್ದರೂ ಎದೆಗುಂದದೆ ದಿನಕ್ಕೆ 8 ಗಂಟೆ ದುಡಿದರಷ್ಟೇ ಕನಿಷ್ಠ ಒಂದು ಪೌಂಡ್ ಬ್ರೆಡ್ ಕೊಳ್ಳುವಷ್ಟು ಕಾಸು ನಮಗೆ ದಕ್ಕುತ್ತಿತ್ತು’.

‘ವರ್ಷದ ಬಳಿಕ ನನ್ನ ತಂಗಿಯೂ ನನ್ನೊಟ್ಟಿಗೆ ಬರತೊಡಗಿದಳು. ಅಪ್ಪ– ಅಮ್ಮ ಮತ್ತು ನಾವಿಬ್ಬರು ಒಟ್ಟಿಗೆ ದುಡಿಯುತ್ತಾ ತುತ್ತಿನಚೀಲ ತುಂಬಿಸಿಕೊಳ್ಳ ತೊಡಗಿದೆವು. ಆದರೆ ವಿಧಿಯ ಆಟ ಬೇರೆಯದೇ ಆಗಿತ್ತು. ಒಂದು ದಿನ ತೀವ್ರ ಜ್ವರದಿಂದ ನಾನು ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದಾಗ ಭಾರಿ ಮಳೆ ಶುರುವಾಯಿತು. ನೋಡನೋಡುತ್ತಿದ್ದಂತೆಯೇ ಗಣಿಯಲ್ಲಿ ಭೂಕುಸಿತ ಸಂಭವಿಸಿ ನೂರಾರು ಕಾರ್ಮಿಕರು ಪ್ರಾಣ ಬಿಟ್ಟರು. ಅವರಲ್ಲಿ ನನ್ನಪ್ಪ, ಅಮ್ಮ, ತಂಗಿಯೂ ಸೇರಿದ್ದರು’.

ಜಿಲ್ಲಾಧಿಕಾರಿಯ ಕಣ್ಣಿಂದ ಧಾರಾಕಾರವಾಗಿ ಕಣ್ಣೀರು ಸುರಿಯತೊಡಗಿತು. ಉಸಿರು ಬಿಗಿಹಿಡಿದು ಕೇಳುತ್ತಿದ್ದ ಪ್ರೇಕ್ಷಕರ ಕಣ್ಣಾಲಿಗಳು ಸಹ ಒದ್ದೆಯಾದವು.

‘ನನಗಾಗ ಕೇವಲ 6 ವರ್ಷ. ಯಾರೋ ಅನಾಥಾಶ್ರಮಕ್ಕೆ ಸೇರಿಸಿದರು. ಅಲ್ಲಿದ್ದವರು ನನಗೆ ಓದು– ಬರಹ ಕಲಿಸಿದರು. ಆ ಮೂಲಕ, ನನ್ನ ಹಳ್ಳಿಯಲ್ಲಿ ಅಕ್ಷರ ಕಲಿತ ಮೊದಲಿಗಳಾದೆ. ಅದರ ಫಲವಾಗಿಯೇ ಇದೋ ನೋಡಿ, ಈಗ ಇಲ್ಲಿ ನಿಂತಿದ್ದೇನೆ ನಿಮ್ಮೆದುರು, ನಿಮ್ಮ ಜಿಲ್ಲಾಧಿಕಾರಿಯಾಗಿ. ನನ್ನ ಈ ಕತೆಗೂ ನಾನು ಮೇಕಪ್ ಮಾಡಿಕೊಳ್ಳದಿರುವುದಕ್ಕೂ ಎಲ್ಲಿಗೆಲ್ಲಿಯ ಸಂಬಂಧ ಎಂದು ನಿಮಗೆ ಅನ್ನಿಸುತ್ತಿರಬಹುದು. ಆ ಕಿರಿದಾದ ಗುಹೆಗಳ ಒಳಗೆ ಪುಟ್ಟ ಪುಟ್ಟ ಮಕ್ಕಳು ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಹೋಗಿ ಹೊತ್ತು ತರುವ ಮೈಕಾವನ್ನು ಮೇಕಪ್ ಉತ್ಪನ್ನಗಳ ತಯಾರಿಕೆಗೆ ಬಳಸುತ್ತಾರೆ ಎನ್ನುವುದು ನಂತರ ನನಗೆ ತಿಳಿಯಿತು. ನಿಮ್ಮ ಚರ್ಮ ಫಳಫಳನೆ ಹೊಳೆಯುವಂತೆ ಮಾಡುವ ದೊಡ್ಡ ದೊಡ್ಡ ಕಾಸ್ಮೆಟಿಕ್ ಕಂಪನಿಗಳ ಕ್ರೀಮ್ಗಳು, ನಿಮ್ಮ ಕೆನ್ನೆಗಳ ಮೇಲೆ ಮೃದುವಾಗಿ ಹರಡಿಕೊಂಡು ಮಧುರ ಭಾವನೆ ಉಕ್ಕಿಸುವ ಚೀಕ್ ರೋಸ್... ಎಲ್ಲವೂ ಆ ಬಂಡೆಗಳ ನಡುವೆ ಹುದುಗಿಹೋಗುವ ಅದೇ ಮಕ್ಕಳ ಕಮರಿದ ಬದುಕಿನ ಫಲವೇ ಆಗಿರುತ್ತವೆ’.

