ಹಲವು ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೆಣ್ಣಿಗಿದೆ. ಮನೆ, ಕುಟುಂಬ ಮಾತ್ರವಲ್ಲದೆ ಉದ್ಯಮಿಯಾಗಿ ಕೆಲಸದ ಸ್ಥಳದಲ್ಲಿ ಪ್ರೋತ್ಸಾಹಕರ ವಾತಾವರಣ ನಿರ್ಮಿಸುವುದರಿಂದ ಹಿಡಿದು ದೂರ ದೃಷ್ಟಿಕೋನದ ಯೋಜನೆಯನ್ನು ರೂಪಿಸುವ ಧೀಮಂತಿಕೆ ಮಹಿಳೆಯದ್ದು ಎನ್ನುತ್ತಾರೆ ಸುಕೂನ್ ಅನ್ಲಿಮಿಟೆಡ್ ಸಂಸ್ಥೆಯ ಸ್ಥಾಪಕಿ ವಿಭಾ ಸಿಂಘಾಲ್.

ಕೋಲ್ಕತ್ತ ಮೂಲದ ವಿಭಾ, ಎಂಬಿಎ ಪದವೀಧರೆ. ಐದಕ್ಕೂ ಹೆಚ್ಚು ಐ.ಟಿ ಕಂಪನಿಗಳಲ್ಲಿ ಕೆಲಸ ಮಾಡಿದ ಬಳಿಕ 2024ರಲ್ಲಿ ಹಿರಿಯರ ಆರೈಕೆಗಾಗಿ ಸುಕೂನ್ ಅನ್ಲಿಮಿಟೆಡ್ ಎನ್ನುವ ಸಂಸ್ಥೆ ಆರಂಭಿಸಿ ಮುನ್ನಡೆಸುತ್ತಿದ್ದಾರೆ.

‘ಒಂಟಿತನ ಎನ್ನುವುದು ಯಾವ ವಯಸ್ಸಿನಲ್ಲಾದರೂ ಕಾಡಬಹುದು. ಆದರೆ ವಯಸ್ಸಾದ ಮೇಲೆ ಕಾಡುವ ಒಂಟಿತನವನ್ನು ಅಥವಾ ಮಾನಸಿಕ ಖಿನ್ನತೆಯನ್ನು ಹೊರಗಿನ ಪ್ರಪಂಚಕ್ಕೆ ತೋರಿಸಿಕೊಳ್ಳಲು ಹಿರಿಯರು ಹಿಂಜರಿಯುತ್ತಾರೆ. ಅದು ನನಗೆ ಅರ್ಥವಾಗಿದ್ದು ನನ್ನ ತಂದೆಯ ಕಾಲಾನಂತರ. ಕೋವಿಡ್ ಸಮಯದಲ್ಲಿ ನನ್ನ ತಂದೆಯನ್ನು ಕಳೆದುಕೊಂಡೆ. ಜೀವನೋತ್ಸಾಹಿಯಾಗಿದ್ದ ಅವರನ್ನು ಕಳೆದುಕೊಂಡ ಮೇಲೆ ನನ್ನ ತಾಯಿ ಒಂಟಿಯಾದರು. ಮೂರು ದಶಕಗಳಿಗೂ ಹೆಚ್ಚು ಕಾಲ ಒಟ್ಟಿಗಿದ್ದ ಜೀವ ದೂರಾದ ನೋವು ಅವರನ್ನು ಕಾಡುತ್ತಿತ್ತು. ಕುಟುಂಬ ಸದಸ್ಯರೊಂದಿಗೆ ಮುಕ್ತ ಸಂಭಾಷಣೆಗೂ ಒಗ್ಗಿಕೊಳ್ಳುತ್ತಿರಲಿಲ್ಲ. ಇದನ್ನು ನೋಡಿ ಈ ರೀತಿಯ ಅನೇಕ ಕುಟುಂಬಗಳಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡು ಒಂಟಿತನ ಎದುರಿಸುತ್ತಿದ್ದಾರೆ ಎನ್ನುವುದು ನನ್ನ ಅರಿವಿಗೆ ಬಂದಿತ್ತು. ಅಂಥ ಸಂದರ್ಭಗಳಲ್ಲಿ ಅವರಿಗೆ ಬೇಕಾಗಿರುವುದು ಅನುಕಂಪವಲ್ಲ, ಸಹಾನುಭೂತಿ ಮತ್ತು ಬೆಂಬಲ ಎನ್ನುವುದು ಅರ್ಥವಾಗಿತ್ತು. ನನ್ನ ಕುಟುಂಬದಲ್ಲಿ ಆದಂತೆಯೇ ಅನೇಕ ಕುಟುಂಬಗಳು ಈ ರೀತಿಯ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅರಿಯುವುದು ಕಷ್ಟವಾಗಲಿಲ್ಲ ಆಗ ಹುಟ್ಟಿಕೊಂಡಿದ್ದೇ ‘ಸುಕೂನ್ ಅನ್ಲಿಮಿಟೆಡ್’.

