Menstrual Tips: ಶುಚಿ ಕಾಳಜಿಯ ಆ ದಿನಗಳಿಗೆ ಆಯ್ಕೆಗಳು ಹಲವು
ಸಿಂಧು ಕೆ.ಟಿ.
Published : 2 ಮೇ 2025, 23:30 IST
Last Updated : 2 ಮೇ 2025, 23:30 IST
ಫಾಲೋ ಮಾಡಿ
Comments
ಭಾರತದಲ್ಲಿ ಶೇ 76.15 ಮಹಿಳೆಯರು ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ. ನಗರ ಪ್ರದೇಶಗಳಿಗಿಂತ (ಶೇ 89.37) ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಉತ್ಪನ್ನಗಳ ಬಳಕೆ (ಶೇ 72.32) ಕಡಿಮೆಯಿದೆ ಎಂದು ಅದು ತಿಳಿಸಿದೆ.
18 ವರ್ಷ ಮೇಲ್ಪಟ್ಟವರು ಮಾತ್ರ ಮುಟ್ಟಿನ ಕಪ್‌ಗಳನ್ನು ಬಳಸುವುದು ಸೂಕ್ತ. ಚಿಕ್ಕ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳಿಗಿಂತ ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳನ್ನು ಬಳಸುವುದು ಉತ್ತಮ. ಮುಟ್ಟಿನ ದಿನಗಳಲ್ಲಿ ವೈಯಕ್ತಿಕ ಶುಚ್ಚಿತ್ವದ ಕಡೆ ಹೆಚ್ಚು ಗಮನವಹಿಸಬೇಕು.
–ಡಾ. ವೀಣಾ ಎನ್., ಸ್ತ್ರೀರೋಗ ತಜ್ಞರು – ಸುಳ್ಳ
ಸ್ಯಾನಿಟರಿ ಪ್ಯಾಡ್, ಕಪ್‌ಗಳ ಬಳಕೆ ಹೆಚ್ಚಿದ್ದು, ಮರುಬಳಕೆ ಮಾಡಬಹುದಾದ ಪ್ಯಾಡ್‌ಗಳು ಮತ್ತು ಹೊಸದಾಗಿ ಬರುತ್ತಿರುವ ಪಿರಿಯಡ್ ಪ್ಯಾಂಟಿಸ್‌ಗಳನ್ನು ಕೂಡ ಬಳಸುತ್ತಿದ್ದಾರೆ. ಭಾರತಕ್ಕಿಂತ ವಿದೇಶಗಳಲ್ಲಿ ಟ್ಯಾಂಪೂನ್ ಮತ್ತು ಡಿಸ್ಕ್‌ಗಳ ಬಳಕೆ ಹೆಚ್ಚಿದೆ. ಸ್ವಚ್ಛವಾದ ಬಟ್ಟೆ ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಹರಿವಿನ ಮಟ್ಟ, ಕಂಫರ್ಟ್ ಪರಿಗಣಿಸಿ ನಿಮಗೆ ಹೊಂದುವ ಸೂಕ್ತ ಉತ್ಪನ್ನವನ್ನು ಆಯ್ಕೆ ಮಾಡಿ. ಉತ್ಪನ್ನದ ಬಳಕೆ ಯಾವುದೇ ಆದರೂ ನೈರ್ಮಲ್ಯದ ಕಡೆ ಹೆಚ್ಚು ಒತ್ತು ನೀಡುವುದು ಅವಶ್ಯಕ. ನಿಗದಿತ ಸಮಯಕ್ಕೆ ಅವುಗಳನ್ನು ಬದಲಾಯಿಸುವುದು ಸೇರಿದಂತೆ ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ಇತರೆ ಅಡ್ಡಪರಿಣಾಮಗಳಿಂದ ದೂರವಿರಬಹುದು.