‘ನಮ್ಮ ಚೆಲುವು ಹೆಚ್ಚಿಸಲು ನೆರವಾಗುವ ಲಕ್ಷಾಂತರ ಡಾಲರ್ ಮೌಲ್ಯದ ಆ ಮೈಕಾವನ್ನು ಈಗಲೂ ಗಣಿಗಳಿಂದ ಹೆಕ್ಕುವುದು ಚಿಣ್ಣರೇ. ಈಗ ಹೇಳಿ, ನಾನು ಹೇಗೆತಾನೇ ಮೇಕಪ್ ಮಾಡಿಕೊಳ್ಳಲಿ? ಹಸಿವಿನಿಂದ ಪ್ರಾಣತೆತ್ತ ಅಣ್ಣಂದಿರ ನೆನಪು ಸದಾ ನನ್ನನ್ನು ಕಾಡುವಾಗ, ಹೇಗೆ ತಾನೇ ಹೊಟ್ಟೆ ತುಂಬಾ ಊಟ ಮಾಡಲಿ? ಯಾವಾಗಲೂ ಹರಿದ ಸೀರೆಯಲ್ಲೇ ಇರುತ್ತಿದ್ದ ನನ್ನಮ್ಮನ ಚಿತ್ರ ನನ್ನ ಮನದಲ್ಲಿ ಅಚ್ಚೊತ್ತಿರುವಾಗ ರೇಷ್ಮೆ ಉಡುಪನ್ನು ಹೇಗೆ ತಾನೇ ತೊಡಲಿ?’

ಅಷ್ಟು ಹೇಳಿದ ಆಕೆ ವಿಷಾದದ ನಗುವಿನೊಂದಿಗೆ ತಲೆ ಮೇಲೆತ್ತಿ ಮೌನವಾಗಿ ಹೊರನಡೆದಾಗ, ಸಭಾಂಗಣದಲ್ಲಿದ್ದ ಎಲ್ಲರೂ ತಮ್ಮಷ್ಟಕ್ಕೇ ಎದ್ದು ನಿಂತರು. ಅವರ ಮುಖದಲ್ಲಿದ್ದ ಮೇಕಪ್, ಅವರೆಲ್ಲರ ಕಣ್ಣುಗಳಿಂದ ಇಳಿಯುತ್ತಿದ್ದ ಕಂಬನಿಯೊಂದಿಗೇ ಜಾರಿ ಹೋಗುತ್ತಿತ್ತು.

ಇಂಥದ್ದೊಂದು ಸುದೀರ್ಘ ಚಿತ್ರಣವುಳ್ಳ ಮನಕಲಕುವ ಪೋಸ್ಟ್, ಅದೇ ಕಪ್ಪು ಮೈಬಣ್ಣದ, ಪೇಲವ ಮುಖಭಾವದ ಮಹಿಳೆಯೊಬ್ಬರ ಚಿತ್ರದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಸುಮಾರು 2–3 ವರ್ಷಗಳ ಹಿಂದೆ ಮೊದಲ ಬಾರಿಗೆ ಕಂಡಾಗಿನಿಂದ ಇಂದಿನವರೆಗೂ ದೇಶದಾದ್ಯಂತ ಅದನ್ನು ಓದಿದ ಸಾವಿರಾರು ಮಂದಿಯ ಕಣ್ಣುಗಳು ತುಂಬಿಬಂದಿವೆ. ಎಂತಹ ಕಡುಕಷ್ಟದಲ್ಲಿ ಅರಳಿದ ಮಾದರಿ ಬದುಕು ಈ ರಾಣಿ ಮೋಯ್ದು ಎಂದು ಹಲವರು ಕೊಂಡಾಡಿದ್ದಾರೆ, ಲೈಕ್ ಗುಂಡಿ ಒತ್ತಿದ್ದಾರೆ, ಶೇರ್ ಮಾಡಿಕೊಂಡಿದ್ದಾರೆ, ಆಕೆಗೆ ಮನಃಪೂರ್ವಕವಾಗಿ ಹಾರೈಸಿದ್ದಾರೆ.

ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲದ ಆಘಾತಕಾರಿ ಸಂಗತಿಯೆಂದರೆ, ಇದೊಂದು ಫೇಕ್ ನ್ಯೂಸ್ ಎನ್ನುವುದು! ವಾಸ್ತವದಲ್ಲಿ ರಾಣಿ ಮೋಯ್ ಎನ್ನುವ ಹೆಸರಿನವರ್ಯಾರೂ ಮಲಪ್ಪುರಂ ಜಿಲ್ಲಾಧಿಕಾರಿಯೇ ಆಗಿರಲಿಲ್ಲ. ಅಲ್ಲಿ ಆ ಹುದ್ದೆಯಲ್ಲಿದ್ದ ಶೈನಾಮೋಳ್ ಎನ್ನುವವರ ಚಿತ್ರವನ್ನೇ ಒಂದಷ್ಟು ತಿರುಚಿ, ಈ ನಕಲಿ ಕತೆಯೊಟ್ಟಿಗೆ ಸೇರಿಸಿ ಹರಿಯಬಿಡಲಾಗಿದೆ. ಶೈನಾಮೋಳ್ ಜಾರ್ಖಂಡ್ನವರಲ್ಲ, ಕೇರಳ ಮೂಲದವರು.

ಯಾವಾಗ ಈ ಪೋಸ್ಟ್ ಇನ್ನಿಲ್ಲದಂತೆ ವೈರಲ್ ಆಗತೊಡಗಿತೋ ಅಸಲಿ ಕತೆ ಹುಡುಕಿ ಹೊರಟವರು ಬಂದು ನಿಂತದ್ದು ಹಕೀಂ ಮೊರಯೂರ್ ಎನ್ನುವ ಕೇರಳದ ಕತೆಗಾರನ ಬಳಿ. ಹಕೀಂ ತಮ್ಮ ಕಿರುಕತೆಗಳ ಸಂಕಲನ ‘ತ್ರೀ ವಿಮೆನ್’ನ ‘ಶೈನಿಂಗ್ ಫೇಸಸ್’ ಎನ್ನುವ ಕತೆಯಲ್ಲಿ ಸೃಷ್ಟಿಸಿದ ಪಾತ್ರವೇ ರಾಣಿ ಮೋಯ್! ತಮ್ಮ ಕತೆ ಚರ್ವಿತಚರ್ವಣವಾಗಿ ಹೀಗೆ ಆನ್ಲೈನ್ ಗೋಡೆಗಳಿಗೆ ಆಹಾರವಾದದ್ದನ್ನು ಕಂಡು ನಗಬೇಕೋ ಅಳಬೇಕೋ ತಿಳಿಯದಾದ ಹಕೀಂ, ಕಡೆಗೆ ಸ್ವತಃ ಫೇಸ್ಬುಕ್ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಏನೇ ಆದರೂ ಹೀಗೆ ನಕಲಿ ಕತೆ ಸೃಷ್ಟಿಸುವುದನ್ನು ಸರ್ವಥಾ ಒಪ್ಪಲಾಗದು ಎಂದು ಅಸಮಾಧಾನ ಹೊರಹಾಕಿದ್ದಾರೆ. ಅದಾಗಿ ಸುಮಾರು ಮೂರು ವರ್ಷಗಳೇ ಗತಿಸಿದ್ದರೂ ಈ ನಕಲಿ ಕತೆ ಮಾತ್ರ ಈಗಲೂ ಆ ಗೋಡೆಗಳ ಮೇಲೆ ಆಗಾಗ್ಗೆ ಇಣುಕುತ್ತಲೇ ಇರುತ್ತದೆ, ಲೈಕ್ ಬಟನ್ ಒತ್ತಿಸಿಕೊಳ್ಳುತ್ತಲೇ ಇರುತ್ತದೆ, ಹೊಗಳಿಕೆಯ ಸುರಿಮಳೆಯೊಂದಿಗೆ ಮೋಯ್ಗೆ ‘ರಾಣಿ’ಯ ಪಟ್ಟ ದಕ್ಕಿಸಿಕೊಡುತ್ತಲೇ ಇರುತ್ತದೆ.