ತಂಡ ಮುನ್ನಡೆಸುವುದೇ ಸವಾಲು...
ಆರಂಭದಲ್ಲಿ ಬಹಳಷ್ಟು ಸವಾಲಗಳು ಎದುರಾಗಿದ್ದವು. ಈಗಲೂ ಸವಾಲುಗಳಿವೆ. ಆದರೆ ನಿರ್ವಹಿಸುವ ನಿಪುಣತೆ ಈಗ ಕರಗತವಾಗಿದೆ ಎನ್ನುವುದೇ ಖುಷಿಯ ಸಂಗತಿ. ಕಾರ್ಪೋರೇಟ್ ಕಂಪನಿಗಳಲ್ಲಿ ಒಬ್ಬ ಉದ್ಯೋಗಿಯಾಗಿ ಕೆಲಸ ಮಾಡುವಾಗ ಹೇರಳವಾದ ಸಂಪನ್ಮೂಲಗಳು ಸಿಗುತ್ತವೆ. ಅಲ್ಲದೆ ಕೆಲಸದಲ್ಲಿ ಸ್ಪಷ್ಟತೆ ಇರುತ್ತದೆ. ಆದರೆ ಸ್ವಂತ ಉದ್ಯಮ ಆರಂಭಿಸಿದಾಗ ಸರಿಯಾದ ಯೋಜನೆ, ಉದ್ದೇಶ, ಲಾಭ, ಜನರನ್ನು ತಲುಪುವ ಬಗೆ ಎಲ್ಲವನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಅವೆಲ್ಲಕ್ಕಿಂತ ನಮ್ಮೊಂದಿಗಿರುವ ತಂಡವನ್ನು ಪ್ರೇರೇಪಿಸಿ ಜತೆಯಾಗಿ ಕರೆದುಕೊಂಡು ಹೋಗುವ ಗುರುತರ ಜವಾಬ್ದಾರಿ ನನ್ನದಾಗಿತ್ತು.

ಹತಾಶೆ ಮೆಟ್ಟಿ ನಿಂತೆ...

ಸಾಮಾಜಿಕ ಉದ್ದೇಶದಿಂದ ಕಾರ್ಯನಿರ್ವಹಿಸುವ ಸುಕೂನ್ನಂತಹ ಸ್ಟಾರ್ಟ್ಅಪ್ಗಳಿಗೆ ಸರಿಯಾದ, ನಂಬಿಕಸ್ಥ ತಂಡದ ಸದಸ್ಯರ ಆಯ್ಕೆ ಅಗತ್ಯವಾಗಿರುತ್ತದೆ.

ಹೀಗಾಗಿ ಸ್ಟಾರ್ಟ್ಅಪ್ಗಳಲ್ಲಿ ತಂಡ ಕಟ್ಟುವುದೇ ಅಡಿಪಾಯ. ಎಲ್ಲವನ್ನೂ ನಿಭಾಯಿಸುವುದು ಕೆಲವೊಮ್ಮೆ ಭಾರವೆನಿಸುತ್ತದೆ. ಕೆಲವೊಮ್ಮೆ ಹತಾಶೆ ಕಾಡುವುದೂ ಉಂಟು. ಅಂತಹ ಯೋಚನೆಗಳು ತಲೆಯಲ್ಲಿ ಸುಳಿದಾಗಲೆಲ್ಲ ಈ ಪ್ರಯಾಣ ಕೇವಲ ನನ್ನದಲ್ಲ, ನನ್ನ ಉದ್ಯಮ ನಿಜವಾಗಿ ಯಾರನ್ನು ತಲುಪಬೇಕೋ ಅವರ ಬಳಿ ಸಾಗಬೇಕು ಎನ್ನುವುದನ್ನು ನೆನಪಿಸಿಕೊಂಡು ಮತ್ತೆ ಎದ್ದು ಮುಂದೆ ಸಾಗುತ್ತೇನೆ.

