ಇಷ್ಟಪಟ್ಟು ಮಾಡಿದರೆ ಕಷ್ಟವೊಂದಿಷ್ಟಿರದು. ಮನಸ್ಸು ಮಾಡಿದರೆ ಸಾಧನೆ ಸುಲಭ ಎಂಬ ಮಾತಿಗೆ ಚೈತನ್ಯಾ ಉಪಾಧ್ಯಾಯರು ಉದಾಹರಣೆಯಾಗುತ್ತಾರೆ. ಮಗಳು ಸನ್ನಿಧಿ ಜೊತೆಗೆ ರಂಗಪ್ರವೇಶವನ್ನೂ ಮಾಡಿ ಭೇಷ್ ಎನಿಸಿಕೊಂಡರು
ರಂಗಪ್ರವೇಶದಲ್ಲಿ ಚೈತನ್ಯಾ ಉಪಾಧ್ಯಾಯ–ಸನ್ನಿಧಿ ರಾವ್
‘ಭರತನಾಟ್ಯವನ್ನು ಎಲ್ಲ ವಯಸ್ಸಿನವರೂ ಕಲಿಯಬಹುದು. ಆದರೆ ಕೆಲವು ವಿಚಾರದಲ್ಲಿ ಕಲಿಕೆ ವೇಳೆ ಮಧ್ಯ ವಯಸ್ಸು ಅಡ್ಡಿಯನ್ನುಂಟು ಮಾಡಲಿದೆ. ದೇಹ ಸುಲಭವಾಗಿ ಬಾಗದು. ನೆನಪಿನ ಕೊರತೆ, ಎಲುಬಿನ ಸಾಂದ್ರತೆ ಕಡಿಮೆಯಾಗಿ ನಿರಂತರ ನೃತ್ಯಕ್ಕೆ ಸುಸ್ತು ಕಾಡಲಿದೆ. ರಂಗಪ್ರವೇಶದಲ್ಲಿ ಎರಡೂವರೆ ತಾಸು ಕಾಲ ನೃತ್ಯ ಮಾಡಬೇಕಿರುವುದರಿಂದ ದೇಹ ಕೂಡ ಅದಕ್ಕೆ ಸಹಕರಿಸಬೇಕು. ಅದರಲ್ಲೂ ಇಲ್ಲಿ ಮಗಳ ನೃತ್ಯಕ್ಕೆ ಸರಿಸಮಾನವಾಗಿ ಅಮ್ಮನ ಹಾವಭಾವವೂ ಜೊತೆಯಾಗಬೇಕು. ಅದಕ್ಕಾಗಿ ಅಷ್ಟೇ ಕಠಿಣ ಪ್ರಾಕ್ಟೀಸ್ ಮಾಡುವುದು ತೀರಾ ಅಗತ್ಯ. ಅದನ್ನು ಸವಾಲಾಗಿ ಸ್ವೀಕರಿಸಿ ಚೈತನ್ಯಾ ಉಪಾಧ್ಯಾಯ ಅವರು ಯಶಸ್ಸು ಕಂಡಿದ್ದಾರೆ’
ಸುಜಯ್ ಶಾನಭಾಗ, ಕಲಾಸುಜಯದ ನೃತ್ಯಗುರು
ಅಮ್ಮ ಚೈತನ್ಯಾ ಉಪಾಧ್ಯಾಯ–ಮಗಳು ಸನ್ನಿಧಿ ರಾವ್
ಗುರು ವಿದ್ವಾನ್ ಸುಜಯ್ ಶಾನಭಾಗ ಅವರೊಂದಿಗೆ ಚೈತನ್ಯಾ ಉಪಾಧ್ಯಾಯ–ಸನ್ನಿಧಿ ರಾವ್