ಜಿಲ್ಲಾಧಿಕಾರಿಯಂತಹ ಪ್ರಮುಖ ಹುದ್ದೆಯನ್ನೂ ಬಿಡದೆ, ಅದನ್ನೂ ಪ್ರಚಾರದ ಹಪಹಪಿಗೆ ಬಳಸಿಕೊಳ್ಳುವ ನಿರ್ಭಾವುಕರಿಗೆ ಇದೊಂದು ತಮಾಷೆಯ ಸಂಗತಿ ಆಗಿರಬಹುದು. ಆದರೆ, ಕಡುಕಷ್ಟದಲ್ಲಿ ಬದುಕು ಅರಳಿಸಿಕೊಂಡವರಿಗಾಗಿ ಮಿಡಿಯುವ, ಅವರಿಗೆ ನೈತಿಕ ಬೆಂಬಲದ ಹೆಗಲೆಣೆಯಾಗ ಬಯಸುವ ಸಹೃದಯರ ಪಾಲಿಗೆ ಮಾತ್ರ ಇದೊಂದು ಅಕ್ಷಮ್ಯವಾದ ವಿಶ್ವಾಸಘಾತುಕ ಕೃತ್ಯವೇ ಹೌದು.

ಇಲ್ಲಿದೆ ಅಸಲಿ ಕತೆ..

ಯಾವಾಗ ‘ಜಿಲ್ಲಾಧಿಕಾರಿ’ ರಾಣಿ ಸೋಯಾಮೋಯ್ ಅವರಿಗೆ ಸಂಬಂಧಿಸಿದ ಪೋಸ್ಟ್ ಇನ್ನಿಲ್ಲದಂತೆ ವೈರಲ್ ಆಗತೊಡಗಿತೋ ಅಸಲಿ ಕತೆ ಹುಡುಕಿ ಹೊರಟವರು ಬಂದು ನಿಂತದ್ದು ಹಕೀಂ ಮೊರಯೂರ್ ಎನ್ನುವ ಕೇರಳದ ಕತೆಗಾರನ ಬಳಿ. ಹಕೀಂ ತಮ್ಮ ಕಿರುಕತೆಗಳ ಸಂಕಲನ ‘ತ್ರೀ ವಿಮೆನ್’ನ ‘ಶೈನಿಂಗ್ ಫೇಸಸ್’ ಎನ್ನುವ ಕತೆಯಲ್ಲಿ ಸೃಷ್ಟಿಸಿದ ಪಾತ್ರವೇ ರಾಣಿ ಮೋಯ್!

ತಮ್ಮ ಕತೆ ಚರ್ವಿತಚರ್ವಣವಾಗಿ ಹೀಗೆ ಆನ್ಲೈನ್ ಗೋಡೆಗಳಿಗೆ ಆಹಾರವಾದದ್ದನ್ನು ಕಂಡು ನಗಬೇಕೋ ಅಳಬೇಕೋ ತಿಳಿಯದಾದ ಹಕೀಂ, ಕಡೆಗೆ ಫೇಸ್ಬುಕ್ನಲ್ಲಿ ಸ್ಪಷ್ಟನೆಯನ್ನೇ ಕೊಟ್ಟರು. ಏನೇ ಆದರೂ ಹೀಗೆ ನಕಲಿ ಕತೆ ಸೃಷ್ಟಿಸುವುದನ್ನು ಸರ್ವಥಾ ಒಪ್ಪಲಾಗದು ಎಂದು ಅಸಮಾಧಾನ ಹೊರಹಾಕಿದರು. ಅದಾಗಿ ಸುಮಾರು ಮೂರು ವರ್ಷಗಳೇ ಗತಿಸಿದ್ದರೂ ಈ ನಕಲಿ ಕತೆ ಮಾತ್ರ ಈಗಲೂ ಆ ಗೋಡೆಗಳ ಮೇಲೆ ಆಗಾಗ್ಗೆ ಇಣುಕುತ್ತಲೇ ಇರುತ್ತದೆ, ಲೈಕ್ ಬಟನ್ ಒತ್ತಿಸಿಕೊಳ್ಳು
ತ್ತಲೇ ಇರುತ್ತದೆ, ಹೊಗಳಿಕೆಯ ಸುರಿಮಳೆಯೊಂದಿಗೆ ಸೋಯಾ ಮೋಯ್ಗೆ ‘ರಾಣಿ’ಯ ಪಟ್ಟ ದಕ್ಕಿಸಿಕೊಡುತ್ತಲೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.