ಸುಕೂನ್ ಅನ್ಲಿಮಿಟೆಡ್ ಪಯಣಕ್ಕೆ ದೊಡ್ಡ ಬೆನ್ನೆಲುಬೇ ಕುಟುಂಬ. ಅದರಲ್ಲೂ ನನ್ನ ಅಜ್ಜ, ಅಜ್ಜಿ ನೀಡುವ ಪ್ರೋತ್ಸಾಹ ಇನ್ನಷ್ಟು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ನನ್ನ ಚಿಕ್ಕ ಸಾಧನೆಯನ್ನೂ ಬೆಂಬಲಿಸಿ, ಪ್ರೋತ್ಸಾಹಿಸಿ ಹೆಮ್ಮೆಪಡುತ್ತಾರೆ.

ಬೆಂಗಳೂರಿನಲ್ಲಿ ನನ್ನ ಸ್ಟಾರ್ಟ್ಅಪ್ಗೆ ಸರಿಹೊಂದುವಂತಹ ಪ್ರತಿಭೆ ಹುಡುಕುವುದು ಸುಲಭ ಎನ್ನುವ ಕಾರಣಕ್ಕೆ ಪ್ರಧಾನ ಕಚೇರಿಯನ್ನು ಬೆಂಗಳೂರಲ್ಲಿಯೇ ಆರಂಭಿಸಿದೆ. ಅದಕ್ಕಿಂತ ಮುಖ್ಯವಾಗಿ ಇಲ್ಲಿನ ಜನರ ಹೊಸ ಪ್ರಯತ್ನಕ್ಕೆ ಸಿದ್ಧರಿರುವ ಮನಸ್ಥಿತಿ ಉದ್ಯಮ ಆರಂಭಿಸುವ ಹುರುಪು ನೀಡಿತು.

ಸುಕೂನ್ ಆರಂಭಿಸಿ ಒಂದು ವರ್ಷ ಕಳೆದಿದೆ. ಎಷ್ಟೋ ಹಿರಿಯರು ಮನೆಯ ತುಂಬ ಜನರಿದ್ದರೂ, ಕುಟುಂಬದೊಂದಿಗಿದ್ದರೂ ಒಂಟಿತನದಿಂದ ಬಳಲುತ್ತಿದ್ದಾರೆ. ಒಬ್ಬಂಟಿಯಾಗಿಯೇ ಸ್ವಾವಲಂಬಿಗಳಾಗಿ ಜೀವಿಸುತ್ತಿದ್ದಾರೆ. ಜನರ ಮಧ್ಯೆ, ಕುಟುಂಬದ ಮಧ್ಯೆ ಇದ್ದಾಕ್ಷಣ ಒಂಟಿತನ ಕಾಡುವುದಿಲ್ಲ ಎನ್ನುವುದು ಸುಳ್ಳು. ಕೆಲವೊಮ್ಮೆ ಎಲ್ಲವೂ ಇದ್ದು ಏನೂ ಇಲ್ಲವೆಂಬ ಭಾವ ಆವರಿಸಬಹುದು ಎನ್ನುವುದು ಈ ಪ್ರಯಾಣ ಕಲಿಸಿರುವ ದೊಡ್ಡ ಪಾಠ.

ಉದ್ಯಮಿಯಾಗುವ ಅಥವಾ ಸ್ಟಾರ್ಟ್ಅಪ್ಗಳನ್ನು ಆರಂಭಿಸುವ ಮಹಿಳೆಯರಿಗೆ ಹೇಳುವುದಿಷ್ಟೇ... ನಿಮ್ಮನ್ನು ನೀವು ಮೊದಲು ನಂಬಿ. ಸಾಧಿಸಲು ಸಾಧ್ಯವಾಗದೇ ಇರುವುದು ಯಾವುದೂ ಇಲ್ಲ. ಅಗತ್ಯವಿದ್ದಾಗ ಆಪ್ತರ ನೆರವು ಕೇಳಿ. ಸಹಾಯಕ್ಕೆ ಸಾಕಷ್ಟು ಹಸ್ತಗಳಿವೆ. ಆದರೆ ನೀವು ಕೈಯೊಡ್ಡಿ ಕೇಳಬೇಕಷ್ಟೆ.
ವಿಭಾ ಸಿಂಘಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.